ಹಾವೇರಿಯಲ್ಲಿ ಭೀಕರ ಅವಘಡ, ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಹರಿದ ಬಸ್, ತಲೆ ಪೀಸ್, ಪೀಸ್..!

ಹಾವೇರಿ: ರಸ್ತೆ ದಾಟುವ ವೇಳೆ ಸಾರಿಗೆ ಬಸ್ ಗೆ ಸಿಕ್ಕು ಮಹಿಳೆ ದಾರುಣ ಸಾವು ಕಂಡ ಘಟನೆ, ಹಾವೇರಿ ನಗರದ ವಾಲ್ಮೀಕಿ‌ ವೃತ್ತದ ಬಳಿ ನಡೆದಿದೆ.

ಹುಬ್ಬಳ್ಳಿ ಯಿಂದ ಹಾವೇರಿಯತ್ತ ಬರುತ್ತಿದ್ದ ಸಾರಿಗೆ ಬಸ್ ಗೆ, ಹಾವೇರಿಯ ಇಜಾರಿ ಲಕಮಾಪುರದ ನಿವಾಸಿ ಜಯಮ್ಮ ಕೂಳೇನೂರ (31) ಎಂಬುವವರು ಸಾವು ಕಂಡಿದ್ದಾರೆ. ಸರ್ಕಾರಿ ಮಹಿಳಾ ಹಾಸ್ಟೆಲ್ ನಲ್ಲಿ ಅಡುಗೆ ಕೆಲಸ ಮಾಡ್ತಿದ್ದ ಮೃತ ಮಹಿಳೆ, ಪತಿ ರಸ್ತೆ ಪಕ್ಕ ನಿಂತು ಕರೆದ ಹಿನ್ನಲೆ ರಸ್ತೆ ದಾಟಲು ಹೋಗಿದ್ದರು. ಹೀಗಾಗಿ, ದುರಂತ ಸಂಭವಿಸಿದೆ. ಹಾವೇರಿ ನಗರ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದುರ್ಘಟನೆ ನಡೆದಿದೆ.

error: Content is protected !!