ಮುಂಡಗೋಡ ತಾಲೂಕಿನಲ್ಲಿ ನಿರಂತರ ಮಳೆ ಹಿನ್ನೆಲೆಯಲ್ಲಿ ತಾಲೂಕಾಡಳಿತದಿಂದ ಹಲವು ಎಚ್ಚರಿಕೆಯ ಪ್ರಕಟಣೆ ನೀಡಲಾಗಿದೆ. ಮುಂಡಗೋಡ ಪಟ್ಟಣ ಸೇರಿದಂತೆ, ತಾಲೂಕಿನ ಗ್ರಾಮೀಣ ಭಾಗದ ಜನರು ಹಲವು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸೂಚನೆ ನೀಡಲಾಗಿದೆ.
ಏನು ಎಚ್ಚರಿಕೆ.? ಏನದು ಪ್ರಕಟಣೆ?
ಶಿಥಿಲಾವಸ್ಥೆಯ ಮನೆಯಲ್ಲಿ ವಾಸ ಬೇಡ..!
ತಾಲೂಕಾಧ್ಯಂತ, ಸದ್ಯ ನಿರಂತರ ಮಳೆ ಆಗುತ್ತಿರುವ ಕಾರಣ ತಾಲ್ಲೂಕಿನ ಗ್ರಾಮಗಳ ಮತ್ತು ಮುಂಡಗೋಡ ಪಟ್ಟಣದ ಸಾರ್ವಜನಿಕರು ನಿಮ್ಮ ಮನೆ ಮಳೆಯಿಂದ ಸೋರುವ, ಬೀಳುವ ಹಂತದಲ್ಲಿ ಇದ್ದರೆ, ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಅಂತಹ ಮನೆಯಲ್ಲಿ ವಾಸ ಮಾಡಬಾರದು.
ಸುರಕ್ಷಿತ ಮನೆಗಳಿಗೆ, ಸಂಬಂಧಿಕರ ಮನೆಗಳಿಗೆ ಹೋಗಬೇಕು. ನಿಮ್ಮ ಮನೆ ಮಳೆಯಿಂದ ಹಾನಿ ಆಗಿದ್ದಲ್ಲಿ, ಸೋರುವ ಶಿಥಿಲ ಸ್ಥಿತಿಯಲ್ಲಿ ಇದ್ದಲ್ಲಿ ಕೂಡಲೇ ನಿಮ್ಮ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO)ಅಥವಾ ಗ್ರಾಮ ಆಡಳಿತ ಅಧಿಕಾರಿ( VAO) ಗಮನಕ್ಕೆ ತರಬೇಕು.
ಬದಲಿ ವ್ಯವಸ್ಥೆಗೆ ಕ್ರಮ..!
ನಿರಂತರ ಮಳೆಯಿಂದ ಮನೆ ಸೋರುವುದು, ಹಾನಿ ಆಗಿರುವುದು ಇದ್ದಲ್ಲಿ, ತಮ್ಮ ವಾಸಕ್ಕೆ ಬೇರೆ ವ್ಯವಸ್ಥೆ ಮಾಡಲಾಗುವುದು. ಈ ಕುರಿತು ಸ್ಥಳೀಯ ಅಧಿಕಾರಿಗಳ ಗಮನಕ್ಕೆ ತರಬೇಕು ಅಂತಾ ಸೂಚನೆ ನೀಡಿರೋ ತಾಲೂಕಾಡಳಿತ ಸಹಾಯವಾಣಿ ತೆರೆದಿದೆ.
ಅತಿವೃಷ್ಟಿಯ ಕಾರಣ ತಾವು ಏನಾದ್ರೂ ಸಮಸ್ಯೆಗಳನ್ನು ಹೊಂದಿದ್ದರೆ, ತಹಶೀಲ್ದಾರ್ ಕಚೇರಿಯ ಸಹಾಯವಾಣಿ 08301-222122 ದೂರವಾಣಿ ಸಂಖ್ಯೆಗೆ ಕರೆ ಮಾಡಿ ತಿಳಿಸಬೇಕು. ತಹಶೀಲ್ದಾರ್ ಅವರ ಮೊಬೈಲ್ ಪೋನ್ ಸಂಖ್ಯೆ: 9164874231ಗೂ ಕರೆ ಮಾಡಿ ತಿಳಿಸಬಹುದು ಅಂತಾ ತಹಶೀಲ್ದಾರ್ ಶಂಕರ ಗೌಡಿ, ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ, ಟಿ.ವೈ. ದಾಸನಕೊಪ್ಪ, ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಚಂದ್ರಶೇಖರ್ ಜಂಟೀ ಪ್ರಕಟಣೆ ಹೊರಡಿಸಿದ್ದಾರೆ.