ನಿರಂತರ ಮಳೆಗೆ ಸವಣೂರಿನಲ್ಲಿ ಭಾರೀ ದುರಂತ, ಮನೆ ಕುಸಿದು ಎರಡು ಕಂದಮ್ಮಗಳು ಸೇರಿ ಮೂವರ ಸಾವು..!

ಸವಣೂರು; ನಿರಂತರ ಮಳೆ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನಲ್ಲಿ ದುರಂತ ಸಂಭವಿಸಿದೆ. ಜಿಟಿ ಜಿಟಿ ಮಳೆಗೆ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಸೇರಿ ಓರ್ವ ಮಹಿಳೆ ಸಾವು ಕಂಡಿದ್ದಾಳೆ.

ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಅಮೂಲ್ಯ & ಅನನ್ಯ ಎರಡು 2 ವರ್ಷದ ಅವಳಿ ಜವಳಿ ಕಂದಮ್ಮಗಳು ಹಾಗೂ ಚೆನ್ನಮ್ಮ(30) ಸಾವು ಕಂಡಿದ್ದಾರೆ., ಘಟನೆಯಲ್ಲಿ ಮುತ್ತು, ಸುನೀತ ಎಂಬುವವರಿಗೆ ಗಾಯವಾಗಿದೆ.

ಹಾವೇರಿ ಜಿಲ್ಲೆಯ ಸವಣೂರಿ ತಾಲೂಕಿನ ಮಾದಾಪುರ ಗ್ರಾಮದಲ್ಲಿ ಬೆಳಗಿನ ಜಾವದಲ್ಲಿ ಘಟನೆ ನಡೆದಿದ್ದು, ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಜನರು ಧಾವಿಸಿ ರಕ್ಷಣೆ ಮಾಡಿದ್ದಾರೆ. ಮೃತ ದೇಹಗಳನ್ನು ಹೊರ ತೆಗೆದಿದ್ದಾರೆ.

ಇನ್ನು ಗಾಯಳುಗಳನ್ನು ಸವಣೂರು ತಾಲೂಕ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!