ಗೋಟಗೋಡಿಕೊಪ್ಪ ಕ್ರಾಸ್ ಬಳಿ ಸರಣಿ ಅಪಘಾತ, ನಿಂತಿದ್ದ ಕಾರು, ಬೈಕ್ ಗೆ ಗುದ್ದಿದ ಕಾರು..! ಎರಡು ಕಾರುಗಳು, ಒಂದು ಬೈಕ್ ಜಖಂ


ಮುಂಡಗೋಡ ತಾಲೂಕಿನ ಗೋಟಗೋಡಿಕೊಪ್ಪ ಕ್ರಾಸ್ ಬಳಿ ನಿಂತಿದ್ದ ಕಾರ್ ಹಾಗೂ ಬೈಕಿಗೆ ಕಾರ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಹಾಗೂ ಕಾರು ನುಜ್ಜುಗುಜ್ಜಾದ ಘಟನೆ ನಡೆದಿದೆ.

ನಿರಂತರ ಮಳೆಯ ಪರಿಣಾಮ ಗೋಟಗೋಡಿಕೊಪ್ಪ ಕ್ರಾಸ್ ಬಳಿ ರಸ್ತೆ ಮೇಲೆ ಮರ ಬಿದ್ದಿದೆ. ಹೀಗಾಗಿ, ಅರಣ್ಯ ಇಲಾಖೆ ಸಿಬ್ಬಂದಿಗಳು ಮರ ತೆರವು ಕಾರ್ಯಾಚರಣೆ ಮಾಡ್ತಿದ್ದರು. ಈ ವೇಳೆ ರಸ್ತೆ ಸಂಚಾರ ಕೆಲಹೊತ್ತು ಬಂದ್ ಆಗಿತ್ತು. ಇದೇ ಸಂದರ್ಭದಲ್ಲಿ ಸಾಲುಗಟ್ಟಿ ವಾಹನಗಳು ನಿನಮತಿದ್ದವು. ಹೀಗಿರುವಾಗ, ಏಕಾಏಕಿ ಬಂದ ಕಾರ್, ಎದುರು ನಿಂತಿದ್ದ ಕಾರ್ ಹಾಗೂ ಬೈಕಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಪರಿಣಾಮ, ಕಾರು ಮುಂದೆ ನಿಂತಿದ್ದ ಲಾರಿಗೆ ಹೋಗಿ ಗುದ್ದಿ ಘಟನೆ ಸಂಭವಿಸಿದೆ‌.

ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!