ಮುಂಡಗೋಡ: ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ. ಕೇವಲ ಮೀಸಲಾತಿ ಮಾತ್ರ ಪ್ರಕಟವಾಗಿದೆ. ಆದ್ರೆ ಇಷ್ಟರೊಳಗೆ ಮುಂಡಗೋಡ ತಾಲೂಕಿನಾಧ್ಯಂತ ಇನ್ನಿಲ್ಲದ ರಾಜಕೀಯ ಚರ್ಚೆಗಳು ಶುರುವಾಗಿವೆ. ತಾಲೂಕಿನಲ್ಲಿರೋ ಮೂರು ಜಿಪಂ ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಪಡೆಯಲು “ಬಹುಪರಾಕ್” ಸಂಪ್ರದಾಯಗಳು ಚಾಲ್ತಿ ಪಡೆದುಕೊಂಡಿವೆ. ಎಲ್ಲವೂ ಟಿಕೆಟ್ ಗಾಗಿ..! ಅದ್ರಲ್ಲೂ, ಬಿಜೆಪಿ ಪಾಳಯದಲ್ಲಂತೂ ಈಗಾಗಲೇ ನಂಗೇ ಟಿಕೆಟ್ ಕೊಡಿ ಅಂತಾ ಸಚಿವರ ಎದುರು ಇನ್ನಿಲ್ಲದ ಒತ್ತಡಗಳನ್ನ ಹಾಕಲಾಗ್ತಿದೆ. ಕೆಲವೊಬ್ರು ಪ್ರತ್ಯಕ್ಷವಾಗಿ ಒತ್ತಡ ಹೇರುತ್ತಿದ್ರೆ, ಇನ್ನೂ ಕೆಲವರು ತಮ್ಮ ಪ್ರಾಭಲ್ಯದ ಕತೆ ಹೇಳಿ ಪರೋಕ್ಷವಾಗಿ ಸಚಿವರಿಗೆ ಸುದ್ದಿ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ. ಇದು ಸ್ಪೋಟಕ ಚರ್ಚೆ..! ಈ ನಡುವೆಯೇ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಬಿಜೆಪಿಯ ಯುವ ನಾಯಕರೋರ್ವರು ಇದೇ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕವೇ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಡಲಿದ್ದಾರೆ....
Top Stories
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಚಲಿಸುತ್ತಿದ್ದ ಕಾರು ನೋಡ ನೋಡುತ್ತಿದ್ದಂತೆ ಬೆಂಕಿಗೆ ಆಹುತಿ..! ಕಾರಲ್ಲಿ ಇದ್ದವರ ಗತಿ ಏನಾಯ್ತು..?
ಹುಬ್ಬಳ್ಳಿ: ಚಲಿಸುತ್ತಿದ್ದ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ, ಬ್ರಿಜಾ ಕಾರು ನಡುರಸ್ತೆಯಲ್ಲೇ ಹೊತ್ತಿ ಉರಿದು ಬೆಂಕಿಗೆ ಆಹುತಿಯಾದ ಘಟನೆ ಹುಬ್ಬಳ್ಳಿ-ಧಾರವಾಡ ರಸ್ತೆಯ ನವನಗರದ ಬಳಿ ನಡೆದಿದೆ. ಕಾರಿನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದ್ದು, ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಕಾರಿನಿಂದ ಕೆಳಗಿಳಿದು ಇಬ್ಬರೂ ಪಾರಾಗಿದ್ದಾರೆ. ಸ್ಥಳಕ್ಕೆಅಗ್ನಿಶಾಮಕ ದಳದ ಸಿಬ್ಬಂದಿಗಳು ಹಾಗೂ ನವನಗರ ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ದೇವಾಲಯಗಳಲ್ಲಿ ಇಂದಿನಿಂದ ಭಕ್ತರಿಗೆ ದರ್ಶನ ಭಾಗ್ಯ..!
ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ದೇವಸ್ಥಾನಗಳ ಬಾಗಿಲು ಓಪನ್ ಆಗ್ತಿವೆ. ಕಳೆದ ಎರಡು ತಿಂಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಶಿರಸಿ ಮಾರಿಕಾಂಬಾ, ಗೋಕರ್ಣ ಮಹಾಬಲೇಶ್ವರ, ಮುರ್ಡೆಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ ಭಾಗ್ಯ ಸಿಗಲಿದೆ. ಜಿಲ್ಲೆಯಲ್ಲಿ ಇಂದು ಓಪನ್ ಆದ ದೇಗುಲಗಳನ್ನು ದರ್ಶನ ಮಡ್ಕೊಬೇಕಾ..? ಹಾಗಾದ್ರೆ ಈ ಕೆಂಪು ಅಕ್ಷರಗಳ ಮೇಲೆ ಜಸ್ಟ್ ಕ್ಲಿಕ್ ಮಾಡಿ..! ಶಿರಸಿ ಮಾರಿಕಾಂಬೆ ದರ್ಶನ ಭಾಗ್ಯ..! ಹಾಗೇನೆ, ಇಂದಿನಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಾಲಯ ಭಕ್ತರಿಗೆ ಮುಕ್ತವಾಗಿದೆ. ಹಾಗೆಯೇ, ಶಿರಸಿಯ ಪ್ರಸಿದ್ಧ ದೊಡ್ಡ ಗಣಪತಿ ದೇವಾಲಯದಲ್ಲೂ ಕೂಡ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ. ಅದೇ ರೀತಿ ಕರ್ನಾಟಕದ ಏಕೈಕ ಕನ್ನಡ ತಾಯಿಯ ದೇಗುಲ, ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ದೇಗುಲದಲ್ಲಿಯೂ...
ಮುಂಡಗೋಡಿನ “ಅನಾಸಾಗರ್” ಇಸ್ಮಾಯಿಲ್ ಇನ್ನು ನೆನಪು ಮಾತ್ರ..!
ಮುಂಡಗೋಡ: ಪಟ್ಟಣದಲ್ಲಿ ಪ್ಲೈವುಡ್ ಹಾಗೂ ಹಾರ್ಡವೇರ್ ಟ್ರೇಡರ್ಸ್ ನಡೆಸುತ್ತಿದ್ದ ಇಸ್ಮಾಯಿಲ್ ದೊಡ್ಮನಿ (40) ರವಿವಾರ ರಾತ್ರಿ ನಿಧನರಾಗಿದ್ದಾರೆ. ಅನಾಸಾಗರ್ ಅಂತಲೇ ತಾಲೂಕಿನಲ್ಲಿ ಖ್ಯಾತಿ ಪಡೆದಿದ್ದ ಇಸ್ಮಾಯಿಲ್, ಮುಂಡಗೋಡಿನಲ್ಲಿ ಅಪಾರ ಸ್ನೇಹ ಬಳಗವನ್ನು ಹೊಂದಿದ್ದರು. ಕಳೆದ ಕೆಲ ದಿನಗಳಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಅನಾಸಾಗರ್, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇತ್ತಿಚೆಗಷ್ಟೇ ಇಸ್ಮಾಯಿಲ್ ರವರ ತಾಯಿ ಅನಾರೋಗ್ಯದಿಂದ ನಿಧನರಾಗಿದ್ದರು. ಇಸ್ಮಾಯಿಲ್ ನಿಧನಕ್ಕೆ ಮುಂಡಗೋಡಿನ ಅಪಾರ ಸ್ನೇಹ ಬಳಗ ಸಂತಾಪ ಸೂಚಿಸಿದೆ.
ಹೊನ್ನಾವರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆ, ಓರ್ವ ನಾಪತ್ತೆ, ಮೂವರ ರಕ್ಷಣೆ..!
ಹೊನ್ನಾವರ: ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ನಾಡದೋಣಿ ಮುಳುಗಡೆಯಾಗಿ ಓರ್ವ ಮೀನುಗಾರ ನಾಪತ್ತೆಯಾಗಿ, ಮೂವರನ್ನು ರಕ್ಷಿಸಿರೋ ಘಟನೆ ಹೊನ್ನಾವರದ ಕಾಸರಕೋಡು ಇಕೋ ಬೀಚ್‌ನಲ್ಲಿ ನಡೆದಿದೆ. ಉದಯ ದಾಮೋದರ ತಾಂಡೇಲ್ ಕಾಣೆಯಾದ ಮೀನುಗಾರನಾಗಿದ್ದು, ವಿಜಯ್ ಫರ್ನಾಂಡೀಸ್, ಶಂಕರ್ ತಾಂಡೇಲ್, ಕಾಮೇಶ್ವರ ತಾಂಡೇಲ್ ಎಂಬುವವರನ್ನು ಸ್ಥಳೀಯ ಮೀನುಗಾರರು ರಕ್ಷಣೆ ಮಾಡಿದ್ದಾರೆ. ಇಂದು ಬೆಳಿಗ್ಗೆ ಮೀನುಗಾರಿಕೆಗಾಗಿ ತಮ್ಮ ಬೋಟ್ ಮೂಲಕ ಸಮುದ್ರಕ್ಕಿಳಿದಿದ್ದ ಮೀನುಗಾರರು, ವಾಪಸ್ಸಾಗುವಾಗ ಭಾರೀ ಅಲೆಗಳ ಹೊಡೆತಕ್ಕೆ ಸಿಲುಕಿ ಬೋಟ್ ಮುಳುಗಡೆಯಾಗಿ ದುರಂತ ಸಂಭವಿಸಿದೆ. ಕಾಣೆಯಾದ ಮೀನುಗಾರನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ತಾಲೂಕಿನಲ್ಲಿ ನಾಳೆ ಹಾಗೂ ನಾಡಿದ್ದು ನಡೆಯಬೇಕಿದ್ದ ಸಚಿವ ಹೆಬ್ಬಾರ್ ಕಾರ್ಯಕ್ರಮಗಳು ರದ್ದು..!
ಮುಂಡಗೋಡ: ತಾಲೂಕಿನಲ್ಲಿ ನಾಳೆ ಸೋಮವಾರ ದಿನಾಂಕ ಜು.5 ರಂದು ಮಧ್ಯಾಹ್ನ ಮುಂಡಗೋಡ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಾಡಿದ್ದು ಮಂಗಳವಾರ ಜು.6 ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಚಿವ ಶಿವರಾಮ ಹೆಬ್ಬಾರ್ ರವರ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾಗಿವೆ. ಅನಿವಾರ್ಯ ಕಾರಣಗಳಿಂದ ಸಚಿವ ಶಿವರಾಮ ಹೆಬ್ಬಾರ್ ಅವರು ತುರ್ತಾಗಿ ಬೆಂಗಳೂರಿನಲ್ಲಿ ಸಭೆಗೆ ಹಾಜರಾಗಬೇಕಾಗಿರುವುದರಿಂದ ನಾಳೆ ಮಧ್ಯಾಹ್ನದ ಹಾಗೂ ಮಂಗಳವಾರದ ಮುಂಡಗೋಡ ತಾಲೂಕಿನ ಎಲ್ಲಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅಂತಾ ಸಚಿವರ ಆಪ್ತ ವಲಯ ಮಾಹಿತಿ ನೀಡಿದೆ.
ಮಾತೃ ಭೂಮಿಯ ಮಣ್ಣಲ್ಲಿ ಮಣ್ಣಾದ ವೀರಯೋಧ..! ಆ ಪುಟ್ಟ ಕಂದಮ್ಮಗಳ ಅಪ್ಪ ಇನ್ನು ನೆನಪು ಮಾತ್ರ..!!
ಉಕ್ಕಲಿ; ದಕ್ಷಿಣ ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ರಾಜ್ಪೊರಾ ಪ್ರದೇಶದ ಹಂಜಿನ್ ಗ್ರಾಮದಲ್ಲಿ ಭದ್ರತಾ ಪಡೆ ಹಾಗೂ ಭಯೋತ್ಪಾದಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಗ್ರಾಮದ ಹುತಾತ್ಮ ಯೋಧನ ಅಂತ್ಯಸಂಸ್ಕಾರ ಉಕ್ಕಲಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನಡೆಯಿತು.. ಉಗ್ರರ ಗುಂಡಿಗೆ ಎದೆಯೊಡ್ಡಿದ ವೀರಯೋಧನ ಪಾರ್ಥೀವ ಶರೀರ ಹುಟ್ಟೂರಿಗೆ..! ಮನೆ ಮಗನ ಪಾರ್ಥೀವ ಶರೀರ ಕಂಡ ಇಡೀ ಊರಿಗೇ ಊರೇ ಕಣ್ಣೀರಲ್ಲಿ..!! ನಿಜ, ಉಕ್ಕಲಿ ಗ್ರಾಮದ ಜನರ ಹೃದಯ ಇಂದು ಅಕ್ಷರಶಃ ಭಾರವಾಗಿತ್ತು. ಯಾಕಂದ್ರೆ ಕಣ್ಣೇದುರೇ ಆಡಿ ಬೆಳೆದಿದ್ದ ಹುಡುಗ ದೇಶಸೇವೆಗಾಗಿ ಪ್ರಾಣವನ್ನೆ ಬಲಿ ಕೊಟ್ಟಿದ್ದ. ಒಂದು ಕಡೆ ದೇಶಕ್ಕಾಗಿ ಹುತಾತ್ಮನಾದ ಯೋಧನ ಹೆಮ್ಮೆಯ ಆನಂದ ಭಾಷ್ಪ ಸುರಿಯುತ್ತಿದ್ದರೆ ಮತ್ತೊಂದೆಡೆ, ಆ ಯೋಧನ ಪುಟ್ಟ ಪುಟ್ಟ ಎರಡು ಕಂದಮ್ಮಗಳ ಮುಗ್ದ ಮುಖ ನೋಡಿ ಕಣ್ಣೀರು ತನ್ನಿಂದ ತಾನೇ ಹರಿಯುತ್ತಿತ್ತು.. ಹೌದು, ಉಕ್ಕಲಿ ಗ್ರಾಮದ ಮೂವತ್ತೈದು ವರ್ಷ ವಯಸ್ಸಿನ ಕಾಶಿರಾಯ ಶಂಕ್ರಪ್ಪ ಬೊಮ್ಮನಳ್ಳಿ ಎಂಬುವ ವೀರಯೋಧ...
ಇಂದೂರಿನಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ, ಮುರಿದು ಬಿದ್ದ 2 ವಿದ್ಯುತ್ ಕಂಬಗಳು..! ತಪ್ಪಿದ ಭಾರೀ ಅನಾಹುತ..!!
ಮುಂಡಗೋಡ: ತಾಲೂಕಿನ ಇಂದೂರಿನ ಹೊರವಲಯದ ಚರ್ಚ ಬಳಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ. ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ, ಚರ್ಚ ಬಳಿ ಇರೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಸಂಚಾರ ಇದ್ದಾಗಲೇ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ.. ಇನ್ನು ಸ್ಥಳಕ್ಕೆ ಮುಂಡಗೋಡ 112 ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲಿಸಿದ್ದಾರೆ. ಘಟನೆಯ ಕಾತರಕ್ಕೆ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ತಕ್ಷಣವೇ ಕಡಿತಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ..
ಹೋರಿ ಹಬ್ಬದ ಹುಚ್ಚು, ಪ್ರಾಣಕ್ಕಿಂತ ಹೆಚ್ಚು..!
ಇದು ಅಕ್ಷರಶಃ ಉತ್ತರ ಕರ್ನಾಟಕ ಮಂದಿಯ ರಣರೋಚಕ ಜವಾರಿ ಕ್ರಿಡೆ.. ಈ ಕ್ರಿಡೆಯಲ್ಲಿ ಲಕ್ಷ ಲಕ್ಷ ಆಭಿಮಾನಿಗಳ ಕಲರವ ಕೇಳತ್ತೆ.. ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗಿ ಹುಚ್ಚೆದ್ದು ಕುಣಿಯೋ ಲಕ್ಷಾಂತರ ಅಭಿಮಾನಿಗಳ ಕೇಕೆ ಚಪ್ಪಾಳೆ ಇರತ್ತೆ.. ಅಲ್ಲಿ ಯಾವ ಬಿಂಕ ಬಿಗುಮಾನಗಳೂ ಇರಲ್ಲ. ಅಲ್ಲಿರೋದು ಅಪ್ಪಟ ಅಭಿಮಾನ ಮಾತ್ರ.. ಅಂದಹಾಗೆ ಅದು ಯಾವ ಕ್ರೀಡೆ ಅಂತಿರಾ.. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್.. ಹಬ್ಬದ ಹುಚ್ಚು..! ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹುಚ್ಚೇದ್ದು ಕುಣಿಸೋ ಕ್ರೀಡೆ ಅಂದ್ರೆ ಅದು ಹೋರಿ ಹಬ್ಬದ ಕ್ರೀಡೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹೋರಿ ಹಬ್ಬದ ಹುಚ್ಚು ಯಾವ ಮಟ್ಟಿಗೆ ಇದೆ ಅಂದ್ರೆ ಒಂದು ಹಬ್ಬಕ್ಕೆ ಲಕ್ಷಾಂತರ ಅಭಿಮಾನಿಗಳು ತಾವು ಆರಾಧಿಸುವ ಹೋರಿಗಳನ್ನು ನೋಡಲು ಸಾಗರದಂತೆ ಹರಿದು ಬರ್ತಾರೆ.. ಹೇಗೆ ನಡಿಯತ್ತೆ ಸ್ಪರ್ಧೆ..? ಯಸ್, ಈ ಹೋರಿ ಹಬ್ಬದಲ್ಲಿ ಆಯೋಜಕರು 350 ಹೋರಿಗಳಿಗೆ ಮಾತ್ರ ಅವಕಾಶ ನೀಡುತ್ತಾರೆ.. ಹಾಗೆ ಆಯೋಜಿಸಿದ್ದ ಹಬ್ಬದಲ್ಲಿ 4 ಬೈಕ್ ಬಂಪರ್ ಬಹುಮಾನವಾಗಿ...
ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ತಿರುಗಾಡಿದ ಅಜ್ಜ..!
ಬೆಳಗಾವಿ: ಹಾವು ಅಂದ್ರೆ ಹರನೇ ನಡುಗಿದ್ನಂತೆ.. ಆದ್ರೆ ಇಲ್ಲೊಬ್ಬ ಅಜ್ಜ ತನ್ನ ಮನೆಲಿ ಬಂದಿದ್ದ ಹಾವನ್ನೇ ಶಿವನ ಅಪರಾವತಾರದಂತೆ ಹಿಡಿದು ಕೊರಳಿಗೆ ಸುತ್ತಿಕೊಂಡು ಸೈಕಲ್ ಹತ್ತಿ ತಿರುಗಾಡಿದ್ದಾನೆ. ಹೌದು, ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ. ಹಂಗರಕಾ ಗ್ರಾಮದ ಅಜ್ಜನೊಬ್ಬ ತನ್ನ ಮನೆಯಲ್ಲಿ ಬಂದಿದ್ದ ಹಾವುವಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ. ಹಾಗೆ ಕೊರಳಲ್ಲಿ ಅಉತ್ತಿಕೊಂಡು ಸೈಕಲ್ ಏರಿ ತನ್ನ ಗದ್ದೆಯ ಕಡೆ ನಡೆದಿದ್ದಾನೆ. ಹಾಗೆ ಹಾವು ಸುತ್ತಿಕೊಂಡು ಅಜ್ಜ ಬರ್ತಿದ್ದಂತೆ ಗ್ರಾಮದ ಮಂದಿಯೆಲ್ಲ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಆದ್ರೆ ಈ ಅಜ್ಜ ಮಾತ್ರ ಯಾವುದೇ ಭಯ ಇಲ್ಲದೇ, ಹಾವನ್ನು ಸುತ್ತಿಕೊಂಡು ಗದ್ದೆಯಲ್ಲಿ ಬಿಟ್ಟು ಬಂದಿದ್ದಾನೆ. ಹಾವನ್ನು ಸಾಯಿಸದೇ ರಕ್ಷಣೆ ಮಾಡಿದ್ದಾನೆ.. ಹೇಗಿದೆ ಗೊತ್ತಾ ಹಾವು ಸುತ್ತಿಕೊಂಡು ಸೈಕಲ್ ಏರಿದ ಅಜ್ಜನ ಹಕೀಕತ್ತು..? ವಿಡಿಯೊ ಇದೆ. ನೋಡಲು ಇಲ್ಲಿ ಕ್ಲಿಕ್ ಮಾಡಿ..!! ಹಾವು ಕಂಡ ಕೂಡಲೇ ಕೊಲ್ಲಲು ಓಡಾಡುವ ಜನರ ಮದ್ಯೆ ಈ ಅಜ್ಜ ಉರಗ ಪ್ರೇಮ ತೋರಿಸಿದ್ದು ಶ್ಲಾಘನೀಯವಾಗಿದೆ..