ತಾಲೂಕಿನಲ್ಲಿ ನಾಳೆ ಹಾಗೂ ನಾಡಿದ್ದು ನಡೆಯಬೇಕಿದ್ದ ಸಚಿವ ಹೆಬ್ಬಾರ್ ಕಾರ್ಯಕ್ರಮಗಳು ರದ್ದು..!

ಮುಂಡಗೋಡ: ತಾಲೂಕಿನಲ್ಲಿ ನಾಳೆ ಸೋಮವಾರ ದಿನಾಂಕ ಜು.5 ರಂದು ಮಧ್ಯಾಹ್ನ ಮುಂಡಗೋಡ ಗ್ರಾಮಾಂತರ ಪ್ರದೇಶಗಳಲ್ಲಿ ಹಾಗೂ ನಾಡಿದ್ದು ಮಂಗಳವಾರ ಜು.6 ರಂದು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ಪಟ್ಟಣ ಪಂಚಾಯತ ವ್ಯಾಪ್ತಿಯಲ್ಲಿ ನಡೆಯಬೇಕಿದ್ದ ಸಚಿವ ಶಿವರಾಮ ಹೆಬ್ಬಾರ್ ರವರ ಸಾರ್ವಜನಿಕ ಕಾರ್ಯಕ್ರಮಗಳು ರದ್ದಾಗಿವೆ.

ಅನಿವಾರ್ಯ ಕಾರಣಗಳಿಂದ ಸಚಿವ ಶಿವರಾಮ ಹೆಬ್ಬಾರ್ ಅವರು ತುರ್ತಾಗಿ ಬೆಂಗಳೂರಿನಲ್ಲಿ ಸಭೆಗೆ ಹಾಜರಾಗಬೇಕಾಗಿರುವುದರಿಂದ ನಾಳೆ ಮಧ್ಯಾಹ್ನದ ಹಾಗೂ ಮಂಗಳವಾರದ ಮುಂಡಗೋಡ ತಾಲೂಕಿನ ಎಲ್ಲಾ ಕಾರ್ಯಕ್ರಮವನ್ನು ಮುಂದೂಡಲಾಗಿದೆ. ಅಂತಾ ಸಚಿವರ ಆಪ್ತ ವಲಯ ಮಾಹಿತಿ ನೀಡಿದೆ‌.