ಹಾವು ಕೊರಳಿಗೆ ಸುತ್ತಿಕೊಂಡು ಸೈಕಲ್ ಮೇಲೆ ತಿರುಗಾಡಿದ ಅಜ್ಜ..!

ಬೆಳಗಾವಿ: ಹಾವು ಅಂದ್ರೆ ಹರನೇ ನಡುಗಿದ್ನಂತೆ.. ಆದ್ರೆ ಇಲ್ಲೊಬ್ಬ ಅಜ್ಜ ತನ್ನ ಮನೆಲಿ ಬಂದಿದ್ದ ಹಾವನ್ನೇ ಶಿವನ ಅಪರಾವತಾರದಂತೆ ಹಿಡಿದು ಕೊರಳಿಗೆ ಸುತ್ತಿಕೊಂಡು ಸೈಕಲ್ ಹತ್ತಿ ತಿರುಗಾಡಿದ್ದಾನೆ‌.

ಹೌದು, ಬೆಳಗಾವಿ ತಾಲೂಕಿನ ಹಂಗರಗಾ ಗ್ರಾಮದಲ್ಲಿ ಇಂತಹದ್ದೊಂದು ಅಪರೂಪದ ಘಟನೆ ನಡೆದಿದೆ‌. ಹಂಗರಕಾ ಗ್ರಾಮದ ಅಜ್ಜನೊಬ್ಬ ತನ್ನ ಮನೆಯಲ್ಲಿ ಬಂದಿದ್ದ ಹಾವುವಹಿಡಿದು ಕೊರಳಿಗೆ ಸುತ್ತಿಕೊಂಡಿದ್ದಾನೆ. ಹಾಗೆ ಕೊರಳಲ್ಲಿ ಅಉತ್ತಿಕೊಂಡು ಸೈಕಲ್ ಏರಿ ತನ್ನ ಗದ್ದೆಯ ಕಡೆ ನಡೆದಿದ್ದಾನೆ. ಹಾಗೆ ಹಾವು ಸುತ್ತಿಕೊಂಡು ಅಜ್ಜ ಬರ್ತಿದ್ದಂತೆ ಗ್ರಾಮದ ಮಂದಿಯೆಲ್ಲ ಕಕ್ಕಾಬಿಕ್ಕಿಯಾಗಿ ಓಡಿದ್ದಾರೆ. ಆದ್ರೆ ಈ ಅಜ್ಜ ಮಾತ್ರ ಯಾವುದೇ ಭಯ ಇಲ್ಲದೇ, ಹಾವನ್ನು ಸುತ್ತಿಕೊಂಡು ಗದ್ದೆಯಲ್ಲಿ ಬಿಟ್ಟು ಬಂದಿದ್ದಾನೆ. ಹಾವನ್ನು ಸಾಯಿಸದೇ ರಕ್ಷಣೆ ಮಾಡಿದ್ದಾನೆ..

ಹೇಗಿದೆ ಗೊತ್ತಾ ಹಾವು ಸುತ್ತಿಕೊಂಡು ಸೈಕಲ್ ಏರಿದ ಅಜ್ಜನ ಹಕೀಕತ್ತು..? ವಿಡಿಯೊ ಇದೆ. ನೋಡಲು ಇಲ್ಲಿ ಕ್ಲಿಕ್ ಮಾಡಿ..!!

ಹಾವು ಕಂಡ ಕೂಡಲೇ ಕೊಲ್ಲಲು ಓಡಾಡುವ ಜನರ ಮದ್ಯೆ ಈ ಅಜ್ಜ ಉರಗ ಪ್ರೇಮ ತೋರಿಸಿದ್ದು ಶ್ಲಾಘನೀಯವಾಗಿದೆ‌..

error: Content is protected !!