ಹೋರಿ ಹಬ್ಬದ ಹುಚ್ಚು, ಪ್ರಾಣಕ್ಕಿಂತ ಹೆಚ್ಚು..!

ಇದು ಅಕ್ಷರಶಃ ಉತ್ತರ ಕರ್ನಾಟಕ ಮಂದಿಯ ರಣರೋಚಕ ಜವಾರಿ ಕ್ರಿಡೆ.. ಈ ಕ್ರಿಡೆಯಲ್ಲಿ ಲಕ್ಷ ಲಕ್ಷ ಆಭಿಮಾನಿಗಳ ಕಲರವ ಕೇಳತ್ತೆ.. ರೋಮಾಂಚಕ ಕ್ಷಣಗಳಿಗೆ ಸಾಕ್ಷಿಯಾಗಿ ಹುಚ್ಚೆದ್ದು ಕುಣಿಯೋ ಲಕ್ಷಾಂತರ ಅಭಿಮಾನಿಗಳ ಕೇಕೆ ಚಪ್ಪಾಳೆ ಇರತ್ತೆ.. ಅಲ್ಲಿ ಯಾವ ಬಿಂಕ ಬಿಗುಮಾನಗಳೂ ಇರಲ್ಲ. ಅಲ್ಲಿರೋದು ಅಪ್ಪಟ ಅಭಿಮಾನ ಮಾತ್ರ.. ಅಂದಹಾಗೆ ಅದು ಯಾವ ಕ್ರೀಡೆ ಅಂತಿರಾ.. ಇಲ್ಲಿದೆ ನೋಡಿ ಫುಲ್ ಡೀಟೇಲ್ಸ್..

ಹಬ್ಬದ ಹುಚ್ಚು..!
ಹೌದು ಉತ್ತರ ಕರ್ನಾಟಕ ಭಾಗದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹುಚ್ಚೇದ್ದು ಕುಣಿಸೋ ಕ್ರೀಡೆ ಅಂದ್ರೆ ಅದು ಹೋರಿ ಹಬ್ಬದ ಕ್ರೀಡೆ. ಉತ್ತರ ಕರ್ನಾಟಕದ ಭಾಗಗಳಲ್ಲಿ ಹೋರಿ ಹಬ್ಬದ ಹುಚ್ಚು ಯಾವ ಮಟ್ಟಿಗೆ ಇದೆ ಅಂದ್ರೆ ಒಂದು ಹಬ್ಬಕ್ಕೆ ಲಕ್ಷಾಂತರ ಅಭಿಮಾನಿಗಳು ತಾವು ಆರಾಧಿಸುವ ಹೋರಿಗಳನ್ನು ನೋಡಲು ಸಾಗರದಂತೆ ಹರಿದು ಬರ್ತಾರೆ..

ಹೇಗೆ ನಡಿಯತ್ತೆ ಸ್ಪರ್ಧೆ..?
ಯಸ್, ಈ ಹೋರಿ ಹಬ್ಬದಲ್ಲಿ ಆಯೋಜಕರು 350 ಹೋರಿಗಳಿಗೆ ಮಾತ್ರ ಅವಕಾಶ ನೀಡುತ್ತಾರೆ.. ಹಾಗೆ ಆಯೋಜಿಸಿದ್ದ ಹಬ್ಬದಲ್ಲಿ 4 ಬೈಕ್ ಬಂಪರ್ ಬಹುಮಾನವಾಗಿ ಇಟ್ಟಿರುತ್ತಾರೆ. ಅದರಲ್ಲಿ ಎರಡು ಪಿಪಿಹೋರಿ ಗೆ ಹಾಗೂ ಇನ್ನೂ ಎರಡು ಕೊಬ್ಬರಿ ಹೋರಿ ಗೆ ಬಹುಮಾನವಾಗಿ ಕೊಡಲಾಗತ್ತೆ.‌ ಹಾಗೂ ಚಿನ್ನ, ಬೆಳ್ಳಿ ಸೇರಿದಂತೆ ಹಲವು ಪ್ರಕಾರದ ಬಹುಮಾನಗಳನ್ನು ಘೋಶಿಸಿರುತ್ತಾರೆ.

ಹೇಗಿರತ್ತೆ ಗೊತ್ತಾ ಹೋರಿ ಹಬ್ಬ ಗತ್ತು ಗಮ್ಮತ್ತು..? ರೋಮಾಂಚಕಾರಿ ದೃಷ್ಯಗಳು ಹೇಗಿವೆ ನೋಡಬೇಕಾ..? ಹಾಗದ್ರೆ ಇಲ್ಲಿ ಕ್ಲಿಕ್ ಮಾಡಿ..!

ಅದರಂತೆ ಈ ಒಂದು ಹಬ್ಬದಲ್ಲಿ ರಾಜ್ಯದೆಲ್ಲೆಡೆಯಿಂದ ಪ್ರಸಿದ್ಧ ಹೋರಿಗಳು ಭಾಗವಹಿಸುತ್ತವೆ. ಹಾಗೆಯೇ ಅಭಿಮಾನಿಗಳು ಕೂಡ ತಮ್ಮ ತಮ್ಮ ಅಭಿಮಾನ ಸಂಕೇತವಾಗಿರುವ ಹೋರಿಗಳಿಗೆ ಸಿಳ್ಳೆ ಚಪ್ಪಾಳೆ ಮೂಲಕ ಹುರಿದುಂಬಿಸುತ್ತಾರೆ. ಅಖಾಡದ ಗೆಟ್ ನಿಂದ ಬಿಡುವ ಹೋರಿಗಳನ್ನು ಹಿಡಿಯಲು ಅನೇಕ ಪ್ರಸಿದ್ದ ಪೈಲ್ವಾನರು ಸಿದ್ಧರಾಗಿರುತ್ತಾರೆ.

ಗುಂಡಿಗೆಯ ವೀರರು ಇವರು..!!
ಅಂದಹಾಗೆ, ಅಖಾಡದಲ್ಲಿ ಬಿಟ್ಟ ಹೋರಿಗಳನ್ನ ಹಿಡಿಯೋ ಗುಂಡಿಗೆ ಇರೋ ಸಾಕಷ್ಡು ಜನ ಖ್ಯಾತಿ ಪಡೆದಿದ್ದಾರೆ. ಅವ್ರಲ್ಲಿ ಕೋಡಿಹಳ್ಳಿ ಬೀರಪ್ಪ. ಶಿಕಾರಿಪುರ ಕಾಂತ. ಕುಬಟೂರ ಪ್ರವೀಣ. ಕಂಚಿನೆಗಳೂರು ಮಾರುತಿ,. ಕುಬಟೂರ ಮಧು. ಬ್ಯಾಡಗಿ ಮಾಂತ. ಶಕುನವಳ್ಳಿ ಗಣೇಶ್. ಹಾನಗಲ್ ಕೆ ಡಿ ಕುಮಾರ್. ಚನ್ನಳ್ಳಿ ಯೋಗಿ. ಹಾವೇರಿ ಜಾವೀದ್. ಅಡಗಂಟಿ ಪ್ರವೀಣ. ಸೊರಬ ಸುನಿಲ್. ಕದರಮಂಡಲಗಿ ಕಾಂತ. ಅಕ್ಕಿಆಲೂರ ಹನುಮಂತ. ಹೊಸಳ್ಳಿ ದೇವು. ನಳ್ಳಿನಕೊಪ್ಪ ವೀರೇಶ್. ಹಂಸಬಾವಿ ಮುಬಾರಕ್. ಬಂಕಾಪುರ ಅಂಜು. ತಿಳವಳ್ಳಿ ಬಸವರಾಜ. ಮಾರಂಬಿಡದ ಮಲ್ಲಿಕಾರ್ಜುನ ಸೇರಿ ಹಲವರು ಫೇಮಸ್ಸಾದವರು.

ಇಂತಹ ಅನೇಕ ಹೋರಿ ಹಿಡಿತಗಾರರ ಕಡೆಯಿಂದ ತಪ್ಪಿಸಿಕೊಂಡು ಜನಸಾಗರವಾಗಿರುವ ಅಖಾಡ ವನ್ನು ದಾಟಿದ ಕೊನೆಯಲ್ಲಿ ಹಸಿರು ಬಾವುಟವನ್ನು ಹಾರಿಸುತ್ತಾರೆ ಆಗ ಆ ಒಂದು ಸುತ್ತಿನಲ್ಲಿ ಯಶಸ್ವಿಯಾಗಿ ಆ ಹೋರಿ ದಾಟಿದೆ ಎಂದು ಅರ್ತ..

“ರಣಕಲಿಗಳು” ಈ ಹೋರಿಗಳು..!
ಅಂದಹಾಗೆ ಈ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಪ್ರಸಿದ್ಧವಾಗಿರುವ ಹೋರಿಗಳು ಎಂದರೆ ಹುಲಿಗಿನ ಕೊಪ್ಪದ ನಾಯಕ. ಹುಲಿಗಿನಕೊಪ್ಪ ಡಾನ್. ಮುಂಡಗೋಡಿನ ಮಹಾರಾಜ್. ಹಾವೇರಿ ರಾಕ್ ಸ್ಟಾರ್. ಕರ್ನಾಟಕದ ನಂದಿ. ಹಾವೇರಿ ಅನ್ನದಾತ. ಹಾವೇರಿ ಕುರುಕ್ಷೇತ್ರ. ಹಾವೇರಿ ಅರ್ಜುನ. ಹಾವೇರಿ ಕಿಂಗ್. ಕರ್ಜಗಿ ಅನ್ನದಾತ. ಇಂದೂರಿನ ಹೊಯ್ಸಳ. ಕೊಪ್ಪದ ರಣ ರಾಕ್ಷಸ. KDM ಕಿಂಗ್. ಚಿನ್ನಾಟದ ಚೆಲುವ. ಜಕ್ಕನಹಳ್ಳಿ ಛಲಗಾರ. ಘಾಳ್ಪೂಜಿ ನಿರ್ಭಯ. ಚಿಕ್ಕಲಿಂಗದಹಳ್ಳಿ ಚಾಮುಂಡಿ ಎಕ್ಸ್ಪ್ರೆಸ್. ಹಾವೇರಿ ಕೋಟಿಗೊಬ್ಬ. ಗಾಂಧಿನಗರದ ಸೂಪರ್. ರಾಣೆಬೆನ್ನೂರಿನ ಹುಲಿ. ರಾಣೆಬೆನ್ನೂರಿನ ದರ್ಬಾರ್. ಶಿಕಾರಿಪುರದ ಅಗೋರ. ಕ್ರಾಂತಿವೀರ. ಹಾನಗಲ್ಲಿನ ಚಿನ್ನ. ಬ್ಯಾಡಗಿ ರಾಷ್ಟ್ರಪತಿ. ಬ್ಯಾಡಗಿ ಹೊಯ್ಸಳ. ಕೆಲವರು ಕೊಪ್ಪದ ಜೋಗಿ. ಶಿಕಾರಿಪುರದ ಶೋಭಾ. ಸೂರ್ಯಪುತ್ರ. ಶೂರ್ಪನಕಿ. ಹಾನಗಲ್ ರಾಜಕುಮಾರ್. ಯಜಮಾನ. ಮಾರನಬೀಡ ಸಮುದ್ರ. ಹಾನಗಲ್ ಸಾರಂಗ. ಆರ್ಮಿ ಹುಲಿ. ಅಕ್ಕಿ ಆಲೂರು ವೀರ ಕೇಸರಿ. ತಡಸನಹಳ್ಳಿ ಡಾನ್. ಹೀಗೆ ಇನ್ನೂ ಅನೇಕ ಹೆಸರುಗಳನ್ನು ಇಟ್ಟ ಹೋರಿಗಳು ಹೋರಿ ಹಬ್ಬದ ಸುಲ್ತಾನ ರಂತೆ ಜನರನ್ನು ರಂಜಿಸುತ್ತಿದ್ದಾರೆ..

ಅಭಿಮಾನಿಗಳ ಬೇಡಿಕೆಯಿದು..!
ಆದರೆ ರಾಜ್ಯ ಸರ್ಕಾರ ಈ ಹೋರಿ ಹಬ್ಬಕ್ಕೆ ಮಾನ್ಯತೆ ನೀಡಿ ಹಬ್ಬ ನಡೆಸಲು ಅವಕಾಶ ಮಾಡಿಕೊಡಬೇಕೆಂದು ಹೋರಿ ಹಬ್ಬದ ಅಭಿಮಾನಿಗಳು ಕೇಳಿಕೊಳ್ಳುತ್ತಿದ್ದಾರೆ. ತಮಿಳುನಾಡಿನಲ್ಲಿ ಜಲ್ಲಿ ಕಟ್ಟಿಗೆ ಅಲ್ಲಿಯ ರಾಜ್ಯ ಸರಕಾರ ಮಾನ್ಯತೆ ನೀಡಿದೆ ಅದೇ ರೀತಿ ಈ ಹೋರಿ ಹಬ್ಬಕ್ಕೂ ಕರ್ನಾಟಕ ಸರ್ಕಾರ ಮಾನ್ಯತೆ ನೀಡಬೇಕು ಎಂಬುದು ರೈತರ ಹಾಗೂ ಅಭಿಮಾನಿಗಳ ಬೇಡಿಕೆಯಾಗಿದೆ.

 

error: Content is protected !!