ಮುಂಡಗೋಡ: ತಾಲೂಕಿನ ಇಂದೂರಿನ ಹೊರವಲಯದ ಚರ್ಚ ಬಳಿ ಲಾರಿಯೊಂದು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಘಟನೆ ನಡೆದಿದೆ.

ಕುಡಿದ ಅಮಲಿನಲ್ಲಿದ್ದ ಲಾರಿ ಚಾಲಕ, ಚರ್ಚ ಬಳಿ ಇರೋ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ವಿದ್ಯುತ್ ಸಂಚಾರ ಇದ್ದಾಗಲೇ ಘಟನೆ ನಡೆದಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ..

ಇನ್ನು ಸ್ಥಳಕ್ಕೆ ಮುಂಡಗೋಡ 112 ಪೊಲೀಸರು ಹಾಗೂ ಹೆಸ್ಕಾಂ ಅಧಿಕಾರಿಗಳು ಬೇಟಿ ನೀಡಿ, ಪರಿಶೀಲಿಸಿದ್ದಾರೆ. ಘಟ‌ನೆಯ ಕಾತರಕ್ಕೆ ಆ ಭಾಗದಲ್ಲಿ ವಿದ್ಯುತ್ ಸಂಪರ್ಕ ತಕ್ಷಣವೇ ಕಡಿತಗೊಳಿಸಲಾಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ..