ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದಿನಿಂದ ದೇವಸ್ಥಾನಗಳ ಬಾಗಿಲು ಓಪನ್ ಆಗ್ತಿವೆ. ಕಳೆದ ಎರಡು ತಿಂಗಳಿಂದ ಕೊರೋನಾ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಸರ್ಕಾರ ಆದೇಶ ನೀಡಿದ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಬಹುತೇಕ ಎಲ್ಲಾ ದೇವಾಲಯಗಳು ಓಪನ್ ಆಗಲಿವೆ. ಶಿರಸಿ ಮಾರಿಕಾಂಬಾ, ಗೋಕರ್ಣ ಮಹಾಬಲೇಶ್ವರ, ಮುರ್ಡೆಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ಸೇರಿದಂತೆ ಹಲವು ದೇವಾಲಯಗಳಲ್ಲಿ ಭಕ್ತರಿಗೆ ಇಂದಿನಿಂದ ದರ್ಶನ ಭಾಗ್ಯ ಸಿಗಲಿದೆ.
ಶಿರಸಿ ಮಾರಿಕಾಂಬೆ ದರ್ಶನ ಭಾಗ್ಯ..!
ಹಾಗೇನೆ, ಇಂದಿನಿಂದ ದಕ್ಷಿಣ ಭಾರತದ ಪ್ರಸಿದ್ಧ ಶಿರಸಿ ಮಾರಿಕಾಂಬಾ ದೇವಾಲಯ ಭಕ್ತರಿಗೆ ಮುಕ್ತವಾಗಿದೆ. ಹಾಗೆಯೇ, ಶಿರಸಿಯ ಪ್ರಸಿದ್ಧ ದೊಡ್ಡ ಗಣಪತಿ ದೇವಾಲಯದಲ್ಲೂ ಕೂಡ ಭಕ್ತರ ದರ್ಶನಕ್ಕೆ ಅವಕಾಶ ನೀಡಲಾಗಿದೆ.
ಅದೇ ರೀತಿ ಕರ್ನಾಟಕದ ಏಕೈಕ ಕನ್ನಡ ತಾಯಿಯ ದೇಗುಲ, ಜಿಲ್ಲೆಯ ಸಿದ್ದಾಪುರದ ಭುವನಗಿರಿಯ ಭುವನೇಶ್ವರಿ ದೇಗುಲದಲ್ಲಿಯೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಇನ್ನು, ಇಂದು ಮುಂಜಾನೆಯಿಂದ ದೇವಾಲಯಗಳ ಬಾಗಿಲು ಓಪನ್ ಆಗಿದ್ದು, ಕೊರೋನಾ ನಿಯಮ ಪಾಲಿಸಿ, ಕೇವಲ ದೇವರ ದರ್ಶನಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಹೀಗಾಗಿ, ಮೊದಲ ದಿನ ಬೆರಳೆಣಿಕೆಯಷ್ಟು ಭಕ್ತರು ದೇವರ ದರ್ಶನಕ್ಕೆ ಬಂದಿದ್ದರು.