ಇಂದೂರು ಜಿಪಂ ಕ್ಷೇತ್ರ: ಏನಿದು ಅಚ್ಚರಿ..?  ಆ “ಯುವ ನಾಯಕ” ನಿಗೆ ಪಟ್ಟ ಕಟ್ಟಲು ಮುಹೂರ್ತ ಫಿಕ್ಸಾ..?

ಮುಂಡಗೋಡ: ಜಿಲ್ಲಾ ಪಂಚಾಯತ, ತಾಲೂಕಾ ಪಂಚಾಯತ ಚುನಾವಣೆ ಇನ್ನೂ ಘೋಷಣೆಯೇ ಆಗಿಲ್ಲ. ಕೇವಲ ಮೀಸಲಾತಿ ಮಾತ್ರ ಪ್ರಕಟವಾಗಿದೆ. ಆದ್ರೆ ಇಷ್ಟರೊಳಗೆ ಮುಂಡಗೋಡ ತಾಲೂಕಿನಾಧ್ಯಂತ ಇನ್ನಿಲ್ಲದ ರಾಜಕೀಯ ಚರ್ಚೆಗಳು ಶುರುವಾಗಿವೆ.
ತಾಲೂಕಿನಲ್ಲಿರೋ ಮೂರು ಜಿಪಂ ಕ್ಷೇತ್ರಗಳಿಗೆ ಈಗಾಗಲೇ ಟಿಕೆಟ್ ಪಡೆಯಲು “ಬಹುಪರಾಕ್” ಸಂಪ್ರದಾಯಗಳು ಚಾಲ್ತಿ ಪಡೆದುಕೊಂಡಿವೆ.

ಎಲ್ಲವೂ ಟಿಕೆಟ್ ಗಾಗಿ..!                              ಅದ್ರಲ್ಲೂ, ಬಿಜೆಪಿ ಪಾಳಯದಲ್ಲಂತೂ ಈಗಾಗಲೇ ನಂಗೇ ಟಿಕೆಟ್ ಕೊಡಿ ಅಂತಾ ಸಚಿವರ ಎದುರು ಇನ್ನಿಲ್ಲದ ಒತ್ತಡಗಳನ್ನ ಹಾಕಲಾಗ್ತಿದೆ‌. ಕೆಲವೊಬ್ರು ಪ್ರತ್ಯಕ್ಷವಾಗಿ ಒತ್ತಡ ಹೇರುತ್ತಿದ್ರೆ, ಇನ್ನೂ ಕೆಲವರು ತಮ್ಮ ಪ್ರಾಭಲ್ಯದ ಕತೆ ಹೇಳಿ ಪರೋಕ್ಷವಾಗಿ ಸಚಿವರಿಗೆ ಸುದ್ದಿ ಮುಟ್ಟಿಸುವ ಪ್ರಯತ್ನದಲ್ಲಿದ್ದಾರೆ.

ಇದು ಸ್ಪೋಟಕ ಚರ್ಚೆ..!
ಈ ನಡುವೆಯೇ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ್ತೊಂದು ಚರ್ಚೆ ಶುರುವಾಗಿದೆ. ಬಿಜೆಪಿಯ ಯುವ ನಾಯಕರೋರ್ವರು ಇದೇ ಜಿಲ್ಲಾ ಪಂಚಾಯತಿ ಚುನಾವಣೆ ಮೂಲಕವೇ ರಾಜಕೀಯಕ್ಕೆ ಅಧಿಕೃತ ಎಂಟ್ರಿ ಕೊಡಲಿದ್ದಾರೆ. ಅದ್ರಲ್ಲೂ ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಈಗಾಗಲೇ ಎರಡು ಜಿಪಂ ಕ್ಷೇತ್ರಗಳಲ್ಲಿ ಯಾವುದಾದರೊಂದು ಕ್ಷೇತ್ರವನ್ನು ಆಯ್ಕೆ ಮಾಡಿ, ಆ ಯುವ ನಾಯಕನಿಗೆ ಪಟ್ಟ ಕಟ್ಟಲು ತೆರೆಮರೆಯ ಕಸರತ್ತುಗಳೂ ಚಾಲ್ತಿ ಪಡೆದುಕೊಂಡು ಆಗಿದೆ. ಹಾಗಂತ ಖುದ್ದು ಬಿಜೆಪಿ ವಲಯದ ಕೆಲವು ಪ್ರಬುದ್ಧ ರಾಜಕಾರಣಿಗಳಿಂದಲೇ ಚರ್ಚೆಯಾಗ್ತಿದೆ.

ಏನಿದೆ ಇಂಟರನಲ್ ಪ್ಲಾನ್..?
ಅಸಲು, ಆ ಯುವ ನಾಯಕನಿಗೆ ಪಟ್ಟ ಕಟ್ಟಲು ಒಂದು ಎಕ್ಸ್ಟಾರ್ಡಿನರಿ ಪ್ಲಾನ್ ರೆಡಿಯಾಗಿದೆಯಂತೆ. ಯಲ್ಲಾಪುರ ಕ್ಷೇತ್ರದ ಯಾವುದಾದರೂ ಒಂದು ಜಿಪಂ ಕ್ಷೇತ್ರದಲ್ಲಿ ಆ ಯುವ ನಾಯಕನಿಗೆ ಬಿಜೆಪಿಯಿಂದ ಟಿಕೆಟ್ ಕೊಡಿಸೋದು, ಕಣಕ್ಕಿಳಿಸೋದು, ಗೆಲ್ಲಿಸೋದು..! ಆಮೇಲೆ, ಆ ಯುವ ನಾಯಕನಿಗೆ ಜಿಲ್ಲಾ ಪಂಚಾಯತ್ ಅಧ್ಯಕ್ಷ ಪಟ್ಟದಲ್ಲಿ ಕೂರುವಂತೆ ಮಾಡೋದು. ಈ ಮೂಲಕ ರಾಜಕೀಯ ಭವಿಷ್ಯತ್ತಿಗೆ ಬದ್ರ ಬುನಾದಿ ಹಾಕೋದು. ಇದು ಸಧ್ಯದ ಬಿಜೆಪಿ ಪಡಸಾಲೆಯ ಕೆಲವೇ ಕೆಲವು ಪ್ರಭುದ್ಧರೊಳಗೆ ಚರ್ಚೆಯಾಗಿರೋ ಹಕೀಕತ್ತು ಅಂತಾ ಹೇಳಲಾಗ್ತಿದೆ.

ನಿಜಕ್ಕೂ ಒಳ್ಳೆಯ ನಿರ್ಧಾರ..!
ನಿಜ, ಹಾಗೆ ಜಿಪಂ ಚುನಾವಣೆಯ ಅಖಾಡಕ್ಕಿಳಿಯೋ ಆ ಯುವ ನಾಯಕ ನಿಜಕ್ಕೂ ಕ್ಷೇತ್ರದಲ್ಲಿ ಅಂತಹದ್ದೊಂದು ಚಾರ್ಮು ಉಳಿಸಿಕೊಂಡು ಬಂದಿದ್ದಾರೆ. ಅವ್ರು ಎಲ್ಲೇ ಹೋಗಲಿ ಅವರದ್ದೇ ಆದ ಬಲಿಷ್ಟ ಯುವ ಪಡೆ ಅವ್ರ ಬೆನ್ನಿಗಿದೆ. ನಿಜವೆಂದ್ರೆ ಅವ್ರ ಮುಖದಲ್ಲಿ ಯಾವತ್ತೂ ಬಿಂಕ ಬಿಗುಮಾನಗಳು ಕಾಣುವುದೇ ಇಲ್ಲ. ಅವ್ರಿಗೆ ಬಡವರ ಬಗ್ಗೆ ಕಾಳಜಿಯಿದೆ, ನೊಂದವರ ಕಣ್ಣೀರು ಒರೆಸುವ ಹೃದಯವಂತಿಕೆ ಇದೆ. ಎಲ್ಲರೊಂದಿಗೂ ಬೆರೆತು ನಿಭಾಯಿಸಬಲ್ಲ ತಾಕತ್ತು ಇದೆ. ಹೀಗಿದ್ದಾಗ ಅಂತವನೊಬ್ಬ ನಾಯಕ, ಅಂತವನೊಬ್ಬ ಹೃದಯವಂತ ನಮ್ಮ ಕ್ಷೇತ್ರಕ್ಕೆ ಅಭ್ಯರ್ಥಿಯಾಗ್ತಾನೆ ಅಂದ್ರೆ ಯಾರು ತಾನೆ ಇಷ್ಟ ಪಡಲ್ಲ ಹೇಳಿ..? ಇದೇಲ್ಲ ಸತ್ಯವಾದ್ರೆ ನಿಜಕ್ಕೂ ಒಳ್ಳೆಯ ನಿರ್ಧಾರ. ಹಾಗಂತ, ಕ್ಷೇತ್ರದ ಜನ ಹೇಳ್ತಿದಾರೆ. ಅಷ್ಟಕ್ಕೂ ಇದು ಹೇಳಿ ಮಾಡಿಸಿದ ಸಮಯ.

ಹಾಗಾದ್ರೆ ಇಂದೂರು ಕ್ಷೇತ್ರವಾ..?
ಅಂದಹಾಗೆ, ಆ ಯುವ ನಾಯಕನಿಗೆ ಪಟ್ಟ ಕಟ್ಟಲು, ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಎರಡು ಜಿಲ್ಲಾ ಪಂಚಾಯತಿ ಕ್ಷೇತ್ರಗಳನ್ನು ಈಗಾಗಲೇ ಗುರುತಿಸಲಾಗಿದೆ. ಮುಂಡಗೋಡ ತಾಲೂಕಿನ ಮಟ್ಟಿಗೆ ಹೇಳೋದಾದ್ರೆ, ಈಗಾಗಲೇ ಮೀಸಲಾತಿ ಪ್ರಕಟಗೊಂಡಿದ್ದು ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ “ಸಾಮಾನ್ಯ” ಮೀಸಲಾತಿ ಪ್ರಕಟವಾಗಿದೆ‌. ಬಿಟ್ಟರೆ ಉಳಿದ ಮತ್ತೆರಡು ಕ್ಷೇತ್ರಗಳಿಗೆ ಬೇರೆಯದ್ದೇ ಮೀಸಲಾತಿಗಳಿವೆ..

ಹೀಗಿದ್ದಾಗ, ಆ ಯುವ ನಾಯಕ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಿಂದಲೇ ಸ್ಪರ್ಧಿಸ್ತಾರಾ..? ಇಂತಹದ್ದೊಂದು ಪ್ರಶ್ನೆ ಎದ್ದಿದೆ. ನಿಜ ಅಂದ್ರೆ, ಪಕ್ಕಾ ಗೆಲ್ಲುವ ಕುದುರೆ ಅಂತಲೇ ಕ್ಷೇತ್ರದಲ್ಲಿ ಚಾರ್ಮು ಉಳಿಸಿಕೊಂಡಿರೋ ರವಿಗೌಡ ಪಾಟೀಲರೂ ಕೂಡ ” ನಾನು ಈ ಬಾರಿ ಸ್ಪರ್ಧಿಸಲ್ಲ” ಅಂದಿದ್ದಾರೆ.. ಹಾಗಾದ್ರೆ, ರವಿಗೌಡರ ಆ ಮಾತಿಗೆ ಇದೇ ಕಾರಣವಾ..? ಎಂಬ ಪ್ರಶ್ನೆಗಳು ಸಾಮಾನ್ಯವಾಗಿ ಅಭಿಮಾನಿಗಳಿಗೆ ತಲೆ ಕೆರೆದುಕೊಳ್ಳುವಂತೆ ಮಾಡಿವೆ.

ಒಂದೇ ಕಲ್ಲಿಗೆ ಮೂರಲ್ಲ, ನೂರು ಹಕ್ಕಿ.!
ಹಾಗೊಂದು ವೇಳೆ ಈ ಸುದ್ದಿ ನಿಜವಾಗಿದ್ದರೆ, ಬಿಜೆಪಿ ಅಕ್ಷರಶಃ ಒಂದೇ ಕಲ್ಲಿಗೆ ಮೂರು ಹಕ್ಕಿಗಳನ್ನಲ್ಲ, ನೂರು ನೂರು ಹಕ್ಕಿಗಳನ್ನು ಹೊಡೆದಂತೆ ಆಗೋದ್ರಲ್ಲಿ ಬೇರೆ ಮಾತೇ ಇಲ್ಲ. ಇಲ್ಲಿ ಆ ಯುವ ನಾಯಕನೇನಾದ್ರೂ ಕಣಕ್ಕಿಳಿದ್ರೆ ಬಂಡಾಯದ ಯಾವೊಂದೂ ಮಾತೇ ಉಳಿಯಲ್ಲ, ಅಲ್ದೆ, ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಯ ಹುಡುಕಾಟದಲ್ಲಿದೆ. ನಿಜವೆಂದ್ರೆ “ಕೈ” ಪಡೆಗೆ ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರದಲ್ಲಿ ಅಭ್ಯರ್ಥಿಯ ಬರ ಎದುರಾಗಲೂಬಹುದು.. ಯಾಕಂದ್ರೆ ಸಧ್ಯದ ಮಟ್ಟಿಗೆ ಇಂದೂರು ಜಿಪಂ ಕ್ಷೇತ್ರದಲ್ಲಿ ಕಾಂಗ್ರೆಸ್ ಮೊದಲಿನಂತಿಲ್ಲ. ಅದು ಬೇರೆ ಮಾತು.

ಇದು ಪಕ್ಕಾ..!
ಹಾಗೊಂದು ವೇಳೆ ಈ ಚರ್ಚೆಗಳೇಲ್ಲ ನಿಜವೇ ಆಗಿದ್ದರೆ, ಅದ್ಯಾವುದೇ ಜಿಪಂ ಕ್ಷೇತ್ರವಿರಲಿ, ಈ ಬಾರಿ ಆ ಯುವ ನಾಯಕ ಸ್ಪರ್ಧಿಸಲೇ ಬೇಕಿದೆ, ಆ ಮೂಲಕ ಆ ಹೃದಯವಂತ ನಾಯಕ, ರಾಜಕೀಯ ವ್ಯಾಪಾರಗಳಿಗೆ ಇತಿಶ್ರೀ ಹಾಡಲೇ ಬೇಕಿದೆ. ಅದು ಯಲ್ಲಾಪುರ ಭಾಗದ ಜಿಪಂ ಕ್ಷೇತ್ರವಾಗಲಿ, ಅಥವಾ ಮುಂಡಗೋಡಿನ ಕ್ಷೇತ್ರವಾಗಲಿ ಎಲ್ಲಾದರೂ ಸರಿ, ಆ “ಯುವ ನಾಯಕ” ನಂತವರ ಅವಶ್ಯಕತೆ ಖಂಡಿತ ಕ್ಷೇತ್ರಕ್ಕಿದೆ. ಇದು ಕ್ಷೇತ್ರದ ಬಡವರ ಹಂಬಲ. ಖಂಡಿತ ಅತಿಶಯೋಕ್ತಿಯಲ್ಲ. ಏನಂತಿರಿ..?

error: Content is protected !!