ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ. ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ. ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಸಿಡ್ಲಗುಂಡಿ ಬಳಿ ಲಾರಿ, ಬೊಲೆರೊ ಮದ್ಯೆ ಮುಖಾಮುಕಿ ಡಿಕ್ಕಿ, ಅದೃಷ್ಟವಶಾತ್ ತಪ್ಪಿದ ಭಾರೀ ದುರಂತ..!
ಮುಂಡಗೋಡ:ತಾಲೂಕಿನ ಯಲ್ಲಾಪುರ ರಸ್ತೆಯಲ್ಲಿ ಅಪಘಾತವಾಗಿದೆ. ಅಶೋಕ ಲೈಲ್ಯಾಂಡ್ ಹಾಗೂ ಬುಲೆರೊ ವಾಹನದ ನಡುವೆ ಮುಖಾಮುಕಿ ಡಿಕ್ಕಿಯಾಗಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಸಿಡ್ಲಗುಂಡಿ, ಮೈನಳ್ಳಿ ಸಮೀಪದ ಕಿರು ಸೇತುವೆ ಬಳಿ ಘಟನೆ ನಡೆದಿದ್ದು, ಅಪಘಾತದ ಭೀಕರತೆಗೆ, ಡಿಕ್ಕಿಯ ರಭಸಕ್ಕೆ ಅಶೋಕ ಲೈಲಾಂಡ್ ಲಾರಿ ಉರುಳಿ ಬಿದ್ದಿದೆ. ಇಷ್ಟಾದ್ರೂ, ಅದೃಷ್ವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಬೊಲೆರೋ ವಾಹನದಲ್ಲಿ ಸಾಕಷ್ಟು ಜನ ಪ್ರಯಾಣಿಕರಿದ್ರು. ಆದ್ರೆ ಯಾರಿಗೂ ತೊಂದರೆಯಾಗಿಲ್ಲ ಅನ್ನೋ ಮಾಹಿತಿ ಲಭ್ಯವಾಗಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.
ಇನ್ನೂ ಕೆಲಸ ಬಾಕಿ ಇದೆ, ಮುಗಿದ ಮೇಲೆಯೇ ರಾಜೀನಾಮೆ ಅಂದ್ರು ಇಂದೂರು ಗ್ರಾಪಂ ಅಧ್ಯಕ್ಷೆ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ “ಇನ್ನಷ್ಟು ಪ್ರಮುಖ ಕೆಲಸಗಳಿವೆ ಅವೇಲ್ಲ ಮುಗಿಯೋವರೆಗೆ ರಾಜೀನಾಮೆ ಕೊಡಲ್ಲ” ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿರೋ ಅಧ್ಯಕ್ಷರು ಸ್ಪಷ್ಟವಾಗಿ ಉತ್ತರಿಸಿದ್ದಾರೆ. ನಮ್ಮಲ್ಲಿ ಗೊಂದಲವೇ ಇಲ್ಲ..! ಅಸಲು, ನಮ್ಮಲ್ಲಿ ಯಾವ ಗೊಂದಲವೇ ಇಲ್ಲ. ನಾವೇಲ್ಲರೂ ಒಗ್ಗಟ್ಟಾಗೇ ಇದ್ದಿವಿ. ನಂಗೆ ನಮ್ಮ ಸದಸ್ಯರೇಲ್ಲರೂ ಬೆಂಬಲ ಕೊಟ್ಟಿದ್ದಾರೆ. ಆದ್ರೆ, ಕೋವಿಡ್ ಕಾರಣಕ್ಕಾಗಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳು ಬಾಕಿ ಉಳಿದಿವೆ. ಅವನ್ನೇಲ್ಲ ಪೂರೈಸಿದ ನಂತರ ನಾನು ರಾಜೀನಾಮೆ ನೀಡುತ್ತೇನೆ ಅಂದಿದ್ದಾರೆ ಅಧ್ಯಕ್ಷರು. ನಮ್ಮ ಭೂಮಿ, ನಮ್ಮ ತೋಟ..! ಇನ್ನು, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಭೂಮಿ, ನಮ್ಮ ತೋಟ ಯೋಜನೆಯಡಿ ಸಾಕಷ್ಟು ಫಲಾನುಭವಿಗಳಿದ್ದಾರೆ. ಆದ್ರೆ ಅದೇಷ್ಟೋ ವರ್ಷಗಳಿಂದ ಆ ಯೋಜನೆಯಡಿ ಭೂಮಿ ಹಂಚಿಕೆಯಾಗೇ ಇಲ್ಲ. ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಎಡರು ತೊಡರು ಬಂದಿದ್ದವು. ಹೀಗಾಗಿ,...
ಇಂದೂರು ಬಳಿ ಸ್ಕೂಟಿಗೆ ಅಡ್ಡ ಬಂದ ಎಮ್ಮೆ; ಸ್ಕಿಡ್ ಆಗಿ ಬಿದ್ದು ಗಂಭೀರ ಗಾಯಗೊಂಡ ನಂದಿಕಟ್ಟಾ ಯುವಕ..!
ಮುಂಡಗೋಡ : ತಾಲೂಕಿನ ಇಂದೂರು ಬಳಿ ಅಪಘಾತವಾಗಿದೆ. ಎಮ್ಮೆ ಅಡ್ಡ ಬಂದ ಪರಿಣಾಮ ಸ್ಕೂಟಿ ಸ್ಕಿಡ್ ಆಗಿ ಬಿದ್ದು ಯುವಕ ಗಂಭೀರ ಗಾಯಗೊಂಡಿದ್ದಾನೆ. ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕ ಗಂಭೀರ ಗಾಯಗೊಂಡಿದ್ದಾನೆ. ಯುವಕನ ಹೆಸರು ಇನ್ನು ತಿಳಿದು ಬಂದಿಲ್ಲ. ಗಂಭೀರ ಗಾಯಗೊಂಡು ರಸ್ತೆ ಬದಿಯಲ್ಲಿ ಬಿದ್ದಿದ್ದ ಯುವಕನನ್ನು ಸ್ಥಳೀಯರು ನೋಡಿದ್ದಾರೆ. ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಗ್ರಾಪಂ ನಲ್ಲಿ 15-15 ರ ಹಾವು ಏಣಿಯಾಟ..! ಅಧ್ಯಕ್ಷ ಪಟ್ಟಕ್ಕಾಗಿ ಒಳಗೊಳಗೇ ಬೇಗುದಿ..?
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿಯಲ್ಲಿ ಒಳಗೊಳಗೇ ಅಸಮಾಧಾನದ ಹೊಗೆಯಾಡ್ತಿದೆಯಾ..? ಬಹುತೇಕ ಒಗ್ಗಟ್ಟಾಗಿದ್ದ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯರು ಒಳಗೊಳಗೆ ಕುದಿಯುವಂತಾಗಿದೆಯಾ..? ಒಳ ಒಪ್ಪಂದದಂತೆ ಗ್ರಾಮ ಪಂಚಾಯತಿ ಅಧ್ಯಕ್ಷ ಸ್ಥಾನದ ಬದಲಾವಣೆಗಾಗಿ ಜಾತಕ ಪಕ್ಷಿಯಂತೆ ಕಾದು ಕೂರುವಂತಾಗಿದೆಯಾ..? ಹೌದು ಅಂತಿದೆ ಮೂಲಗಳು. ಬಿಜೆಪಿ ಸಾಮ್ರಾಜ್ಯ..! ಅಸಲು, ಇಂದೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರ ಸಾಮ್ರಾಜ್ಯವಿದೆ. ಅದೇನೇ ತಿಪ್ಪರಲಾಗ ಹಾಕಿದ್ರೂ ಇಲ್ಲಿ ಬಿಜೆಪಿ ಬೆಂಬಲಿತರ ಅಧಿಕಾರ ಬಿಲ್ ಕುಲ್ ಬಿಜೆಪಿಗೇ ಇರತ್ತೆ. ಯಾಕಂದ್ರೆ, 16 ಸದಸ್ಯ ಬಲದ ಇಂದೂರು ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತ ಬರೋಬ್ಬರಿ 12 ಸದಸ್ಯರಿದ್ದಾರೆ. ಇನ್ನು ಕಾಂಗ್ರೆಸ್ ಇಲ್ಲಿ ಕೇವಲ 4 ಬೆಂಬಲಿತ ಸದಸ್ಯರಿಗಷ್ಟೇ ಗಪ್ ಚುಪ್ ಆಗಿ ಕೂತಿದೆ. ಈ ಕಾರಣಕ್ಕಾಗಿ ಅನಾಯಾಸವಾಗಿ ಇಂದೂರು ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬೆಂಬಲಿತರಿಗೆ ಆಡಳಿತದ ಚುಕ್ಕಾಣಿ ಸಿಕ್ಕಿದೆ. ಬಿಜೆಪಿ ಬಾವುಟದೊಂದಿಗೆ ಅನ್ನಪೂರ್ಣ ಬೆಣ್ಣಿ ಅಧ್ಯಕ್ಷರಾಗಿ, ಸಿಖಂದರ್ ಬಂಕಾಪುರ ಉಪಾಧ್ಯಕ್ಷರಾಗಿ ಖುರ್ಚಿಗೆ ಏರಿ ಬರೋಬ್ಬರಿ 17 ತಿಂಗಳು ಮುಗಿದಿದೆ. ನಿಜ ಅಂದ್ರೆ ಇಂದೂರಿಗರ...
ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ಆಧ್ಯಕ್ಷರ ಆಯ್ಕೆ ಕಸರತ್ತು, ಪಟ್ಟಕ್ಕೇರ್ತಾರಾ ರೇಣುಕಾ..?
ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾ ಹನುಮಂತ್ ಜಾಡರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಒಟ್ಟೂ 13 ಸದಸ್ಯ ಬಲದ ಸಾಲಗಾಂವ್ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತರದ್ದೇ ಪಾರುಪತ್ಯ. ಹೀಗಾಗಿ, 15 ತಿಂಗಳ ಅಧಿಕಾರ ನಡೆಸಿರೋ ನೇತ್ರಾ ಹನುಮಂತ್ ಜಾಡರ್ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಮತ್ತೊಂದು 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿ ಕೊಟ್ಟಿದ್ದಾರೆ. ಆಧ್ಯಕ್ಷರಾಗ್ತಾರಾ ರೇಣುಕಾ..? ಅಂದಹಾಗೆ, ಬಿಜೆಪಿಯೊಳಗಿನ ಸದಸ್ಯರ ಒಳ ಒಪ್ಪದಂತೆ ಸಾಲಗಾಂವ್ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ರೇಣುಕಾ ಮಂಜು ಕೋಣನಕೇರಿ ಆಯ್ಕೆಯಾಗೋದು ಬಹುತೇಕ ಫಿಕ್ಸ್ ಎನ್ನುವಂತಾಗಿದೆ. ಹೀಗಾಗಿ, ಇಂದು ನಡೆಯಲಿರೋ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಗೊಂದಲವಿಲ್ಲ.. ಸಾಲಗಾಂವ್ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿರೋ ಕಾರಣಕ್ಕೆ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ...
ಬಾಚಣಕಿ ಗ್ರಾಪಂ ನೂತನ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಗೆ ಭರ್ಜರಿ ಗೆಲುವು..!
ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ಬಿಜೆಪಿ ಬೆಂಬಲಿತ ಸಂತೋಷ ಸಣ್ಣಮನಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ. 13 ಸದಸ್ಯರಲ್ಲಿ 9 ರ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಆದ್ರೆ, ಇಂದು ನಡೆದ ಚುನಾವಣೆಯಲ್ಲಿ ಬರೋಬ್ಬರಿ 9 ಜನರ ಬೆಂಬಲದೊಂದಿಗೆ ಸಂತೋಷ ಸಣ್ಣಮನಿ ಭರ್ಜರಿ ಗೆಲುವು ಸಾಧಿಸಿದ್ದಾರೆ. ಹೆಬ್ಬಾರ್ ಆಶೀರ್ವಾದ..! ಇನ್ನು, ಭರ್ಜರಿ ಗೆಲುವು ಸಾಧಿಸಿದ ನೂತನ ಅಧ್ಯಕ್ಷ ಸಂತೋಷ ಸಣ್ಣಮನಿ, ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಚಿವ ಶಿವರಾಮ್ ಹೆಬ್ಬಾರ್ ಆಶೀರ್ವಾದದ ಬಲದಿಂದ ಅಂತಾ ಹೇಳಿದ್ರು. ಪಬ್ಲಿಕ್ ಫಸ್ಟ್ ಜೊತೆ ಮೊದಲ ಪ್ರತಿಕ್ರಿಯೆ ಹಂಚಿಕೊಂಡ ಸಂತೋಷ, ಸ್ಥಳೀಯ ಬಿಜೆಪಿ ಮುಖಂಡರುಗಳಿಗೆ ಧನ್ಯವಾದ ತಿಳಿಸಿದ್ರು. ಕಾಂಗ್ರೆಸ್ ಗೆ ಬೆಂಬಲಿಸಿದ್ದು 4.. ಇನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಇಸ್ಮಾಯಿಲ್...
ಬಾಚಣಕಿ ಗ್ರಾಪಂ ಅಧ್ಯಕ್ಷ ಚುನಾವಣೆ, ಸಂತೋಷ ಸಣ್ಣಮನಿಗೆ ಒಲಿಯತ್ತಾ ಖುರ್ಚಿ..?
ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಇಂದು ಮದ್ಯಾನ 1 ಗಂಟೆಯ ನಂತರ ನಡೆಯಲಿರೋ ಚುನಾವಣೆಯಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ..? ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ. 13 ಸದಸ್ಯ ಬಲ..! ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಹೀಗಾಗಿನೇ ಕಾಂಗ್ರೆಸ್ ಬೆಂಬಲಿತ ನಾಗರಾಜ್ ಉಪಾದ್ಯೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ರು. ಅದ್ರಂತೆ, ಅರಶಿಣಗೇರಿಯ ತಿಪ್ಪವ್ವ ಢಾಕಪ್ಪ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ರು. 15-15 ಒಪ್ಪಂದ..! ಆದ್ರೆ, ಅವತ್ತು ಅಧ್ಯಕ್ಷರ ಆಯ್ಕೆ ಹೊತ್ತಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದ ಸದಸ್ಯರು, 15 ತಿಂಗಳ ಅವಧಿಗಾಗಿ ಮಾತ್ರ ಅಧ್ಯಕ್ಷರ ಅಧಿಕಾರ ಸೀಮಿತಗೊಳಿಸಿದ್ರು. ಆ ನಂತರ ಬೇರೊಬ್ಬರಿಗೆ ಸ್ಥಾನ ಬಿಟ್ಟುಕೊಡಲು ಒಪ್ಪಂದ ಮಾಡಿಕೊಂಡಿದ್ರು. ಅದ್ರಂತೆ, ನಾಗರಾಜ್ ಉಪಾದ್ಯ ಮಾತು ಕೊಟ್ಟಂತೆ 15 ತಿಂಗಳ ನಂತರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ, ಸಧ್ಯ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಇದು ಒಂದು...
9 ತಿಂಗಳ ಹಿಂದೆ ಸಿಕ್ಕಿದೆ ಅನಾಥ ಶವ, ಕೊಲೆಯಾಗಿ ನದಿಯಲ್ಲಿ ತೇಲಿಬಂದಿದೆ ಹೆಣ, ಈ ವ್ಯಕ್ತಿ ನಿಮಗೇನಾದ್ರೂ ಗೊತ್ತಾ..?
ಬಹುಶಃ ಅದೊಂದು ಭೀಕರ ಕೊಲೆ. ಅದ್ಯಾವ ಕಾರಣಕ್ಕೋ ಗೊತ್ತಿಲ್ಲ, ಅದ್ಯಾರೋ ಗೊತ್ತಿಲ್ಲ, ಕುತ್ತಿಗೆಗೆ ಟವೇಲ್ ಬಿಗಿದು ಬರ್ಬರವಾಗಿ ಕೊಂದಿದ್ದಾರೆ ದುಷ್ಟರು. ಅದೇಲ್ಲಿ ಕೊಲೆ ಮಾಡಿದ್ದಾರೋ ಅದೂ ಕೂಡ ಇವತ್ತಿಗೂ ಗೊತ್ತಾಗಿಲ್ಲ. ಹಾಗೆ ನಿರ್ದಯವಾಗಿ ಕೊಲೆ ಮಾಡಿ, ಮಲಪ್ರಭಾ ನದಿಯಲ್ಲಿ ತಂದು ಬೀಸಾಕಿ ಹೋಗಿದ್ದಾರೆ. ಆ ಶವ ತೇಲುತ್ತ ಬಂದು ಬೆಳಗಾವಿ ಜಿಲ್ಲೆಯ ಚಾಪಗಾಂವ್ ಸಮೀಪದ ಮಲಪ್ರಭಾ ನದಿಯ ದಂಡೆಯ ಮೇಲೆ ಸಿಕ್ಕಿದೆ. 9 ತಿಂಗಳ ಹಿಂದೆ.. ಅಷ್ಟಕ್ಕೂ, ಈ ಶವ ಸಿಕ್ಕಿದ್ದು ನಿನ್ನೆ ಮೊನ್ನೆಯಲ್ಲ. ಬರೋಬ್ಬರಿ 9 ತಿಂಗಳ ಹಿಂದೆ, ಅಂದ್ರೆ, 2021 ರ ಸೆಪ್ಟೆಂಬರ್ ತಿಂಗಳಲ್ಲಿ ಶವ ಸಿಕ್ಕಿದೆ. ಹೀಗಾಗಿ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ನಂದಗಡ ಪೊಲೀಸರು ಅವತ್ತೇ ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿದ್ದಾರೆ. ಆದ್ರೆ ಇದುವರೆಗೂ ಆ ಶವ ಯಾರದ್ದು ಅನ್ನೋ ಸಣ್ಣದೊಂದು ಸುಳಿವೂ ಸಿಕ್ಕಿಲ್ಲ. ರಾಜ್ಯ ತಡಕಾಡಿದ್ರು.. ಅಂದಹಾಗೆ, ಹಾಗೆ ನದಿಯ ದಡದಲ್ಲಿ ಶವ ಸಿಕ್ಕ ಗಳಿಗೆಯಿಂದ ಇಲ್ಲಿಯವರೆಗೂ ಪೊಲೀಸರೇನು ಸುಮ್ಮನೆ ಕುಳಿತಿಲ್ಲ....
ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಅವಿಶ್ವಾಸಕ್ಕೆ ಅರ್ಜಿ, ಹೆಬ್ಬಾರ್ ಸಾಹೇಬ್ರ ನಿರ್ಲಕ್ಷಕ್ಕೆ ಸಿಡಿದೆದ್ರಾ ಸದಸ್ಯರು..!
ಸಚಿವ ಶಿವರಾಂ ಹೆಬ್ಬಾರ್ ಅದ್ಯಾಕೋ ಏನೋ ಕಾರ್ಯಕರ್ತರ ಮನಸಿನಾಳ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗ್ತಿದಾರಾ..? ಇಂತಹದ್ದೊಂದು ಅನುಮಾನ, ಕ್ಷೇತ್ರದ ಸದ್ಯದ ಸ್ಥಿತಿ ನೋಡಿದ್ರೆ ಎಂಥವರಿಗೂ ಅರ್ಥವಾಗ್ತಿದೆ. ಅಸಲು, ಸಚಿವರು ಮಾಡಿರೋ ಸಣ್ಣದೊಂದು ನಿರ್ಲಕ್ಷಕ್ಕೆ ಮುಂಡಗೋಡ ಪಟ್ಟಣ ಪಂಚಾಯತಿ ಸದ್ಯ ಕೊತ ಕೊತ ಕುದಿಯುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ. ಅವಿಶ್ವಾಸ ಮಂಡನೆಗೆ ಅರ್ಜಿ..! ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಅರ್ಜಿ ಸಲ್ಲಿಕೆಯಾಗಿದೆ. ಅದ್ಯಕ್ಷೆ ರೇಣುಕಾ ರವಿ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ್ ಹರ್ಮಲಕರ್ ವಿರುದ್ಧ ಅವಿಶ್ವಾಸಕ್ಕೆ ಅರ್ಜಿ ಸಲ್ಲಿಸಲಾಗಿದೆ. ಗಟ್ಟಿಯಾಗಿತ್ತು ಬಿಜೆಪಿ..! ಒಟ್ಟೂ 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ, ಮೂಲ ಬಿಜೆಪಿಗ 10 ಜನ ಸದಸ್ಯರಿದ್ದರು, ಆ ನಂತರದ ಬೆಳವಣಿಗೆಯಲ್ಲಿ ಶಿವರಾಮ್ ಹೆಬ್ಬಾರ್ ಬಳಗದಿಂದ ಗೆದ್ದು ಬಂದಿದ್ದ ನಾಲ್ವರು ಬಿಜೆಪಿ ಪಾಳಯ ಸೇರಿಕೊಂಡಿದ್ದರು. ಹೀಗಾಗಿ ಈ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಬಲ 14 ಕ್ಕೆ ಏರಿತ್ತು. ಕಮಲ ಪಡೆಗೆ ಗಟ್ಟಿ ನೆಲೆ ಸಿಕ್ಕಿತ್ತು. 15-...