ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ಆಧ್ಯಕ್ಷರ ಆಯ್ಕೆ ಕಸರತ್ತು, ಪಟ್ಟಕ್ಕೇರ್ತಾರಾ ರೇಣುಕಾ..?

ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮ ಪಂಚಾಯತಿಗೆ ಇಂದು ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ನೇತ್ರಾ ಹನುಮಂತ್ ಜಾಡರ್ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದೆ.

ಸಂಭಾವ್ಯ ಅಧ್ಯಕ್ಷೆ ರೇಣುಕಾ ಕೋಣನಕೇರಿ

ಒಟ್ಟೂ 13 ಸದಸ್ಯ ಬಲದ ಸಾಲಗಾಂವ್ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತರದ್ದೇ ಪಾರುಪತ್ಯ. ಹೀಗಾಗಿ, 15 ತಿಂಗಳ ಅಧಿಕಾರ ನಡೆಸಿರೋ ನೇತ್ರಾ ಹನುಮಂತ್ ಜಾಡರ್ ಅಧಿಕಾರ ಬಿಟ್ಟು ಕೊಟ್ಟಿದ್ದಾರೆ. ಈ ಮೂಲಕ ಮತ್ತೊಂದು 15 ತಿಂಗಳ ಅವಧಿಗೆ ನೂತನ ಅಧ್ಯಕ್ಷರ ಆಯ್ಕೆಗೆ ಅನುವು ಮಾಡಿ ಕೊಟ್ಟಿದ್ದಾರೆ.

ಆಧ್ಯಕ್ಷರಾಗ್ತಾರಾ ರೇಣುಕಾ..?
ಅಂದಹಾಗೆ, ಬಿಜೆಪಿಯೊಳಗಿನ ಸದಸ್ಯರ ಒಳ ಒಪ್ಪದಂತೆ ಸಾಲಗಾಂವ್ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ ರೇಣುಕಾ ಮಂಜು ಕೋಣನಕೇರಿ ಆಯ್ಕೆಯಾಗೋದು ಬಹುತೇಕ ಫಿಕ್ಸ್ ಎನ್ನುವಂತಾಗಿದೆ. ಹೀಗಾಗಿ, ಇಂದು ನಡೆಯಲಿರೋ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಗೊಂದಲವಿಲ್ಲ..
ಸಾಲಗಾಂವ್ ಗ್ರಾಮ ಪಂಚಾಯತಿಯಲ್ಲಿ ಬಹುತೇಕ ಬಿಜೆಪಿ ಬೆಂಬಲಿತರೇ ಆಯ್ಕೆಯಾಗಿರೋ ಕಾರಣಕ್ಕೆ ನೂತನ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಗೊಂದಲ ಇಲ್ಲ ಎನ್ನುವ ಮಾಹಿತಿ ಲಭ್ಯವಾಗಿದೆ. ಆದ್ರೆ, ಕೊನೆ ಕ್ಷಣದಲ್ಲಿ ಅದೇನಾಗತ್ತೊ ಅನ್ನೋ ಕುತೂಹಲವಂತೂ ಇದ್ದೇ ಇದೆ. ಹೀಗಾಗಿ, ಮದ್ಯಾನ 1 ಒಂದು ಗಂಟೆಯಷ್ಟೊತ್ತಿಗೆ ನೂತನ ಅಧ್ಯಕ್ಷರ ಆಯ್ಕೆ ಬಹುತೇಕ ಅಂತಿಮವಾಗಿರುತ್ತದೆ.

error: Content is protected !!