ಇನ್ನೂ ಕೆಲಸ ಬಾಕಿ ಇದೆ, ಮುಗಿದ ಮೇಲೆಯೇ ರಾಜೀನಾಮೆ ಅಂದ್ರು ಇಂದೂರು ಗ್ರಾಪಂ ಅಧ್ಯಕ್ಷೆ..!


ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಉಪಾಧ್ಯಕ್ಷರ ರಾಜೀನಾಮೆ ಬಿಕ್ಕಟ್ಟು ಸದ್ಯಕ್ಕೆ ಬಗೆಹರಿಯುವ ಯಾವ ಲಕ್ಷಣಗಳೂ ತೋರುತ್ತಿಲ್ಲ. ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ “ಇನ್ನಷ್ಟು ಪ್ರಮುಖ ಕೆಲಸಗಳಿವೆ ಅವೇಲ್ಲ ಮುಗಿಯೋವರೆಗೆ ರಾಜೀನಾಮೆ ಕೊಡಲ್ಲ” ಅಂತಾ ಕಡ್ಡಿ ಮುರಿದಂತೆ ಹೇಳಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿರೋ ಅಧ್ಯಕ್ಷರು ಸ್ಪಷ್ಟವಾಗಿ ಉತ್ತರಿಸಿದ್ದಾರೆ.

ನಮ್ಮಲ್ಲಿ ಗೊಂದಲವೇ ಇಲ್ಲ..!
ಅಸಲು, ನಮ್ಮಲ್ಲಿ ಯಾವ ಗೊಂದಲವೇ ಇಲ್ಲ. ನಾವೇಲ್ಲರೂ ಒಗ್ಗಟ್ಟಾಗೇ ಇದ್ದಿವಿ. ನಂಗೆ ನಮ್ಮ ಸದಸ್ಯರೇಲ್ಲರೂ ಬೆಂಬಲ ಕೊಟ್ಟಿದ್ದಾರೆ. ಆದ್ರೆ, ಕೋವಿಡ್ ಕಾರಣಕ್ಕಾಗಿ ಸಾಕಷ್ಟು ಅಭಿವೃದ್ಧಿಪರ ಕೆಲಸಗಳು ಬಾಕಿ ಉಳಿದಿವೆ. ಅವನ್ನೇಲ್ಲ ಪೂರೈಸಿದ ನಂತರ ನಾನು ರಾಜೀನಾಮೆ ನೀಡುತ್ತೇನೆ ಅಂದಿದ್ದಾರೆ ಅಧ್ಯಕ್ಷರು.

ನಮ್ಮ ಭೂಮಿ, ನಮ್ಮ ತೋಟ..!
ಇನ್ನು, ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ನಮ್ಮ ಭೂಮಿ, ನಮ್ಮ ತೋಟ ಯೋಜನೆಯಡಿ ಸಾಕಷ್ಟು ಫಲಾನುಭವಿಗಳಿದ್ದಾರೆ. ಆದ್ರೆ ಅದೇಷ್ಟೋ ವರ್ಷಗಳಿಂದ ಆ ಯೋಜನೆಯಡಿ ಭೂಮಿ ಹಂಚಿಕೆಯಾಗೇ ಇಲ್ಲ. ಯೋಜನೆಯ ಅನುಷ್ಠಾನದಲ್ಲಿ ಸಾಕಷ್ಟು ಎಡರು ತೊಡರು ಬಂದಿದ್ದವು. ಹೀಗಾಗಿ, ಅದನ್ನೇಲ್ಲ ನಾವು ಎದುರಿಸಿದ್ದೇವೆ. ಈಗ ಆ ಯೋಜನೆ ಅಂತಿಮ ಹಂತಕ್ಕೆ ತಂದು ನಿಲ್ಲಿಸಿದ್ದೇವೆ. ನಾನು ಸತ್ಯಕ್ಕಾಗಿ ಹೋರಾಡುತ್ತಿದ್ದೇನೆ. ಆ ಯೋಜನೆ ಫಲಾನುಭವಿಗಳಿಗೆ ಸಲ್ಲಬೇಕು ಅಲ್ಲಿವರೆಗೂ ನಾನು ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಅಂದ್ರು ಅಧ್ಯಕ್ಷರು.

ಕಸವಿಲೇವಾರಿ ಘಟಕ…!
ಇನ್ನು, ಇಂದೂರು ಹಾಗೂ ಕೊಪ್ಪ ಗ್ರಾಮದ ನಡುವೆ ಕಸವಿಲೇವಾರಿ ಘಟಕ ಸ್ಥಾಪನೆಗೆ ಮುಂದಾಗಿದ್ದೆವು. ಆದ್ರೆ, ಅಲ್ಲಿ ಸ್ಥಾಪನೆ ಮಾಡಲು ಆಗಲಿಲ್ಲ. ಈಗ ಕೊಪ್ಪ ಗ್ರಾಮದ ಹೊರವಲಯದಲ್ಲಿ ಘಟಕ ಸ್ಥಾಪನೆ ಮಾಡಲು ರೆಡಿಯಾಗಿದ್ದೇವೆ. ಅದರ ಶಂಕುಸ್ಥಾಪನೆ ಮಾಡಬೇಕಿದೆ. ಅದೂ ಕೂಡ ಸಚಿವ ಶಿವರಾಮ್ ಹೆಬ್ಬಾರ್ ಬಂದು ಶಂಕುಸ್ಥಾಪನೆ ಮಾಡುವವರೆಗೂ ನಾನು ರಾಜೀನಾಮೆ ನೀಡಲ್ಲ ಅಂತಿದಾರೆ ಅಧ್ಯಕ್ಷೆ ಅನ್ನಪೂರ್ಣ ಬೆಣ್ಣಿ.

ಬಿಕ್ಕಟ್ಟು..!
ಈ ಎಲ್ಲಾ ಕಾರಣಕ್ಕಾಗಿ, ಇಂದೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ರಾಜೀನಾಮೆ ಬಿಕ್ಕಟ್ಟು ಮತ್ತಷ್ಟು ಕಗ್ಗಂಟಾಗಿದೆ. ಯಾಕಂದ್ರೆ, ಸದ್ಯಕ್ಕೆ ಅವ್ರು ಹಾಕಿಕೊಂಡಿರೋ ಯೋಜನೆಗಳು ಅನುಷ್ಟಾನಗೊಳ್ಳಲು ಸಮಯ ಬೇಕಾಗಿದೆ. ಹೀಗಿದ್ದಾಗ, ನಾಳೆ, ನಾಡಿದ್ದು ಅನ್ನೋ ಮಾತೇ ಇಲ್ಲವೆನೋ ಎನ್ನುವಂತಾಗಿದೆ. ಇದೊಂದು ಅವಧಿಗೆ ಅನ್ನಪೂರ್ಣ ಬೆಣ್ಣಿಯವರೇ ಪೂರ್ಣ ಅವಧಿಗೆ ಅಧ್ಯಕ್ಷರಾಗಿ ಮುಂದುವರೆದ್ರೂ ಅಚ್ಚರಿಯಿಲ್ಲ.

error: Content is protected !!