ಹುಬ್ಬಳ್ಳಿಯಲ್ಲಿ ಇಂದು ಪೊಲೀಸ್ “ಸೂಪರ್ ಕಾಪ್”ಗಳ ಕಾರ್ಯಾಗಾರ ಮತ್ತು ಸಮ್ಮೇಳನ..!

ಹುಬ್ಬಳ್ಳಿ: ಕರ್ನಾಟಕ ಸೂಪರ್ ಕಾಪ್ ವಾಟ್ಸಾಪ್ ಗ್ರೂಪ್ ನೇತೃತ್ವದಲ್ಲಿ ಕರ್ನಾಟಕ ಪೊಲೀಸ್ ಅಪರಾಧ ವಿಭಾಗದ ಅಧಿಕಾರಿಗಳ ಕಾರ್ಯಾಗಾರ ಮತ್ತು ಪ್ರಥಮ ಸಮ್ಮೇಳನ ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ.

ಹುಬ್ಬಳ್ಳಿ ವಿದ್ಯಾನಗರದ ಜಿವಿಜಿ ಟೆಕ್ನಾಲಜಿ ಮತ್ತು ಇಂಜನೀಯರಿಂಗ್ ಕಾಲೇಜಿನ ಸಭಾಭವನದಲ್ಲಿ ನಡೆಯುತ್ತಿರುವ ಸಮ್ಮೇಳನದಲ್ಲಿ ಹಲವು ಜಿಲ್ಲೆಗಳ ಪೊಲೀಸ್ ಅಧಿಕಾರಿಗಳು ಭಾಗಿಯಾಗಿದ್ದಾರೆ.

ಹಲವು ಬಗೆಯ ಅಪರಾಧಗಳ ಬೆನ್ನತ್ತಿ ಆರೋಪಿಗಳ ಹೆಡೆಮುರಿ ಕಟ್ಟುವ “ಸೂಪರ್ ಕಾಪ್” ಗಳಿಗೆ ಮತ್ತಷ್ಟು ಹುರಿದುಂಬಿಸುವ ಕಾರ್ಯಾಗಾರ ಇದಾಗಿದ್ದು, ಉತ್ಸುಕತೆಯಿಂದಲೇ ನೂರಾರು ಪೊಲೀಸ್ ಅಧಿಕಾರಿಗಳು ಪಾಲ್ಗೊಂಡಿದ್ದಾರೆ.