ಸಚಿವ ಶಿವರಾಂ ಹೆಬ್ಬಾರ್ ಅದ್ಯಾಕೋ ಏನೋ ಕಾರ್ಯಕರ್ತರ ಮನಸಿನಾಳ ಅರ್ಥೈಸಿಕೊಳ್ಳುವಲ್ಲಿ ವಿಫಲರಾಗ್ತಿದಾರಾ..? ಇಂತಹದ್ದೊಂದು ಅನುಮಾನ, ಕ್ಷೇತ್ರದ ಸದ್ಯದ ಸ್ಥಿತಿ ನೋಡಿದ್ರೆ ಎಂಥವರಿಗೂ ಅರ್ಥವಾಗ್ತಿದೆ. ಅಸಲು, ಸಚಿವರು ಮಾಡಿರೋ ಸಣ್ಣದೊಂದು ನಿರ್ಲಕ್ಷಕ್ಕೆ ಮುಂಡಗೋಡ ಪಟ್ಟಣ ಪಂಚಾಯತಿ ಸದ್ಯ ಕೊತ ಕೊತ ಕುದಿಯುತ್ತಿದೆ. ಬಿಜೆಪಿಯೊಳಗಿನ ಆಂತರಿಕ ಬೇಗುದಿ ಸ್ಫೋಟಗೊಂಡಿದೆ.
ಅವಿಶ್ವಾಸ ಮಂಡನೆಗೆ ಅರ್ಜಿ..!
ಮುಂಡಗೋಡ ಪಟ್ಟಣ ಪಂಚಾಯತ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಿಸಲು ಅರ್ಜಿ ಸಲ್ಲಿಕೆಯಾಗಿದೆ. ಅದ್ಯಕ್ಷೆ ರೇಣುಕಾ ರವಿ ಹಾವೇರಿ ಹಾಗೂ ಉಪಾಧ್ಯಕ್ಷ ಮಂಜುನಾಥ್ ಹರ್ಮಲಕರ್ ವಿರುದ್ಧ ಅವಿಶ್ವಾಸಕ್ಕೆ ಅರ್ಜಿ ಸಲ್ಲಿಸಲಾಗಿದೆ.
ಗಟ್ಟಿಯಾಗಿತ್ತು ಬಿಜೆಪಿ..!
ಒಟ್ಟೂ 19 ಸದಸ್ಯ ಬಲದ ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ, ಮೂಲ ಬಿಜೆಪಿಗ 10 ಜನ ಸದಸ್ಯರಿದ್ದರು, ಆ ನಂತರದ ಬೆಳವಣಿಗೆಯಲ್ಲಿ ಶಿವರಾಮ್ ಹೆಬ್ಬಾರ್ ಬಳಗದಿಂದ ಗೆದ್ದು ಬಂದಿದ್ದ ನಾಲ್ವರು ಬಿಜೆಪಿ ಪಾಳಯ ಸೇರಿಕೊಂಡಿದ್ದರು. ಹೀಗಾಗಿ ಈ ಪಟ್ಟಣ ಪಂಚಾಯತಿಯಲ್ಲಿ ಬಿಜೆಪಿ ಬಲ 14 ಕ್ಕೆ ಏರಿತ್ತು. ಕಮಲ ಪಡೆಗೆ ಗಟ್ಟಿ ನೆಲೆ ಸಿಕ್ಕಿತ್ತು.
15- 15 ಒಪ್ಪಂದ..!
ಅಸಲಿಗೆ, ಮುಂಡಗೋಡ ಪಟ್ಟಣ ಪಂಚಾಯತಿಯಲ್ಲಿ ಬಹುಮತ ಹೊಂದಿದ್ದ ಬಿಜೆಪಿಗೆ ಒಳ ಒಪ್ಪಂದದಂತೆ ರೇಣುಕಾ ಹಾವೇರಿ ಅಧ್ಯಕ್ಷೆಯಾಗಿ ಪಟ್ಟಕ್ಕೇರಿದ್ದರು, ಅದ್ರಂತೆ ಉಪಾಧ್ಯಕ್ಣರಾಗಿ ಮಂಜುನಾಥ್ ಹರ್ಮಲಕರ್ ಅಧಿಕಾರ ವಹಿಸಿಕೊಂಡಿದ್ರು. 15 ತಿಂಗಳ ಅವಧಿಗೆ ಅಧಿಕಾರ ಮುಗಿಸಿ, ಆ ನಂತರದಲ್ಲಿ ಜಯಸುಧಾ ಬಸವರಾಜ್ ಬೊವಿವಡ್ಡರ್ ಗೆ ಪಟ್ಟ ಕಟ್ಟಲು ಅವತ್ತೇ ತೀರ್ಮಾನಿಸಲಾಗಿತ್ತು. ಹಾಗೇನೆ ಉಪಾಧ್ಯಕ್ಷ ಸ್ಥಾನಕ್ಕೆ ಶ್ರೀಕಾಂತ್ ಸಾನುರನ್ನೇ ಕೂರಿಸೋದು ಬಹುತೇಕ ಫಿಕ್ಸ್ ಮಾಡಲಾಗಿತ್ತು.
ಕ್ಯಾರೇ ಅಂದಿಲ್ವಾ ಸಚಿವ್ರು..?
ಆದ್ರೆ, 15 ತಿಂಗಳ ಮುಗಿದು 18 ಆದ್ರೂ ಅದರ ಉಸಾಬರಿಗೆ ಯಾರೂ ಹೋಗಲೇ ಇಲ್ಲ. ಈ ಬಗ್ಗೆ ಸಾಕಷ್ಟು ಬಾರಿ ಸಚಿವರ ಗಮನಕ್ಕೆ ತಂದ್ರೂ ಕ್ಯಾರೇ ಅನ್ನಲಿಲ್ಲವಂತೆ ಹೀಗಾಗಿ ಇವತ್ತು ಇಲ್ಲಿನ ಬರೋಬ್ಬರಿ 12 ಸದಸ್ಯರು ಮೈ ಕೊಡವಿ ಎದ್ದಿದ್ದಾರೆ. ಮಾತು ಕೊಟ್ಟಂತೆ ನಡೆದುಕೊಳ್ಳಿ ಅಂತಾ ಒಡಲಾಳದ ಸಾತ್ವಿಕ ಕೋಪ ಆಸ್ಟೋಟಿಸಿದ್ದಾರೆ. ಅವಿಶ್ವಾಸ ನಿರ್ಣಯಕ್ಕೆ ಸಭೆ ಕರೆಯಿರಿ ಅಂತಾ ಆಗ್ರಹಿಸಿದ್ದಾರೆ.
ನಿಮ್ಮವರದ್ದೇ ಸಿಟ್ಟು..!
ಅಸಲು, ಹೀಗೆ ಅಧ್ಯಕ್ಷ ಉಪಾಧ್ಯಕ್ಷರ ವಿರುದ್ಧ ಸಿಡಿದು ನಿಂತವರಲ್ಲಿ ಐವರು ಮೂಲ ಬಿಜೆಪಿಗರಾದ್ರೆ, ನಾಲ್ಕು ಜನ ಕಾಂಗ್ರೆಸ್ಸಿಗರು. ವಿಪರ್ಯಾಸ ಅಂದ್ರೆ ಹೆಬ್ಬಾರ್ ಅಂಗಳದಿಂದ ಸಿಡಿದು ಬಂದು ಬಿಜೆಪಿಗರ ಜೊತೆ ಹೆಜ್ಜೆ ಹಾಕಿದ್ದ ಮೂವರು ಸದಸ್ಯರೂ ಕೂಡ ಈ ಅವಿಶ್ವಾಸ ಗೊತ್ತುವಳಿ ಅರ್ಜಿಗೆ ಸಹಿ ಹಾಕಿದ್ದಾರೆ. ಇದ್ರೊಂದಿಗೆ, ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಹೀಗಾಗಿ, ಈಗ ಚೆಂಡು ಮುಖ್ಯಾಧಿಕಾರಿಯ ಅಂಗಳದಲ್ಲಿದೆ.
ಇನ್ನಾದ್ರೂ ಯೋಚಿಸಲಿ..!
ಅಂದಹಾಗೆ, ಪಬ್ಲಿಕ್ ಫಸ್ಟ್ ಗೆ ಪ್ರತಿಕ್ರಿಯಿಸಿರೋ ಸಿಡಿದೇದ್ದ ಸದಸ್ಯರು ನಮ್ಮ ತಾಳ್ಮೆಗೂ ಒಂದು ಮಿತಿ ಇದೆ. ಅದನ್ನ ಸಚಿವ್ರು ಗಮನಿಸಲೇ ಇಲ್ಲ. ಹೀಗಾಗಿ ನಾವು ಸಿಡಿದೇಳಬೇಕಾಯ್ತು ಅಂತಿದಾರೆ. ಹೀಗಾಗಿ ಇಷ್ಟರ ಮೇಲಾದ್ರೂ ಮಾನ್ಯ ಸಚಿವರು ಈ ಕಡೆ ಗಮನ ಹರಿಸಬೇಕಿದೆ. ಇಲ್ಲವಾದಲ್ಲಿ ಬಿಜೆಪಿಯೊಳಗಿನ ಆಂತರಿಕ ಕದನ ಮತ್ತಷ್ಟು ಸಿಡಿದು ಏಳುವುದರಲ್ಲಿ ಎರಡು ಮಾತಿಲ್ಲ.