ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರಾಗಿ
ಬಿಜೆಪಿ ಬೆಂಬಲಿತ ಸಂತೋಷ ಸಣ್ಣಮನಿ ಆಯ್ಕೆಯಾಗಿದ್ದಾರೆ. ಇದ್ರೊಂದಿಗೆ ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲ ಪಾಳಯಕ್ಕೆ ಭರ್ಜರಿ ಜಯ ಸಿಕ್ಕಿದೆ.
13 ಸದಸ್ಯರಲ್ಲಿ 9 ರ ಬಲ..!
ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಆದ್ರೆ, ಇಂದು ನಡೆದ ಚುನಾವಣೆಯಲ್ಲಿ ಬರೋಬ್ಬರಿ 9 ಜನರ ಬೆಂಬಲದೊಂದಿಗೆ ಸಂತೋಷ ಸಣ್ಣಮನಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಹೆಬ್ಬಾರ್ ಆಶೀರ್ವಾದ..!
ಇನ್ನು, ಭರ್ಜರಿ ಗೆಲುವು ಸಾಧಿಸಿದ ನೂತನ ಅಧ್ಯಕ್ಷ ಸಂತೋಷ ಸಣ್ಣಮನಿ, ನನಗೆ ಅಧ್ಯಕ್ಷ ಸ್ಥಾನ ಸಿಕ್ಕಿದ್ದು ಸಚಿವ ಶಿವರಾಮ್ ಹೆಬ್ಬಾರ್ ಆಶೀರ್ವಾದದ ಬಲದಿಂದ ಅಂತಾ ಹೇಳಿದ್ರು. ಪಬ್ಲಿಕ್ ಫಸ್ಟ್ ಜೊತೆ ಮೊದಲ ಪ್ರತಿಕ್ರಿಯೆ ಹಂಚಿಕೊಂಡ ಸಂತೋಷ, ಸ್ಥಳೀಯ ಬಿಜೆಪಿ ಮುಖಂಡರುಗಳಿಗೆ ಧನ್ಯವಾದ ತಿಳಿಸಿದ್ರು.
ಕಾಂಗ್ರೆಸ್ ಗೆ ಬೆಂಬಲಿಸಿದ್ದು 4..
ಇನ್ನು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿದ್ದ ಇಸ್ಮಾಯಿಲ್ ಗೆ ಕೇವಲ 4 ಸದಸ್ಯರು ಬೆಂಬಲಿಸಿದ್ದು ಚುನಾವಣೆಯಲ್ಲಿ ಸೋಲುಂಟಾಗಿದೆ.