ಮುಂಡಗೋಡ: ತಾಲೂಕಿನ ಬಾಚಣಕಿ ಗ್ರಾಮ ಪಂಚಾಯತಿಗೆ ನೂತನ ಅಧ್ಯಕ್ಷರ ಆಯ್ಕೆ ನಡೆಯುತ್ತಿದೆ. ಇಂದು ಮದ್ಯಾನ 1 ಗಂಟೆಯ ನಂತರ ನಡೆಯಲಿರೋ ಚುನಾವಣೆಯಲ್ಲಿ ಯಾರ ಕೈಗೆ ಅಧಿಕಾರದ ಚುಕ್ಕಾಣಿ..? ಅನ್ನೋ ಕುತೂಹಲಕ್ಕೆ ಉತ್ತರ ಸಿಗಲಿದೆ.
13 ಸದಸ್ಯ ಬಲ..!
ಅಂದಹಾಗೆ, 13 ಸದಸ್ಯ ಬಲದ ಬಾಚಣಕಿ ಗ್ರಾಮ ಪಂಚಾಯತಿಯಲ್ಲಿ, ಈಗಾಗಲೇ ಕಾಂಗ್ರೆಸ್ ಬೆಂಬಲಿತ 8 ಸದಸ್ಯರು, ಬಿಜೆಪಿ ಬೆಂಬಲಿತ 5 ಸದಸ್ಯರು ಇದ್ರು. ಹೀಗಾಗಿನೇ ಕಾಂಗ್ರೆಸ್ ಬೆಂಬಲಿತ ನಾಗರಾಜ್ ಉಪಾದ್ಯೆ ಅಧ್ಯಕ್ಷರಾಗಿ ಅಧಿಕಾರದಲ್ಲಿದ್ರು. ಅದ್ರಂತೆ, ಅರಶಿಣಗೇರಿಯ ತಿಪ್ಪವ್ವ ಢಾಕಪ್ಪ ಲಮಾಣಿ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ರು.
15-15 ಒಪ್ಪಂದ..!
ಆದ್ರೆ, ಅವತ್ತು ಅಧ್ಯಕ್ಷರ ಆಯ್ಕೆ ಹೊತ್ತಲ್ಲಿ ಒಪ್ಪಂದವೊಂದನ್ನು ಮಾಡಿಕೊಂಡಿದ್ದ ಸದಸ್ಯರು, 15 ತಿಂಗಳ ಅವಧಿಗಾಗಿ ಮಾತ್ರ ಅಧ್ಯಕ್ಷರ ಅಧಿಕಾರ ಸೀಮಿತಗೊಳಿಸಿದ್ರು. ಆ ನಂತರ ಬೇರೊಬ್ಬರಿಗೆ ಸ್ಥಾನ ಬಿಟ್ಟುಕೊಡಲು ಒಪ್ಪಂದ ಮಾಡಿಕೊಂಡಿದ್ರು. ಅದ್ರಂತೆ, ನಾಗರಾಜ್ ಉಪಾದ್ಯ ಮಾತು ಕೊಟ್ಟಂತೆ 15 ತಿಂಗಳ ನಂತರ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದರು. ಹೀಗಾಗಿ, ಸಧ್ಯ ಅಧ್ಯಕ್ಷರ ಚುನಾವಣೆ ನಡೆಯುತ್ತಿದೆ. ಇದು ಒಂದು ಭಾಗ.
ಕಾಂಗ್ರೆಸ್ ಇಬ್ಬಾಗ..?
ಯಾವಾಗ, ನಾಗರಾಜ್ ಉಪಾದ್ಯೆ ಅಧ್ಯಕ್ಷ ಸ್ಥಾನಕ್ಕೆ ರಿಸೈನ್ ಮಾಡಿದ್ರೋ ಆ ಕ್ಷಣದಿಂದಲೇ ಬೇರೊಂದು ಆಟ ಶುರುವಾಯಿತು. ಅಧ್ಯಕ್ಷರ ಬದಲಾವಣೆ ಆದ್ರೆ ಅಧ್ಯಕ್ಷರಾಗಿ ಸಂತೋಷ ಸಣ್ಣಮನಿಯವರನ್ನ ನೇಮಿಸುವಂತೆ ದಾಳ ಉರುಳಿಸಿದ್ರು. ಹೀಗಾಗಿ, ಮೂವರು ಕಾಂಗ್ರೆಸ್ ಬೆಂಬಲಿತ ಸದಸ್ಯರೊನಂದಿಗೆ ಬಿಜೆಪಿ ಪಕ್ಷದ ಕಡೆ ವಾಲಿಕೊಂಡ್ರು. ಹೀಗಾಗಿ, ಸದ್ಯ ಬಿಜೆಪಿಯ ಸಂಖ್ಯಾಬಲ 8 ಕ್ಕೆ ಏರಿದ್ದು ಸಂತೋಷ ಸಣ್ಣಮನಿ ಅಧ್ಯಕ್ಷರಾಗೋದು ಬಹುತೇಕ ಪಕ್ಕಾ ಆದಂತಾಗಿದೆ.
ಇದು ಕಾಂಗ್ರೆಸ್ ಕತೆ..!
ಇನ್ನು ಬಾಚಣಕಿಯಲ್ಲಿ ಕಾಂಗ್ರೆಸ್ ಬೆಂಬಲಿತ ಬಣವೂ ಸುಮ್ಮನೆ ಕುಳಿತಿಲ್ಲ, ಬದಲಾಗಿ, ಅಧ್ಯಕ್ಷ ಸ್ಥಾನಕ್ಕಾಗಿ ಪೈಪೋಟಿ ನಡೆಸಲು ಇಸ್ಮಾಯಿಲ್ ಹಜರೇಸಾಬ್ ಶೇಖ್ ಅಲಿ ಎಂಬುವರನ್ನು ಕಣಕ್ಕಿಳಿಸಿದೆ. ಹೀಗಾಗಿ, ಸದ್ಯ ಬಾಚಣಕಿಯಲ್ಲೇ ಬೀಡು ಬಿಟ್ಟಿರೊ ತಾಲೂಕಿನ ಕಾಂಗ್ರೆಸ್ ಮುಖಂಡರು, ಈ ಚುನಾವಣೆ ತುರುಸಿಗೆ ಕಾರಣರಾಗಿದ್ದಾರೆ. ಆದ್ರೆ ಸಂಖ್ಯಾಬಲ ಮಾತ್ರ ಬಿಜೆಪಿ ಬೆಂಬಲಿತ ಅಭ್ಯರ್ಥಿಯ ಪರವಾಗಿದ್ದು, ಮೇಲ್ನೋಟಕ್ಕೆ ಸಂತೋಷ ಸಣ್ಣಮನಿ ಗೆಲುವು ನಿಶ್ಚಿತ ಎನ್ನುವಂತಾಗಿದೆ.