ಇಂದೂರು ಗ್ರಾಮ ಪಂಚಾಯತಿಯ ನಿರ್ಲಕ್ಷಕ್ಕೆ ಇಂದೂರಿನ ಅದೊಂದು ಬಡ ಕುಟುಂಬ ಬೀದಿಗೆ ಬಿದ್ದಂತಾಗಿದೆ. ಕಳೆದ ಮೂರು ವರ್ಷಗಳಿಂದ ಜೀವ ಅಂಗೈಯಲ್ಲಿ ಹಿಡಿದು ಬದುಕುತ್ತಿದೆ. ಆಗಲೋ ಈಗಲೋ ಬೀಳುವ ಮನೆಯಲ್ಲಿ ಬದುಕು ನಡೆಸುತ್ತಿದೆ. ನಿನ್ನೆ ರಾತ್ರಿಯೂ ಮಳೆಯಿಂದ ಅರ್ಧಕ್ಕರ್ದ ಗೋಡೆ ಕುಸಿದು ಬಿದ್ದಿದ್ದು ಮತ್ತಷ್ಟು ಆತಂಕದಲ್ಲಿ ಬಾಳುವಂತಾಗಿದೆ. ಹೌದು, ಇಂದೂರಿನ ಪ್ಲಾಟ್ ಏರಿಯಾದಲ್ಲಿ ಕಳೆದ ಮೂರು ವರ್ಷಗಳಿಂದ ಮನೆಯಿಲ್ಲದೇ ಮುರುಕು ಮನೆಯಲ್ಲಿ ವಾಸಿಸುತ್ತಿರೋ ಈ ಕುಟುಂಬ, ಈಗ ಅಕ್ಷರಶಃ ಆತಂಕದಲ್ಲಿದೆ. ಕಲ್ಪನಾ ಕಲಿವೀರ್ ಕಟ್ಟಿಮನಿ ಎಂಬುವ ಬಡ ಕುಟುಂಬದ ವ್ಯಥೆ ಹೇಳತೀರದ್ದಾಗಿದೆ. ಕಳೆದ ಒಂದು ವಾರದಿಂದ ನಿರಂತರ ಸುರಿಯುತ್ತಿರೋ ಮಳೆ ಈ ಕುಟುಂಬಕ್ಕೆ ಮತ್ತಷ್ಟು ಜೀವ ಹಿಂಡಿದೆ. ನಿನ್ನೆ ರಾತ್ರಿ ಮಳೆರಾಯನ ಅರ್ಭಟ ಗಾಯದ ಮೇಲೆ ಬರೆ ಎಳೆದಿದೆ. ಹಾಗೋ ಹೀಗೋ ಬದುಕುತ್ತಿದ್ದ ಮನೆ ಮತ್ತೆ ಮುರಿದು ಬಿದ್ದಿದೆ. ಮನೆ ಕೊಡಲಿಲ್ಲ..! ಕಳೆದ ಮೂರು ವರ್ಷಗಳಿಂದ ಇಲ್ಲಿನ ಗ್ರಾಮ ಪಂಚಾಯತಿಗೆ ಮನೆ ಕೊಡಿ, ಮನೆ ಕೊಡಿ ಅಂತಾ ಎಡತಾಕುತ್ತಿರೊ ಈ ಕುಟುಂಬಕ್ಕೆ...
Top Stories
ಶಿವರಾಮ್ ಹೆಬ್ಬಾರ್ ಅಧ್ಯಕ್ಷತೆಯಲ್ಲಿ, ಮುಂಡಗೋಡ ತಾಲೂಕಾ ತ್ರೈಮಾಸಿಕ ಕೆಡಿಪಿ ಸಭೆ..!
ಇದು 108 ಅಂಬುಲೆನ್ಸ್ ಸಿಬ್ಬಂದಿಯ ಪ್ರಮಾಣಿಕ, ಮಾನವೀಯ ಕಾರ್ಯ.. 6 ತಿಂಗಳ ನಂತ್ರ ವ್ಯಕ್ತಿಯ ವಸ್ತುಗಳು ಮರಳಿದ್ದೇ ರೋಚಕ..?
ನಿವೃತ್ತ IPS ಅಧಿಕಾರಿ DG-IGP ಓಂ ಪ್ರಕಾಶ್ ಬರ್ಬರ ಹತ್ಯೆ..! ಪತ್ನಿಯೇ ಕೊಲೆ ಮಾಡಿರೋ ಶಂಕೆ..!
ಬೆಳ್ಳಂ ಬೆಳಿಗ್ಗೆ ಬೆಚ್ಚಿ ಬಿದ್ದ ಕಾರವಾರ, ನಗರಸಭೆಯ ಮಾಜಿ ಸದಸ್ಯನ ಭೀಕರ ಹತ್ಯೆ, ಸತೀಶ್ ಕೊಳಂಕರ್ ನ ನಡುರಸ್ತೆಯಲ್ಲೇ ಕೊಚ್ಚಿ ಕೊಲೆ..!
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿದ ಸಿಎಂ, ಆದ್ರೆ, ವಿ.ಎಸ್.ಪಾಟೀಲರ “ಅಧ್ಯಕ್ಷಗಿರಿ” ಸೇಫ್..!
ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಂಡಿದೆ. ನೇಮಕಾತಿ ರದ್ದುಗೊಳಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಆದ್ರೆ, ಅಚ್ಚರಿಯೆಂಬಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಸೇಫ್ ಆಗಿದ್ದಾರೆ. 3 ವರ್ಷದಿಂದ..! ಕಳೆದ ಮೂರು ವರ್ಷಗಳಿಂದ ಅಂದ್ರೆ, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದ, ವಿ.ಎಸ್. ಪಾಟೀಲ್ ರಿಗೆ ಈ ಬಾರಿ ಕೋಕ್ ನೀಡಲಾಗತ್ತೆ ಅನ್ನೊ ಮಾತುಗಳಿದ್ದವು. ಆದ್ರೆ, ಸಿಎಂ ಬಸವರಾಜ್ ಬೊಮ್ಮಾಯಿ ರದ್ದುಗೊಳಿಸಿರೋ ಪಟ್ಟಿಯಲ್ಲಿ ವಿ.ಎಸ್.ಪಾಟೀಲರ ಹೆಸರು ಇಲ್ಲ. ಹೀಗಾಗಿ, ಸದ್ಯ ವಿ.ಎಸ್.ಪಾಟೀಲರು ಸೇಫ್ ಆಗಿದ್ದಾರೆ ಎನ್ನಲಾಗಿದೆ. ಅನಂತ್ ಹೆಗಡೆ ಆಶೀಸರ್ ಔಟ್..! ಇನ್ನು, ಉತ್ತರ ಕನ್ನಡದಿಂದ ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಅನಂತ್ ಹೆಗಡೆ ಆಶೀಸರ್ ನೇಮಕಾತಿ ರದ್ದುಗೊಂಡಿದೆ. ಹೀಗಾಗಿ, ಜಿಲ್ಲೆಯ ಮಟ್ಟಿಗೆ ಒಂದು ಅಧ್ಯಕ್ಷಗಿರಿ ಔಟ್ ಆದಂತಾಗಿದೆ. ಟವೇಲ್ ಹಾಕಿದ್ದವರಿಗೂ ಶಾಕ್..? ಅಂದಹಾಗೆ, ವಿ.ಎಸ್.ಪಾಟೀಲರಿಗೆ ಬಹುತೇಕ ಕೋಕ್ ಕೊಡೋದು ಕನ್ಪರ್ಮ ಅಂತಲೇ ಕಾದು ಕುಳಿತಿದ್ದ ಕೆಲವು ಆಕಾಂಕ್ಷಿಗಳಿಗೆ ನಿರಾಸೆ...
ಮಳೆಯಿಂದ ಗೋಡೆ ಕುಸಿದು ತಾಯಿ ಮಗಳು ಸ್ಥಳದಲ್ಲೇ ಸಾವು, ಹಳಿಯಾಳದ ಮುರ್ಕವಾಡದಲ್ಲಿ ಮನಕಲಕುವ ಘಟನೆ..!
ಹಳಿಯಾಳ: ತಾಲೂಕಿನಲ್ಲಿ ಮಳೆಯಿಂದ ಭಾರೀ ಅನಾಹುತವಾಗಿದೆ. ನಿರಂತರ ಮಳೆಯ ಪರಿಣಾಮ ಮಣ್ಣಿನ ಗೋಡೆ ಕುಸಿದು ತಾಯಿ ಮಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮುರ್ಕವಾಡ ಗ್ರಾಮದಲ್ಲಿ ಘಟನೆ ನಡೆದಿದೆ. ರುಕ್ಮಿಣಿ ವಿಠ್ಠಲ್ ಮಾಚಕ (37), ಶ್ರೀದೇವಿ ವಿಠ್ಠಲ್ ಮಾಚಕ (13) ಸಾವನ್ನಪ್ಪಿದ ದುರ್ದೈವಿಗಳಾಗಿದ್ದಾರೆ. ಇಂದು ಬೆಳಗಿನ ಜಾವ ಮನೆ ಗೋಡೆ ಕುಸಿದು, ಮನೆ ಗೋಡೆ ಪಕ್ಕದಲ್ಲಿ ಮಲಗಿದ್ದ ತಾಯಿ ಮಗಳ ದುರಂತ ಸಾವು ಕಂಡಿದ್ದಾರೆ. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನಿರಂತರ ಮಳೆ ನೀರಿಗೆ ಗೋಡೆ ನೆನದು ಕುಸಿತವಾಗಿದರ. ಘಟನಾ ಸ್ಥಳಕ್ಕೆ ಹಳಿಯಾಳ ತಹಶಿಲ್ದಾರ ಪ್ರಕಾಶ ಗಾಯಕವಾಡ ಹಾಗೂ ತಾ.ಪಂ ಇಓ ಪರಶುರಾಮ್ ಗಸ್ತಿ ಹಾಗೂ ಅಧಿಕಾರಿಗಳ ತಂಡ ಬೇಟಿ ಪರಿಶೀಲನೆ ನಡೆಸಿದ್ದಾರೆ.
ಸನವಳ್ಳಿ ಪ್ಲಾಟ್ ಬಳಿ ಅಪಘಾತ, ಬಸನಕಟ್ಟಿಯ ದಂಪತಿಗೆ ಗಾಯ..!
ಮುಂಡಗೋಡ: ತಾಲೂಕಿನ ಸನವಳ್ಳಿ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲಿದ್ದ ದಂಪತಿಗೆ ಗಂಭೀರ ಗಾಯವಾಗಿದೆ. ಶಿಗ್ಗಾವಿ ತಾಲೂಕಿನ ಬಸನಕಟ್ಟಿ ಗ್ರಾಮದ ನಾಗರಾಜ್ ಲಕ್ಷ್ಮಣ ಅಂಬಿಗೇರ(42) ಹಾಗೂ ಅವ ನ ಪತ್ನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ತರಲಾಗಿತ್ತು, ಆದ್ರೆ, ಗಂಭೀರ ಗಾಯಗೊಂಡಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇನ್ನು, ಮುಂಡಗೋಡಿನಿಂದ ಸಂತೆ ಮುಗಿಸಿಕೊಂಡು ಬಸನಕಟ್ಟಿಗೆ ಬೈಕ್ ಮೂಲಕ ತೆರಳುತ್ತಿದ್ದಾಗ, ಬಂಕಾಪುರ ಕಡೆಯಿಂದ ಬಂದ ಕಾರ್ ಡಿಕ್ಕಿಯಾಗಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಮೇಲಿದ್ದ ದಂಪತಿ ಹಾರಿ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ. ಕಾರಿನಲ್ಲಿ ಇರುವವರು ಸ್ಥಳದಲ್ಲಿ ಕಂಡುಬಂದಿಲ್ಲ. KA-27 N-6454 ನೋಂದಣಿಯ ಕಾರ್ ಇದಾಗಿದ್ದು ಸ್ಥಳದಲ್ಲಿ ಕಾರು ಬಿಟ್ಟು ಹೋಗಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರು ಕೊಪ್ಪದ ಈ ರಸ್ತೆಯಲ್ಲಿ ಸಂಚರಿಸಲು “ಗುಂಡಿ”ಗೆ ಗಟ್ಟಿ ಇರಬೇಕು..! ಅಧಿಕಾರಿಗಳೇ ಏನಿದು ಅವ್ಯವಸ್ಥೆ..?
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಅದೊಂದು ರಸ್ತೆ ಹದಗೆಟ್ಟು ಹಳ್ಳ ಹಿಡಿದಿದೆ. ಹಾಗಂತ, ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದಾರೆ. ಕೊಪ್ಪ ಗ್ರಾಮದಿಂದ ಟಿಬೇಟಿಯನ್ ಕ್ಯಾಂಪ್ ನಂಬರ್ 3 ಕ್ಕೆ ಮಾರ್ಗ ಕಲ್ಪಿಸುವ ರಸ್ತೆ ನಡೆದಾಡಲೂ ಆಗದ ಸ್ಥಿತಿಗೆ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ ಅನ್ನೋದು ಜನರ ಜೀವ ಹಿಂಡುತ್ತಿದೆ. ದಶಕಗಳ ಸಮಸ್ಯೆ..! ಸುಮಾರು 2 ಕೀಮಿ ಇರೋ ರಸ್ತೆ ದಶಕಗಳಿಂದಲೂ ಯಥಾಸ್ಥಿತಿಯಲ್ಲಿದೆ. ನಿತ್ಯವೂ ಇಲ್ಲಿ ಸಂಚರಿಸುವ ಜನ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ಉ… ಉಪ್ಪಿನಕಾಯಿ ಹಾಕ್ತಿದಾರೆ. ರಸ್ತೆಯ ಅದ್ವಾನಗಳ ಬಗ್ಗೆ ಅದೇಷ್ಟೇ ಬಡಕೊಂಡ್ರೂ ಇದುವರೆಗೂ ಯಾರೂ ಕ್ಯಾರೇ ಅಂದಿಲ್ಲವಂತೆ. ಹಾಗಾಗಿ, ಇಲ್ಲಿನ ಜನ ಆಕ್ರೋಶಗೊಂಡಿದ್ದಾರೆ. ಕಣ್ಣಿದ್ದೂ ಕುರಡಾಗಿರೋ ಅಧಿಕಾರಿಗಳ ವಿರುದ್ಧ ಶಪಿಸುತ್ತಿದ್ದಾರೆ. ಆದ್ರೂ ಯಾರಂದ್ರೆ ಯಾರೂ ಈ ಕಡೆ ಕಣ್ಣೆತ್ತಿ ನೋಡುತ್ತಿಲ್ಲ. ಪಿ.ಜಿ.ತಂಗಚ್ಚನ್ ಆಕ್ರೋಶ..! ಈ ಕಾರಣಕ್ಕಾಗೇ, ಇಲ್ಲಿನ ನಿವಾಸಿ ಪಿ.ಜಿ.ತಂಗಚ್ಚನ್ ಎಂಬುವವರು, ಹದಗೆಟ್ಟ ರಸ್ತೆಯ ಪೋಟೋಗಳನ್ನು ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ ಆಕ್ರೋಶ...
ತ್ರಿವಳೀ ಮಕ್ಕಳಿಗೆ ಜನ್ಮ ನೀಡಿದ ಮಹಾತಾಯಿ, ಎರಡು ಗಂಡು, ಒಂದು ಹೆಣ್ಣು ಮಗು ಜನನ..!
ಕುಮಟಾ: ಮಹಾತಾಯಿಯೊಬ್ರು ಮೂರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ಕುಮಟಾದ ಖಾಸಗಿ ಆಸ್ಪತ್ರೆಯಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾಳೆ. ಗೀತಾ ಪಟಗಾರ ಎಂಬುವ ಮಹಿಳೆಯೇ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದವಳಾಗಿದ್ದು, ಮದುವೆಯಾಗಿ 11ವರ್ಷದ ಬಳಿಕ ಎರಡು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಸದ್ಯ ಮೂರು ಮಕ್ಕಳು ಆರೋಗ್ಯವಾಗಿವೆ.
ಯಲ್ಲಾಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ, ಅಕ್ರಮವಾಗಿ ಸಾಗಿಸುತ್ತಿದ್ದ 6 ಒಂಟೆಗಳ ರಕ್ಷಣೆ..?
ಯಲ್ಲಾಪುರ ಪೊಲೀಸರು ನಿನ್ನೆ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ. ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 6 ಒಂಟೆಗಳನ್ನು ರಕ್ಷಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಈಚರ್ ವಾಹನದಲ್ಲಿ, ಹುಬ್ಬಳ್ಳಿ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ಒಂಟೆಗಳನ್ನು ಯಲ್ಲಾಪುರ ಪಟ್ಟಣದ ಜೋಡಕೆರೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ. ಬಕ್ರೀದ್ ಹಬ್ಗಕ್ಕಾಗಿ ಬಲಿ ಕೊಡುವ ಸಂಬಂಧ ಒಂಟೆಗಳನ್ನ ಸಾಗಿಸಲಾಗುತ್ತಿತ್ತಾ..? ಅಥವಾ ಬೇರೆ ಯಾವುದೋ ಕಾರಣಕ್ಕೆ ಒಂಟೆಗಳನ್ನು ಸಾಗಿಸಲಾಗುತ್ತಿತ್ತಾ..? ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಕೊಪ್ಪದಲ್ಲಿ ರಾತ್ರಿಯೇ ಅರಳಿ ನಿಂತ ಆ ಸುಂದರಿ ಯಾರು ಗೊತ್ತಾ..? ನೀವೂ ಒಮ್ಮೆ ಕಣ್ತುಂಬಿಕೊಳ್ಳಿ..!
ಅದು ನಟ್ಟ ನಡುರಾತ್ರಿ, ಸುರಿಯುತ್ತಿರೋ ಮಹಾಮಳೆ, ಆ ಮಳೆಯ ರಪ ರಪ ಸಪ್ಪಳದ ನಡುವೆ ಅಲ್ಲೊಬ್ಬಳು ಸುಂದರಿ ತನ್ನೊಳಗಿನ ಸುಂದರ ರೂಪ ಹೊರಸೂಸಿದ್ದಳು. ಪವಾಡವೆಂಬಂತೆ ಮೆಲ್ಲನೆ ಅರಳಿ ನಿಂತಿದ್ದ ಚೆಲುವೆಯ ಸುತ್ತ ಮಧುರ, ಸುಮಧುರ ಘಮಲು. ನಿಜಕ್ಕೂ ಅದೊಂದು ಅದ್ಭುತ ಕ್ಷಣ.. ಆ ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು ತಾಲೂಕಿನ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ಕುಟುಂಬ.. ಹೌದು, ತಾಲೂಕಿನ ಕೊಪ್ಪ ಗ್ರಾಮ ಮೋಹನ್ ಪಾಣತ್ರಿಯಲ್ ಮನೆಯಲ್ಲಿ ನಿನ್ನೆ ರಾತ್ರಿ ಮಹಾ ಸುಂದರಿ ಜನ್ಮ ತಾಳಿದ್ದಾಳೆ. ಅಪ್ಪಟ ಮನಮೋಹಕ ಸೌಂದರ್ಯ ದೇವತೆ ಅರಳಿ ನಿಂತಿದಾಳೆ. ರಾತ್ರಿ ಘಮ್ಮೆನ್ನುವ ಸುಮಧುರತೆ ಬಿತ್ತಿರೋ ಬ್ರಹ್ಮ ಕಮಲ ಅರಳಿ ನಿಂತಿದೆ. ಬ್ರಹ್ಮ ಕಮಲ ಅರಳೊರೋ ದೃಷ್ಯವನ್ನು ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ. ಹಲವರು ಬ್ರಹ್ಮ ಸುಂದರಿಯ ಅರಳಿ ನಿಂತ ಸೋಬಗು ಕಣ್ತುಂಬಿಕೊಂಡಿದ್ದಾರೆ. ಜಾಹೀರಾತು
ಚಿರತೆ ಬಂತು ಚಿರತೆ, ಬರೀ ಅಂತೆ ಕಂತೆ, ವದಂತಿಗಳಿಂದ ಆತಂಕದಲ್ಲಿದ್ದಾರೆ ಮಜ್ಜಿಗೇರಿ ಭಾಗದ ರೈತರು..!
ಮುಂಡಗೋಡ; ತಾಲೂಕಿನಲ್ಲಿ ಚಿರತೆಯ ಹಾವಳಿಯಿಂದ ಜನ ಕಂಗಾಲಾಗಿದ್ದಾರೆ. ಚಿರತೆ, ಹುಲಿಗಳ ಬಗೆಗಿನ ಬಗೆ ಬಗೆಯ ವದಂತಿಗಳು ಎಲ್ಲೆಡೆ ಹರಡುತ್ತಿವೆ. ಹೀಗಾಗಿ, ಜನ್ರು ಹೊಲ ಗದ್ದೆಗಳಿಗೆ ಹೋಗಲು ಭಯ ಪಡುವಂತಾಗಿದೆ. ಮಜ್ಜಿಗೇರಿಯಲ್ಲಿ ಶುಕ್ರವಾರ ಚಿರತೆ ಕುರಿ ತಿಂದು ಹಾಕಿದ ಘಟನೆ ಬೆಳಕಿಗೆ ಬಂದ ನಂತರವಂತೂ ಈ ಭಾಗದ ಜನರ ಭಯ ಮತ್ತಷ್ಟು ದುಪ್ಪಟ್ಟಾಗಿದೆ. ಹೊರಗೆ ಹೋಗಲೂ ಕೂಡ ಭಯ ಪಡುವಂತಾಗಿದೆ. ಈ ಕಾರಣಕ್ಕಾಗೇ ಮುಂಡಗೋಡಿನ ಅರಣ್ಯ ಇಲಾಖೆ ಅಧಿಕಾರಿಗಳು ಭಯ ಪಡೋದು ಬೇಡ, ಎಚ್ಚರಿಕೆ ಇಂದ ಇರಿ ಅಂತಾ ಜನ್ರಿಗೆ ಮನವಿ ಮಾಡಿದ್ದಾರೆ. ಹಾಗೇನಾದ್ರೂ ನಿಮಗೆ ಅಂತಹ ಕಾಡು ಪ್ರಾಣಿಗಳು ಕಂಡ್ರೆ ತಕ್ಷಣವೇ ಇಲಾಖೆಗೆ ಮಾಹಿತಿ ನೀಡಿ ಅಂದಿದ್ದಾರೆ. ಸುಳ್ಳು ವದಂತಿಗಳು..! ಮಜ್ಜಿಗೇರಿಯಲ್ಲಿ ಶುಕ್ರವಾರ ಕುರಿ ಹಿಂಡಿನ ಮೇಲೆ ಚಿರತೆ ದಾಳಿ ಮಾಡಿದ ಘಟನೆ ವರದಿಯಾಗಿದೆ. ಹಾಗೆ ಘಟನೆ ನಡೆದ ನಂತರವಂತೂ ವಾಟ್ಸಾಪ್ ಸ್ಟೇಟಸ್ ಗಳಲ್ಲಿ ಬಗೆ ಬಗೆಯ ವದಂತಿಗಳು ಹರಿದಾಡತೊಡಗಿವೆ. ಅಲ್ಲಿ ಬಂತು, ಇಲ್ಲಿ ಕಾಣ್ತು ಅಂತಾ ಅದ್ಯಾವುದೊ ಬೇರೆ...
ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಅಪರೂಪ ಕಾಡುಪ್ರಾಣಿಯನ್ನು ರಕ್ಷಿಸಲಾಗಿದೆ. ನಿರಂತರ ಸುರಿಯುತ್ತಿರೊ ಮಳೆಯಿಂದ ಕಂಗೆಟ್ಟ ಕಾಡು ಬೆಕ್ಕು(Indian small sivit) ಅನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ. ಅಂದಹಾಗೆ, ಇಂದು ಬೆಳಿಗ್ಗೆ ಕೊಪ್ಪ ಗ್ರಾಮದ ರಸ್ತೆ ಪಕ್ಕದ ಪೊದೆಯಲ್ಲಿ ಈ ಅಪರೂಪದ ಪ್ರಾಣಿ ಕಂಡಿದೆ. ಆಹಾರ ಅರಸಿಯೋ ಅಥವಾ ನಿರಂತರ ಮಳೆಯಿಂದಲೋ ಕಂಗೆಟ್ಟಿದೆ. ಹೀಗಾಗಿ, ಕಾಡು ಬಿಟ್ಟು ನಾಡಿನೆಡೆ ಬಂದಿದ್ದ ಕಾಡುಬೆಕ್ಕು ತೀವ್ರ ಭಯದಿಂದ ಅಲ್ಲೇ ಸುಳಿದಾಡಿದೆ. ಹೀಗಾಗಿ, ಈ ದೃಷ್ಯ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಕಾಡುಬೆಕ್ಕು ರಕ್ಷಿಸಿದ್ದಾರೆ. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ, ಸಾಗರ್, ಮಂಜುನಾಥ್ ಪೂಜಾರ್, ಶಿವಪ್ಪ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದಾರೆ.