ಯಲ್ಲಾಪುರ ಪೊಲೀಸರು ನಿನ್ನೆ ತಡರಾತ್ರಿ ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ ಅನ್ನೊ ಮಾಹಿತಿ ಲಭ್ಯವಾಗಿದೆ‌. ಅಕ್ರಮವಾಗಿ ಸಾಗಿಸುತ್ತಿದ್ದ ಬರೋಬ್ಬರಿ 6  ಒಂಟೆಗಳನ್ನು ರಕ್ಷಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. 

ಈಚರ್ ವಾಹನದಲ್ಲಿ, ಹುಬ್ಬಳ್ಳಿ ಕಡೆಯಿಂದ ಭಟ್ಕಳ ಕಡೆಗೆ ಅಕ್ರಮವಾಗಿ, ಹಿಂಸಾತ್ಮಕವಾಗಿ ಸಾಗಿಸಲಾಗುತ್ತಿದ್ದ ಒಂಟೆಗಳನ್ನು ಯಲ್ಲಾಪುರ ಪಟ್ಟಣದ ಜೋಡಕೆರೆ ಚೆಕ್ ಪೋಸ್ಟ್ ಬಳಿ ಪೊಲೀಸರು ವಶ ಪಡಿಸಿಕೊಂಡಿದ್ದಾರೆ ಎನ್ನಲಾಗಿದೆ.

ಬಕ್ರೀದ್ ಹಬ್ಗಕ್ಕಾಗಿ ಬಲಿ ಕೊಡುವ ಸಂಬಂಧ ಒಂಟೆಗಳನ್ನ ಸಾಗಿಸಲಾಗುತ್ತಿತ್ತಾ..? ಅಥವಾ ಬೇರೆ ಯಾವುದೋ ಕಾರಣಕ್ಕೆ ಒಂಟೆಗಳನ್ನು ಸಾಗಿಸಲಾಗುತ್ತಿತ್ತಾ..? ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

error: Content is protected !!