ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಳಿಸಿದ ಸಿಎಂ, ಆದ್ರೆ, ವಿ.ಎಸ್.ಪಾಟೀಲರ “ಅಧ್ಯಕ್ಷಗಿರಿ” ಸೇಫ್..!

ಬೆಂಗಳೂರು: ರಾಜ್ಯದಲ್ಲಿನ ಬಹುತೇಕ ನಿಗಮ ಮಂಡಳಿ ಅಧ್ಯಕ್ಷರ ನೇಮಕಾತಿ ರದ್ದುಗೊಂಡಿದೆ. ನೇಮಕಾತಿ ರದ್ದುಗೊಳಿಸಿ ಸಿಎಂ ಬಸವರಾಜ್ ಬೊಮ್ಮಾಯಿ ಆದೇಶ ಹೊರಡಿಸಿದ್ದಾರೆ. ಆದ್ರೆ, ಅಚ್ಚರಿಯೆಂಬಂತೆ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್ ಸೇಫ್ ಆಗಿದ್ದಾರೆ.

3 ವರ್ಷದಿಂದ..!
ಕಳೆದ ಮೂರು ವರ್ಷಗಳಿಂದ ಅಂದ್ರೆ, ಬಿ.ಎಸ್.ಯಡಿಯೂರಪ್ಪನವರು ಸಿಎಂ ಆಗಿದ್ದಾಗಲೇ ಅಧ್ಯಕ್ಷರಾಗಿ ನೇಮಕಗೊಂಡಿದ್ದ, ವಿ.ಎಸ್. ಪಾಟೀಲ್ ರಿಗೆ ಈ ಬಾರಿ ಕೋಕ್ ನೀಡಲಾಗತ್ತೆ ಅನ್ನೊ ಮಾತುಗಳಿದ್ದವು. ಆದ್ರೆ, ಸಿಎಂ ಬಸವರಾಜ್ ಬೊಮ್ಮಾಯಿ ರದ್ದುಗೊಳಿಸಿರೋ ಪಟ್ಟಿಯಲ್ಲಿ ವಿ.ಎಸ್.ಪಾಟೀಲರ ಹೆಸರು ಇಲ್ಲ. ಹೀಗಾಗಿ, ಸದ್ಯ ವಿ.ಎಸ್.ಪಾಟೀಲರು ಸೇಫ್ ಆಗಿದ್ದಾರೆ ಎನ್ನಲಾಗಿದೆ.

ಅನಂತ್ ಹೆಗಡೆ ಆಶೀಸರ್ ಔಟ್..!
ಇನ್ನು, ಉತ್ತರ ಕನ್ನಡದಿಂದ ಕರ್ನಾಟಕ ಜೀವ ವೈವಿದ್ಯ ಮಂಡಳಿಯ ಅಧ್ಯಕ್ಷರಾಗಿದ್ದ ಅನಂತ್ ಹೆಗಡೆ ಆಶೀಸರ್ ನೇಮಕಾತಿ ರದ್ದುಗೊಂಡಿದೆ. ಹೀಗಾಗಿ, ಜಿಲ್ಲೆಯ ಮಟ್ಟಿಗೆ ಒಂದು ಅಧ್ಯಕ್ಷಗಿರಿ ಔಟ್ ಆದಂತಾಗಿದೆ.

ಟವೇಲ್ ಹಾಕಿದ್ದವರಿಗೂ ಶಾಕ್..?
ಅಂದಹಾಗೆ, ವಿ.ಎಸ್.ಪಾಟೀಲರಿಗೆ ಬಹುತೇಕ ಕೋಕ್ ಕೊಡೋದು ಕನ್ಪರ್ಮ ಅಂತಲೇ ಕಾದು ಕುಳಿತಿದ್ದ ಕೆಲವು ಆಕಾಂಕ್ಷಿಗಳಿಗೆ ನಿರಾಸೆ ಆದಂತಾಗಿದೆ. ಇನ್ನೇನು ಪಾಟೀಲರು ಔಟ್ ಆಗ್ತಾರೆ, ನಿಮ್ಮನ್ನ ಇನ್ ಮಾಡಿಸ್ತಿನಿ ಅಂತಾ ಕೆಲವ್ರಿಗೆ, ಇನ್ನೂ ಕೆಲವ್ರು ನೀಡಿದ್ದ ಭರವಸೆ ಈಡೇರುವ ಯಾವ ಲಕ್ಷಣಗಳೂ ತೋರುತ್ತಿಲ್ಲ.

error: Content is protected !!