ಸನವಳ್ಳಿ ಪ್ಲಾಟ್ ಬಳಿ ಅಪಘಾತ, ಬಸನಕಟ್ಟಿಯ ದಂಪತಿಗೆ ಗಾಯ..!


ಮುಂಡಗೋಡ: ತಾಲೂಕಿನ ಸನವಳ್ಳಿ ಬಳಿ ರಸ್ತೆ ಅಪಘಾತವಾಗಿದೆ. ಬೈಕ್ ಮತ್ತು ಕಾರ್ ನಡುವೆ ಡಿಕ್ಕಿಯಾಗಿ ಬೈಕ್ ಮೇಲಿದ್ದ ದಂಪತಿಗೆ ಗಂಭೀರ ಗಾಯವಾಗಿದೆ.

ಶಿಗ್ಗಾವಿ ತಾಲೂಕಿನ ಬಸನಕಟ್ಟಿ ಗ್ರಾಮದ ನಾಗರಾಜ್ ಲಕ್ಷ್ಮಣ ಅಂಬಿಗೇರ(42) ಹಾಗೂ ಅವ ನ ಪತ್ನಿಗೆ ಗಂಭೀರ ಗಾಯವಾಗಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ತರಲಾಗಿತ್ತು, ಆದ್ರೆ, ಗಂಭೀರ ಗಾಯಗೊಂಡಿರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.

ಇನ್ನು, ಮುಂಡಗೋಡಿನಿಂದ ಸಂತೆ ಮುಗಿಸಿಕೊಂಡು ಬಸನಕಟ್ಟಿಗೆ ಬೈಕ್ ಮೂಲಕ ತೆರಳುತ್ತಿದ್ದಾಗ, ಬಂಕಾಪುರ ಕಡೆಯಿಂದ ಬಂದ ಕಾರ್ ಡಿಕ್ಕಿಯಾಗಿದೆ ಎನ್ನಲಾಗಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಮೇಲಿದ್ದ ದಂಪತಿ ಹಾರಿ ಬಿದ್ದಿದ್ದಾರೆ. ತಕ್ಷಣವೇ ಸ್ಥಳೀಯರು ಗಾಯಾಳುಗಳನ್ನು ತಾಲೂಕಾಸ್ಪತ್ರೆಗೆ ರವಾನಿಸಿದ್ದಾರೆ.

ಕಾರಿನಲ್ಲಿ ಇರುವವರು ಸ್ಥಳದಲ್ಲಿ ಕಂಡುಬಂದಿಲ್ಲ. KA-27 N-6454 ನೋಂದಣಿಯ ಕಾರ್ ಇದಾಗಿದ್ದು ಸ್ಥಳದಲ್ಲಿ ಕಾರು ಬಿಟ್ಟು ಹೋಗಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.