ಅದು ನಟ್ಟ ನಡುರಾತ್ರಿ, ಸುರಿಯುತ್ತಿರೋ ಮಹಾಮಳೆ, ಆ ಮಳೆಯ ರಪ ರಪ ಸಪ್ಪಳದ ನಡುವೆ ಅಲ್ಲೊಬ್ಬಳು ಸುಂದರಿ ತನ್ನೊಳಗಿನ ಸುಂದರ ರೂಪ ಹೊರಸೂಸಿದ್ದಳು. ಪವಾಡವೆಂಬಂತೆ ಮೆಲ್ಲನೆ ಅರಳಿ ನಿಂತಿದ್ದ ಚೆಲುವೆಯ ಸುತ್ತ ಮಧುರ, ಸುಮಧುರ ಘಮಲು. ನಿಜಕ್ಕೂ ಅದೊಂದು ಅದ್ಭುತ ಕ್ಷಣ.. ಆ ಅದ್ಬುತ ಕ್ಷಣಗಳಿಗೆ ಸಾಕ್ಷಿಯಾಗಿದ್ದು ತಾಲೂಕಿನ ಕೊಪ್ಪ ಗ್ರಾಮದ ಮೋಹನ್ ಪಾಣತ್ರಿಯಲ್ ಕುಟುಂಬ..
ಹೌದು, ತಾಲೂಕಿನ ಕೊಪ್ಪ ಗ್ರಾಮ ಮೋಹನ್ ಪಾಣತ್ರಿಯಲ್ ಮನೆಯಲ್ಲಿ ನಿನ್ನೆ ರಾತ್ರಿ ಮಹಾ ಸುಂದರಿ ಜನ್ಮ ತಾಳಿದ್ದಾಳೆ. ಅಪ್ಪಟ ಮನಮೋಹಕ ಸೌಂದರ್ಯ ದೇವತೆ ಅರಳಿ ನಿಂತಿದಾಳೆ. ರಾತ್ರಿ ಘಮ್ಮೆನ್ನುವ ಸುಮಧುರತೆ ಬಿತ್ತಿರೋ ಬ್ರಹ್ಮ ಕಮಲ ಅರಳಿ ನಿಂತಿದೆ.
ಬ್ರಹ್ಮ ಕಮಲ ಅರಳೊರೋ ದೃಷ್ಯವನ್ನು ಕುಟುಂಬಸ್ಥರು ಸೆರೆ ಹಿಡಿದಿದ್ದಾರೆ. ಹಲವರು ಬ್ರಹ್ಮ ಸುಂದರಿಯ ಅರಳಿ ನಿಂತ ಸೋಬಗು ಕಣ್ತುಂಬಿಕೊಂಡಿದ್ದಾರೆ.
ಜಾಹೀರಾತು