ಕೊಪ್ಪದಲ್ಲಿ ದಾರಿತಪ್ಪಿ ಬಂದಿದ್ದ ಅಪರೂಪದ ಕಾಡು ಪ್ರಾಣಿ, ರಕ್ಷಿಸಿದ ಅರಣ್ಯ ಸಿಬ್ಬಂದಿ..!


ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ಅಪರೂಪ ಕಾಡುಪ್ರಾಣಿಯನ್ನು ರಕ್ಷಿಸಲಾಗಿದೆ. ನಿರಂತರ ಸುರಿಯುತ್ತಿರೊ ಮಳೆಯಿಂದ ಕಂಗೆಟ್ಟ ಕಾಡು ಬೆಕ್ಕು(Indian small sivit) ಅನ್ನು ಅರಣ್ಯ ಸಿಬ್ಬಂದಿಗಳು ರಕ್ಷಿಸಿದ್ದಾರೆ.

ಅಂದಹಾಗೆ, ಇಂದು ಬೆಳಿಗ್ಗೆ ಕೊಪ್ಪ ಗ್ರಾಮದ ರಸ್ತೆ ಪಕ್ಕದ ಪೊದೆಯಲ್ಲಿ ಈ ಅಪರೂಪದ ಪ್ರಾಣಿ ಕಂಡಿದೆ. ಆಹಾರ ಅರಸಿಯೋ ಅಥವಾ ನಿರಂತರ ಮಳೆಯಿಂದಲೋ ಕಂಗೆಟ್ಟಿದೆ. ಹೀಗಾಗಿ, ಕಾಡು ಬಿಟ್ಟು ನಾಡಿನೆಡೆ ಬಂದಿದ್ದ ಕಾಡುಬೆಕ್ಕು ತೀವ್ರ ಭಯದಿಂದ ಅಲ್ಲೇ ಸುಳಿದಾಡಿದೆ. ಹೀಗಾಗಿ, ಈ ದೃಷ್ಯ ಕಂಡ ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

ಮಾಹಿತಿ ತಿಳಿದು ತಕ್ಷಣವೇ ಸ್ಥಳಕ್ಕೆ ಬಂದ ಅರಣ್ಯ ಸಿಬ್ಬಂದಿಗಳು ಕಾಡುಬೆಕ್ಕು ರಕ್ಷಿಸಿದ್ದಾರೆ. ಅರಣ್ಯ ರಕ್ಷಕ ಶ್ರೀಧರ್ ಭಜಂತ್ರಿ, ಸಾಗರ್, ಮಂಜುನಾಥ್ ಪೂಜಾರ್, ಶಿವಪ್ಪ ಸೇರಿದಂತೆ ಹಲವರು ಈ ವೇಳೆ ಭಾಗಿಯಾಗಿದ್ದಾರೆ.

error: Content is protected !!