ಮುಂಡಗೋಡ: ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಗ್ರಾಮದ ಅದೊಂದು ರಸ್ತೆ ಹದಗೆಟ್ಟು ಹಳ್ಳ ಹಿಡಿದಿದೆ. ಹಾಗಂತ, ಸ್ಥಳೀಯರು ಅಧಿಕಾರಿಗಳ ವಿರುದ್ಧ ಹಿಡಿಶಾಪ ಹಾಕ್ತಿದಾರೆ. ಕೊಪ್ಪ ಗ್ರಾಮದಿಂದ ಟಿಬೇಟಿಯನ್ ಕ್ಯಾಂಪ್ ನಂಬರ್ 3 ಕ್ಕೆ ಮಾರ್ಗ ಕಲ್ಪಿಸುವ ರಸ್ತೆ ನಡೆದಾಡಲೂ ಆಗದ ಸ್ಥಿತಿಗೆ ತಲುಪಿದೆ. ಅಧಿಕಾರಿಗಳ ನಿರ್ಲಕ್ಷ ಅನ್ನೋದು ಜನರ ಜೀವ ಹಿಂಡುತ್ತಿದೆ.
ದಶಕಗಳ ಸಮಸ್ಯೆ..!
ಸುಮಾರು 2 ಕೀಮಿ ಇರೋ ರಸ್ತೆ ದಶಕಗಳಿಂದಲೂ ಯಥಾಸ್ಥಿತಿಯಲ್ಲಿದೆ. ನಿತ್ಯವೂ ಇಲ್ಲಿ ಸಂಚರಿಸುವ ಜನ ಅಧಿಕಾರಿಗಳು, ಜನಪ್ರತಿನಿಧಿಗಳ ಬೇಜಾವಾಬ್ದಾರಿಗೆ ಉ… ಉಪ್ಪಿನಕಾಯಿ ಹಾಕ್ತಿದಾರೆ. ರಸ್ತೆಯ ಅದ್ವಾನಗಳ ಬಗ್ಗೆ ಅದೇಷ್ಟೇ ಬಡಕೊಂಡ್ರೂ ಇದುವರೆಗೂ ಯಾರೂ ಕ್ಯಾರೇ ಅಂದಿಲ್ಲವಂತೆ. ಹಾಗಾಗಿ, ಇಲ್ಲಿನ ಜನ ಆಕ್ರೋಶಗೊಂಡಿದ್ದಾರೆ. ಕಣ್ಣಿದ್ದೂ ಕುರಡಾಗಿರೋ ಅಧಿಕಾರಿಗಳ ವಿರುದ್ಧ ಶಪಿಸುತ್ತಿದ್ದಾರೆ. ಆದ್ರೂ ಯಾರಂದ್ರೆ ಯಾರೂ ಈ ಕಡೆ ಕಣ್ಣೆತ್ತಿ ನೋಡುತ್ತಿಲ್ಲ.
ಪಿ.ಜಿ.ತಂಗಚ್ಚನ್ ಆಕ್ರೋಶ..!
ಈ ಕಾರಣಕ್ಕಾಗೇ, ಇಲ್ಲಿನ ನಿವಾಸಿ ಪಿ.ಜಿ.ತಂಗಚ್ಚನ್ ಎಂಬುವವರು, ಹದಗೆಟ್ಟ ರಸ್ತೆಯ ಪೋಟೋಗಳನ್ನು ವಾಟ್ಸಾಪ್ ಗಳಲ್ಲಿ ಶೇರ್ ಮಾಡಿ ಆಕ್ರೋಶ ಹೊರಹಾಕಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಬೇಜವಾರಿಯನ್ನು ಖಂಡಿಸಿದ್ದಾರೆ. ಈ ರಸ್ತೆಯ ಅವ್ಯವಸ್ಥೆಯ ವಿರುದ್ಧ ಕಿಡಿ ಕಾರಿದ್ದಾರೆ. ನಿತ್ಯವೂ ರಸ್ತೆಯ ಅದ್ವಾನಗಳಿಂದ ಆಗುತ್ತಿರೋ ಅನಾಹುತಗಳನ್ನ ತೆರೆದಿಟ್ಟಿದ್ದಾರೆ. ಹಾಗಾದ್ರೆ ಇದಕ್ಕೇಲ್ಲ ಯಾರು ಹೊಣೆ ಅಂತಾ ಪ್ರಶ್ನಿಸುತ್ತಿದ್ದಾರೆ.
ಇನ್ನಾದ್ರೂ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸ್ತಾರಾ ಕಾದು ನೋಡಬೇಕಿದೆ.