ಮುಂಡಗೋಡ: ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಎತ್ತಂಗಡಿಯಾಗಿದ್ದಾರೆ. ಶಿರಸಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಮದ್ಯಾಹ್ನವೇ ಸರ್ಕಾದಿಂದ ಆದೇಶ ಹೊರಬಿದ್ದಿದ್ದು ರಾಜ್ಯದಲ್ಲಿ ಒಟ್ಟೂ ಐವರು ತಹಶೀಲ್ದಾರರಿಗೆ ವರ್ಗಾವಣೆಯಾಗಿದೆ. ಈ ಮೂಲಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದುಕೊಂಡಿರೋ ಆರೋಪಕ್ಕೆ ಗುರಿಯಾಗಿದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವರ್ಗಾವಣೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಗಳು ತಹಶೀಲ್ದಾರ್ ಕಾರ್ಯಾಲಯದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದವು. ಇದನ್ನೇಲ್ಲ ಮನಗಂಡ ಸರ್ಕಾರ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರನ್ನು...
Top Stories
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
Category: BIG BREAKING
ಯಲ್ಲಾಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಬಹುತೇಕ ಫಿಕ್ಸ್..?
ಯಲ್ಲಾಪುರ ಕ್ಷೇತ್ರದಲ್ಲಿ ಅಕ್ಷರಶಃ ಮಕಾಡೆ ಮಲಗಿದ್ದ ಜೆಡಿಎಸ್ ನ ತೆನೆ ಹೊತ್ತ ಮಹಿಳೆ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಸೂಚನೆಗಳು ಸಿಕ್ಕಿವೆ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲದ ಹಾಗಿದ್ದ ಪಕ್ಷಕ್ಕೆ ಹುರುಪಿನಿಂದಲೇ ಯುವ ಪಡೆಯೊಂದು ದಾಂಗುಡಿ ಇಟ್ಟಿದೆ. ಇನ್ನೇನು ಕುಮಾರಣ್ಣನ ಇಶಾರೆಗಾಗಿ ಕಾದು ಕುಳಿತಿರೊ ಅದೊಂದು ಟೀಂ ಯಲ್ಲಾಪುರ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗುತ್ತಿದೆ. ಅವ್ರು ಸಂತೋಷ್..! ಅವ್ರ ಹೆಸ್ರು ಸಂತೋಷ ರಾಯ್ಕರ್, ಮಳಗಿ ಗ್ರಾಮದವರು. ನಿಮಗೆ ನೆನಪಿರಬಹುದು, ಅದು 2014 ರ ಲೋಕಸಭಾ ಚುನಾವಣೆ. ಬೆಳಗಾವಿ ಲೋಕಸಭಾ...
ನಂದಿಕಟ್ಟಾದ ಟಿಕ್ ಟಾಕ್ ಪ್ರೇಮಿಗಳು ಮತ್ತೆ ಒಂದಾದ್ರು, ಥ್ಯಾಂಕ್ಸ್ ಅಂದ್ಲು ಹುಡುಗಿ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕನ ಲವ್ ಕಹಾನಿ ಮತ್ತೆ ರಿಯಲ್ ಲೈಫ್ ಗೆ ಬಂದು ನಿಂತಿದೆ. ಟಿಕ್ ಟಾಕ್ ನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯ ಮೂರು ಗಂಟಿನೊಂದಿಗೆ ಬಾಂಧವ್ಯ ಬೆಸೆದುಕೊಂಡು ಅದೇನೋ ಮನಸ್ತಾಪಗಳು ತಪ್ಪು ಕಲ್ಪನೆಗಳಿಂದ ದೂರವಾಗಿದ್ದ ಒಂದೂವರೇ ವರ್ಷದ ಪ್ರೇಮ್ ಕಹಾನಿ ಮತ್ತದೇ ಹಳೆಯ ಪ್ರೀತಿಯ ಬಂಧನದಲ್ಲಿ ಬೆಸೆದುಕೊಂಡಿದೆ. ಹಾಗಂತ ಮೊನ್ನೆಯಷ್ಟೇ ನೊಂದು ಮನದಾಳ ಬಿಚ್ಚಿಟ್ಟಿದ್ದ ಮಹಿಳೆ ಈಗ ತನ್ನ ಲೈಫು ಸರಿಯಾಯ್ತು ಕಣ್ರಿ ಅಂತಾ ಖುಶಿಯಿಂದಲೇ ಹೇಳಿಕೊಂಡಿದ್ದಾಳೆ. ತಪ್ಪು ಕಲ್ಪನೆಗಳಾಗಿತ್ತು..! ನನ್ನ ಪತಿ...
ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!
ಇದು ಮುಂಡಗೋಡ ಮಟ್ಟಿಗೆ ಬಹುದೊಡ್ಡ ಬ್ರೇಕಿಂಗ್ ನ್ಯೂಸ್. ಯಸ್, ಉತ್ತರ ಕನ್ನಡದ ಖಡಕ್ ಎಸ್ಪಿ ಸುಮನಾ ಫನ್ನೇಕರ್ ಮೇಡಂ ಈಗಷ್ಟೇ ತಮ್ಮ ಅಸಲೀ ಆಟಗಳನ್ನು ಶುರು ಮಾಡಿ ಆಯ್ತು. ಇನ್ನೇನಿದ್ರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಜಾಗವಿಲ್ಲ ಅನ್ನೋದು ಪಕ್ಕಾ. ಅದ್ರ ಭಾಗವಾಗೇ ನಿನ್ನೆ ತಡರಾತ್ರಿ ಮುಂಡಗೋಡಿನಲ್ಲಿ ಅದೊಂದು ಸ್ಪೇಷಲ್ ಟೀಂ ಬೃಹತ್ ಕಾರ್ಯಾಚರಣೆ ಮಾಡಿ ನಾಲ್ವರನ್ನ ಅನಾಮತ್ತಾಗಿ ವಶಕ್ಕೆ ಪಡೆದುಕೊಂಡು ಹೋಗಿದೆ. ಅಸಲು, ಈ ಕಾರ್ಯಚರಣೆ ಖುದ್ದು ಮುಂಡಗೋಡ ಪೊಲೀಸರಿಗೂ ಬೆವರು ಇಳಿಸಿದೆ. ಯಾಕಂದ್ರೆ ಅಲ್ಲೇನಾಗ್ತಿದೆ ಅನ್ನೋ ಸಣ್ಣದೊಂದು...
“ಟಿಕ್ ಟಾಕ್” ನಲ್ಲೇ ರೀಲು ಬಿಟ್ಟ ನಂದಿಕಟ್ಟಾ ಹುಡುಗ, ಬೆಂಗಳೂರಿನಿಂದ್ಲೇ “ಲವ್ ಯೂ” ಅಂದ್ಲು ಹುಡುಗಿ..! ಮುಂದೆ ಆಗಿದ್ದೇನು..?
ಅದು ಅಪ್ಪಟ ಒಂದೂವರೇ ವರ್ಷದ ಪ್ರೇಮ್ ಕಹಾನಿ. ಆಕೆ ದೂರದ ಬೆಂಗಳೂರಿನವಳು, ಈತ ಮುಂಡಗೋಡ ತಾಲೂಕಿನ ನಂದಿಕಟ್ಟಾದವನು. ಟಿಕ್ ಟಾಕ್ ನಲ್ಲೇ ಶುರುವಾದ ಪ್ರೇಮ ಎರಡು ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಲ್ಲಿ ಕೊನೆಗೆ ಮದುವೆಯ ಮೂರು ಗಂಟು ಬೀಳುವಂತೆ ಮಾಡಿತ್ತು. ಆದ್ರೀಗ ಆ ಸಂಬಂಧ ಅಕ್ಷರಶಃ ಮೂರಾಬಟ್ಟೆಯಾಗಿದೆ. ಹಾಗಂತ, ಆ ಮಹಿಳೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ನೂತನ ಪತಿಯ ವಿರುದ್ಧ ಕೇಸು ದಾಖಲಿಸಿದ್ದಾಳೆ. ಅದ್ರ ಜೊತೆ ನಂಗೆ ನನ್ನ ಪತಿಯನ್ನ ಹುಡುಕಿ ಕೊಡಿ...
ಗುಂಜಾವತಿ ಅರಣ್ಯದಲ್ಲಿ ಅಪ್ಪಟ ರೌಡಿಸಂ, ಅರಣ್ಯ ರಕ್ಷಕನ ಮೇಲೆ ಭಂಡರ ಗೂಂಡಾಗಿರಿ.. ಶ್..! ನಿದ್ದೆಯಲ್ಲಿದ್ದಾರೆ ಅಧಿಕಾರಿಗಳು
ಮುಂಡಗೋಡ: ತಾಲೂಕಿನಲ್ಲಿ ಅರಣ್ಯ ಸಂಪತ್ತು ರಕ್ಷಿಸುವ ಅರಣ್ಯ ರಕ್ಷಕರ ಜೀವಗಳಿಗೆ ಬೆಲೆಯೇ ಇಲ್ವಾ..? ಅಥವಾ ತಾಲೂಕಿನ ಅರಣ್ಯ ಇಲಾಖೆಯ ಏಸಿ ರೂಮಲ್ಲಿ ತಣ್ಣಗೆ ಕುಳಿತ ಹಿರಿಯ ಅಧಿಕಾರಿಗಳಿಗೆ “ಬಿಟ್ಟೂ ಬ್ಯಾಸರಕಿ” ಬಂದಿದೆಯಾ..? ಅರ್ಥವೇ ಆಗ್ತಿಲ್ಲ. ತಮ್ಮ ಇಲಾಖೆಯ ಅರಣ್ಯ ರಕ್ಷಕನೊಬ್ಬನ ಮೇಲೆ ಮನಬಂದಂತೆ ಎಗರಾಡಿದವರ ಪರವಾಗಿ “ದೊಡ್ಡ ಗುಣ” ತೋರಿಸಿ ಥೇಟು ಗಾಂಧಿ ತತ್ವದ ನಾಟಕ ಮಾಡ್ತಿದಾರಾ ಮುಂಡಗೋಡಿನ ಅರಣ್ಯ ಅಧಿಕಾರಿಗಳು..? ಯದ್ವಾ ತದ್ವಾ ರೌಡಿಸಂ..! ಅಂದಹಾಗೆ, ನಾವೀಗ ನಿಮಗೆ ಒಂದು ವಿಡಿಯೊ ತುಣುಕು ತೋರಿಸಲು ಹೊರಟಿದ್ದಿವಿ..ಈ...
“ಮುಂದಿನ ಮುಖ್ಯಮಂತ್ರಿ ಶ್ರೀರಾಮುಲು” ಅಭಿಮಾನಿಯ ಘೋಷಣೆ..! ಬಿಜೆಪಿಯಲ್ಲೂ ಮೊಳಗಿದ ಮುಂದಿನ ಸಿಎಂ ಕೂಗು
ಮುಂಡಗೋಡ: ಪಟ್ಟಣಕ್ಕೆ ಇಂದು ಹಲವು ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ ಹಾಗೂ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಸಾರಿಗೆ ಸಚಿವ ಶ್ರೀರಾಮುಲುರವರಿಗೆ ಭವ್ಯ ಸ್ವಾಗತ ಕೋರಲಾಯಿತು. ಜೊತೆಗೆ ಇದೇ ವೇಳೆ ಸಚಿವರು ಗಲಿಬಿಲಿಗೊಳ್ಳುವಂತಹ ಘಟನೆಯೂ ನಡೆಯಿತು. ಸಾರಿಗೆ ಸಚಿವ ಶ್ರೀರಾಮುಲು ಮುಂಡಗೋಡ ಪಟ್ಟಣಕ್ಕೆ ಬಂದಿಳಿಯುತ್ತಿದ್ದಂತೆ, ಸಚಿವ ಶಿವರಾಮ್ ಹೆಬ್ಬಾರ್ ಶ್ರೀರಾಮುಲುರವರಿಗೆ ಸ್ವಾಗತಿಸಲು ಮುಂದಾಗಿದ್ರು. ಈ ವೇಳೆ ಸಚಿವ ಶ್ರೀರಾಮುಲುರಿಗೆ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಶಾಲು ಹೊದಿಸಿ ಹಾರ ಹಾಕಿ ನೆನಪಿನ ಕಾಣಿಕೆ ಕೊಟ್ಟು ಸ್ವಾಗತಿಸಿದ್ರು. ಇದೇ ವೇಳೆ ಅಭಿಮಾನಿಗಳ...
ಪೊಲೀಸ್ ಇಲಾಖೆ ಯಾವ ಸರ್ಕಾರದ ಅಡಿಯಲ್ಲಿದೆ..? ಹೆಚ್ಡಿಕೆ ಆರೋಪಕ್ಕೆ ಸಚಿವ ಹೆಬ್ಬಾರ್ ತಿರುಗೇಟು..!
ಮುಂಡಗೋಡ: ಪೊಲೀಸ್ ಇಲಾಖೆ ಯಾವ ಸರ್ಕಾರದ ಅಡಿಯಲ್ಲಿ ಕೆಲಸ ಮಾಡ್ತಿದೆ..? ಕಮಲ್ ಪಂಥ್ ಯಾವ ಸರ್ಕಾರದಲ್ಲಿ ನೌಕರರಾಗಿದ್ದಾರೆ..? ಯಾರ ಸೂಚನೆಯ ಮೇರೆಗೆ ಕೆಲಸ ನಿರ್ವಹಿಸ್ತಾರೆ..? ಅದು ಕುಮಾರಸ್ವಾಮಿಯವರಿಗೆ ಅರ್ಥವಾಗಲಿ ಅಂತಾ ಶಿವರಾಮ್ ಹೆಬ್ಬಾರ್ ತಿರುಗೇಟು ನೀಡಿದ್ರು. ಪಿಎಸ್ಐ ಅಕ್ರಮ ಪ್ರಕರಣ ಬೆಳಕಿಗೆ ತಂದಿದ್ದು ಪೊಲೀಸ್ ಇಲಾಖೆ, ಹೊರತು ಬಿಜೆಪಿ ಸರ್ಕಾರವಲ್ಲ ಅಂತಾ ಮಾಜಿ ಸಿಎಂ ಕುಮಾರಸ್ವಾಮಿ ಆರೋಪಕ್ಕೆ ಮುಂಡಗೋಡಿನಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಪಬ್ಲಿಕ್ ಫಸ್ಟ್ ನ್ಯೂಸ್ ಗೆ ಪ್ರತಿಕ್ರಿಯಿಸುತ್ತ ಮಾತನಾಡಿದ್ರು.. ಪಿಎಸ್ಐ ಅಕ್ರಮ ಪ್ರಕರಣ...
ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಗ್ರಾಮದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಈ ಮೂಲಕ ಅದೇಷ್ಟೋ ಬಡ ಮಹಿಳೆಯರ ಬಹುದಿನದ ಆಸೆ ನೆರವೇರಿದಂತಾಗಿದೆ. ಗ್ರಾಮದಲ್ಲಿ ಇಂದು ಸಭೆ ಸೇರಿದ್ದ ಗ್ರಾಮಸ್ಥರು, ಮುಖಂಡರು ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂದಿನಿಂದ ಗ್ರಾಮದಲ್ಲಿ ಸರಾಯಿ ನಿಷೇಧಿಸಿ ಠರಾವು ಬರೆದಿದ್ದಾರೆ. ಒಂದುವೇಳೆ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿದ್ರೆ 50 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ.
ವಡಗಟ್ಟಾ ಬಳಿ ಬೈಕ್ ಅಪಘಾತ: ಗಾಯಗೊಂಡಿದ್ದ ಅರಶಿಣಗೇರಿಯ ಉಮೇಶ್ ಲಮಾಣಿ ಸಾವು..!
ಮುಂಡಗೋಡ: ತಾಲೂಕಿನ ವಡಗಟ್ಟಾ ಸಮೀಪದ ಬೀರವಳ್ಳಿ ಕ್ರಾಸ್ ಬಳಿ, ಏ.29 ರಂದು ನಡೆದಿದ್ದ ಬೈಕ್ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಅರಶಿಣಗೇರಿ ವ್ಯಕ್ತಿ ಚಿಕಿತ್ಸೆ ಫಲಕಾರಿಯಾಗದೇ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಿನ ಅರಶಿಣಗೇರಿಯ ಉಮೇಶ್ ಶೇಖಪ್ಪಾ ಲಮಾಣಿ(55) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಕಳೆದ ಏ.29 ರಂದು ಬೀರವಳ್ಳಿ ಕ್ರಾಸ್ ಬಳಿ ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ ಇಬ್ಬರು ಮಹಿಳೆಯರೂ ಸೇರಿ ನಾಲ್ವರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಲಾಗಿತ್ತು.