ಹುನಗುಂದ ಗ್ರಾಮದಲ್ಲಿ ಸರಾಯಿ ನಿಷೇಧ, ಗ್ರಾಮಸ್ಥರ ತೀರ್ಮಾನ, ಸರಾಯಿ ಮಾರಿದ್ರೆ 50 ಸಾವಿರ ದಂಡ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದಲ್ಲಿ ಐತಿಹಾಸಿಕ ನಿರ್ಣಯ ಕೈಗೊಳ್ಳಲಾಗಿದೆ. ಗ್ರಾಮವನ್ನು ಸರಾಯಿ ಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದ್ದು, ಗ್ರಾಮದಲ್ಲಿ ಸರಾಯಿ ನಿಷೇಧ ಮಾಡಲಾಗಿದೆ. ಈ ಮೂಲಕ ಅದೇಷ್ಟೋ ಬಡ ಮಹಿಳೆಯರ ಬಹುದಿನದ ಆಸೆ ನೆರವೇರಿದಂತಾಗಿದೆ.

ಗ್ರಾಮದಲ್ಲಿ ಇಂದು ಸಭೆ ಸೇರಿದ್ದ ಗ್ರಾಮಸ್ಥರು, ಮುಖಂಡರು ಈ ಬಗ್ಗೆ ಐತಿಹಾಸಿಕ ತೀರ್ಮಾನ ಕೈಗೊಂಡಿದ್ದಾರೆ. ಇಂದಿನಿಂದ ಗ್ರಾಮದಲ್ಲಿ ಸರಾಯಿ ನಿಷೇಧಿಸಿ ಠರಾವು ಬರೆದಿದ್ದಾರೆ. ಒಂದುವೇಳೆ ಗ್ರಾಮದಲ್ಲಿ ಸರಾಯಿ ಮಾರಾಟ ಮಾಡಿದ್ರೆ 50 ಸಾವಿರ ದಂಡ ವಿಧಿಸುವ ನಿರ್ಣಯ ಕೈಗೊಂಡಿದ್ದಾರೆ.

error: Content is protected !!