ಇದು ಮುಂಡಗೋಡ ಮಟ್ಟಿಗೆ ಬಹುದೊಡ್ಡ ಬ್ರೇಕಿಂಗ್ ನ್ಯೂಸ್.
ಯಸ್, ಉತ್ತರ ಕನ್ನಡದ ಖಡಕ್ ಎಸ್ಪಿ ಸುಮನಾ ಫನ್ನೇಕರ್ ಮೇಡಂ ಈಗಷ್ಟೇ ತಮ್ಮ ಅಸಲೀ ಆಟಗಳನ್ನು ಶುರು ಮಾಡಿ ಆಯ್ತು. ಇನ್ನೇನಿದ್ರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಜಾಗವಿಲ್ಲ ಅನ್ನೋದು ಪಕ್ಕಾ. ಅದ್ರ ಭಾಗವಾಗೇ ನಿನ್ನೆ ತಡರಾತ್ರಿ ಮುಂಡಗೋಡಿನಲ್ಲಿ ಅದೊಂದು ಸ್ಪೇಷಲ್ ಟೀಂ ಬೃಹತ್ ಕಾರ್ಯಾಚರಣೆ ಮಾಡಿ ನಾಲ್ವರನ್ನ ಅನಾಮತ್ತಾಗಿ ವಶಕ್ಕೆ ಪಡೆದುಕೊಂಡು ಹೋಗಿದೆ. ಅಸಲು, ಈ ಕಾರ್ಯಚರಣೆ ಖುದ್ದು ಮುಂಡಗೋಡ ಪೊಲೀಸರಿಗೂ ಬೆವರು ಇಳಿಸಿದೆ. ಯಾಕಂದ್ರೆ ಅಲ್ಲೇನಾಗ್ತಿದೆ ಅನ್ನೋ ಸಣ್ಣದೊಂದು ಸುಳಿವೂ ಮುಂಡಗೋಡದ ಧೀಮಂತ ಪೊಲೀಸರಿಗೆ ತಿಳಿದಿರಲೇ ಇಲ್ಲ.
ಅಷ್ಟಕ್ಕೂ ಏನಾಯ್ತು..?
ಮುಂಡಗೋಡಿನಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಯ ಅಡ್ಡೆ ಮೇಲೆ ರಾತ್ರೋ ರಾತ್ರಿ ಎಸ್ಪಿ ಮೇಡಂರವರ ಸ್ಪೇಷಲ್ ಟೀಂ ದಾಳಿ ಮಾಡಿದೆ. ಪರಿಣಾಮ ನಾಲ್ವರು ಅಂದರ್ ಆಗಿದ್ದಾರೆ. ಮುಂಡಗೋಡಿನ ಇಬ್ಬರು ಹಾಗೂ ಹುಬ್ಬಳ್ಳಿಯ ಇಬ್ಬರು ಪೊಲೀಸರು ತೋಡಿದ ಖೆಡ್ಡಾಗೆ ಸುಲಭವಾಗೇ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಇವ್ರಿಗೆ ಇಲ್ಲಿನವರ ಯಾವ ಭಯವೂ ಇರಲೇ ಇಲ್ಲವಲ್ಲ ಹಾಗಾಗಿ, ಖುಲ್ಲಂ ಖುಲ್ಲಾ ಬೆಟ್ಟಿಂಗ್ ದಂಧೆಯನ್ನ ನಡೆಸ್ತಿದ್ರು ಅನ್ನೊದು ಖಾತ್ರಿಯಾಗಿಯೇ ಮುಂಡಗೋಡ ಪೊಲೀಸರಿಗೆ ಸಣ್ಣದೊಂದು ಸುಳಿವು ನೀಡದೇ ಖುದ್ದು ಎಸ್ಪಿ ಮೇಡಂ ರಚಿಸಿದ್ದ ತಂಡ ಕಾರ್ಯಾಚರಣೆ ಮಾಡಿ ಹೋಗಿದೆ.
ಸಿಕ್ಕವರು ಯಾರು ಗೊತ್ತಾ..?
ಅಷ್ಟಕ್ಕೂ ಖುದ್ದು ಎಸ್ಪಿ ಮೇಡಂ ನಡೆಸಿದ ಇಂತಹದ್ದೊಂದು ಕಾರ್ಯಾಚರಣೆಯಲ್ಲಿ ಸಿಕ್ಕಿ ಬಿದ್ದಿದ್ದು ಮುಂಡಗೋಡಿನ ಜಮೀರ್ ದರ್ಗಾವಾಲೆ, ಮಹ್ಮದ್ ಸಾದಿಕ್ ಹಾಗೂ ಹುಬ್ಬಳ್ಳಿಯ ಧರ್ಮಸಾರ, ಏಕನಾಥ್ ಎಂಬುವವರು. ಇವ್ರ ಜೊತೆ ಒಂದು ಕಾರು, ಒಂದು ಬೈಕ್, 52 ಸಾವಿರ ರೂ. ನಗದು ಸೇರಿ ಹಲವು ಮೊಬೈಲ್ ಗಳನ್ನು ವಶಪಡಿಸಿಕೊಂಡಿದ್ದಾರೆ ಪೊಲೀಸರು.
ಥರಗುಟ್ಟಿ ಹೋದ್ರು ಸ್ಥಳೀಯ ಪೊಲೀಸ್ರು..!
ನಿಜ, ರಾತ್ರಿ ಎಸ್ಪಿ ಮೇಡಂ ರವರ ಸ್ಪೇಷಲ್ ಟೀಂ ಬೆಟ್ಟಿಂಗ್ ಅಡ್ಡೆಯ ಮೇಲೆ ದಾಳಿ ನಡೆಸಿ ಆರೋಪಿಗಳನ್ನ ಅನಾಮತ್ತಾಗಿ ಎಳೆದು ತಂದಾಗ ಅದು ಮದ್ಯರಾತ್ರಿ.. ಇಲ್ಲಿ ಏನಾಗ್ತಿದೆ ಅನ್ನುವ ಅರಿವು ಬರೋ ಮುಂಚೆಯೇ ಆ ಸ್ಪೇಷಲ್ ಟೀಂ ನ ಪೊಲೀಸರು ಎಫ ಐ ಆರ್ ರೆಡಿ ಮಾಡಿಯಾಗಿತ್ತು. ಹೀಗಾಗಿ, ಮುಂಡಗೋಡ ಪೊಲೀಸರು ಬೆಕ್ಕಸ ಬೆರಗಾಗಿದ್ರು.