ಅದು ಅಪ್ಪಟ ಒಂದೂವರೇ ವರ್ಷದ ಪ್ರೇಮ್ ಕಹಾನಿ. ಆಕೆ ದೂರದ ಬೆಂಗಳೂರಿನವಳು, ಈತ ಮುಂಡಗೋಡ ತಾಲೂಕಿನ ನಂದಿಕಟ್ಟಾದವನು. ಟಿಕ್ ಟಾಕ್ ನಲ್ಲೇ ಶುರುವಾದ ಪ್ರೇಮ ಎರಡು ಮಕ್ಕಳ ತಾಯಿಯೊಂದಿಗೆ ಪ್ರೀತಿ, ಪ್ರೇಮದ ಹೆಸರಲ್ಲಿ ಕೊನೆಗೆ ಮದುವೆಯ ಮೂರು ಗಂಟು ಬೀಳುವಂತೆ ಮಾಡಿತ್ತು. ಆದ್ರೀಗ ಆ ಸಂಬಂಧ ಅಕ್ಷರಶಃ ಮೂರಾಬಟ್ಟೆಯಾಗಿದೆ. ಹಾಗಂತ, ಆ ಮಹಿಳೆ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ತನ್ನ ನೂತನ ಪತಿಯ ವಿರುದ್ಧ ಕೇಸು ದಾಖಲಿಸಿದ್ದಾಳೆ. ಅದ್ರ ಜೊತೆ ನಂಗೆ ನನ್ನ ಪತಿಯನ್ನ ಹುಡುಕಿ ಕೊಡಿ ಅಂತಾ ಮೊರೆ ಇಟ್ಟಿದ್ದಾಳೆ.

ಏನಿದು ಕತೆ..?
ಆಕೆಯ ಹೆಸ್ರು ಸಿಂಧು ಅಂತಾ. ಹಾಗಂತ ಇದು ಆಕೆಯ ಈಗಿನ ಹೆಸರು‌. ಮೊದಲನೇಯ ಹೆಸರು ಬೇರೆ ಇದೆ. ರೇಷ್ಮಾ ಅನ್ನೋದು ಆಕೆಯ ಮೊದಲ ಹೆಸರು. ನೋಡಲು ಸೌಂದರ್ಯವತಿ‌. ಕಳೆದ ಏಳು ವರ್ಷದ ಹಿಂದೆ ವಯಸ್ಸಲ್ಲದ ವಯಸ್ಸಲ್ಲಿ, ಗಾರೆ ಕೆಲಸ ಮಾಡಿಕೊಂಡಿದ್ದ ಯುವಕನ ಜೊತೆ “ನಿಖಾಹ” ಮಾಡಿಕೊಂಡಾಕೆ. ಆತನಿಂದ ಎರಡು ಹೆಣ್ಣು ಮಕ್ಕಳನ್ನು ಕರುಣಿಸಿಕೊಂಡಾಕೆ. ಆ ನಂತರದಲ್ಲಿ ಆತನಿಂದ ದೂರವಾದವಳು, ತವರು ಮನೆಯಲ್ಲೇ ಇದ್ದು, ಟೇಲರಿಂಗ್ ಕೆಲಸ ಮಾಡ್ತಾ “ಟಿಕ್ ಟಾಕ್” ಕ್ರೇಜ್ ಗೆ ಬಿದ್ದಿದ್ದಳು.

ಟಿಕ್ ಟಾಕ್ ಪ್ರೇಮ..!
ಹಾಗೆ, ಅದೇ ಟಿಕ್ ಟಾಕ್ ನಲ್ಲಿ ಒಂದಿಷ್ಟು ಹುಚ್ಚು ಹಿಡಿಸಿಕೊಂಡಿದ್ದವನ ಹೆಸರು ರಮೇಶ್.. ಗ್ಯಾರೇಜ್ ಕೆಲಸ ಮಾಡಿಕೊಂಡಿದ್ದ ಹುಡುಗ.. ಊರು ಮುಂಡಗೋಡ ತಾಲೂಕಿನ ನಂದಿಕಟ್ಟಾ.. ಅದು ಹೇಗೋ ಗೊತ್ತಿಲ್ಲ ಅದೇ ಟಿಕ್ ಟಾಕ್ ಮೂಲಕ ಆಕೆಯ ಪರಿಚಯ ಮಾಡಿಕೊಂಡಿದ್ದ ಹುಡುಗ ಅವಳ ಜೊತೆ ಟಿಕ್ ಟಾಕ್ ನಲ್ಲಿ ಬೆರೆತು ಹೋಗಿದ್ದ. ನಿತ್ಯವೂ ಆಕೆಯ ಜೊತೆ ಟಿಕ್ ಟಾಕ್ ನಲ್ಲಿ ಅಕ್ಷರಶಃ ತಲ್ಲೀನವಾಗಿದ್ದ. ಇಬ್ಬರೂ ಟಿಕ್ ಟಾಕ್ ಜೊತೆಗೇ ಲವ್ಲಿ ಟಾಕ್ ಶುರು ಮಾಡಿದ್ರು. ರೀಲ್ ಲೈಫ್ ನ ಥಳಕಿಗೆ ಮಾರುಹೋಗಿದ್ದ ಜೋಡಿ ಕೊನೆ ಕೊನೆಗೆ ರಿಯಲ್ ಲೈಫಿನಲ್ಲೂ ಒಂದಾಗಿದ್ದವು.

ಮದುವೆಯಾಯ್ತು..!
ಹೀಗಿದ್ದಾಗ, ಈ ಇಬ್ಬರೂ ಪ್ರೀತಿಯ ತುತ್ತ ತುದಿಗೆ ತಲುಪಿ, ನಿನಗೆ ನಾನು, ನನಗೆ ನೀನು ಅಂತಾ ಬಿಟ್ಟಿರಲಾರದ ಸ್ಥಿತಿಗೆ ತಲುಪಿದ್ದಾಗ, ಬೆಂಗಳೂರಿನಿಂದ ಆ ಮಹಿಳೆಯನ್ನ ನೇರವಾಗಿ ಮುಂಡಗೋಡಿಗೆ ಕರೆದು ತಂದಿದ್ದ ರಮೇಶ. ಮುಂಡಗೋಡಿನಲ್ಲೇ ಒಂದು ರೂಂ ಮಾಡಿ, ಆಕೆಯನ್ನ ಅಲ್ಲಿಯೇ ಇಟ್ಟು ಗುಟ್ಟಾಗಿನೇ ಅನಧೀಕೃತ ಸಂಸಾರ ಶುರುವಿಟ್ಟಿದ್ದ‌. ಆ ನಂತ್ರ ಕೆಲವು ತಿಂಗಳಾದ ಮೇಲೆ ಮನೆಯವರೇಲ್ಲರನ್ನು ಮದುವೆಗೆ ಒಪ್ಪಿಸಿದ್ದ. ಪರಿಣಾಮ, ದಿನಾಂಕ 2-4-2021 ರಂದು ಶಿರಸಿಯ ಕುಮಟಾ ರಸ್ತೆಯ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಗುರು ಹಿರಿಯರ ಸಮ್ಮುಖ ತಾಳಿ ಕಟ್ಟಿದ್ದ, ಹೀಗಾಗಿ, ಮೊದಲಿನ ಹೆಸರು ಕಳಚಿಟ್ಟು “ಸಿಂಧು” ಆಗಿ ಬದಲಾಗಿದ್ದಳು ಆ ಮಹಿಳೆ‌.

ಮೊದಲೇ ಹೇಳಿದ್ದಳು..!
ನಿಮಗಿಲ್ಲಿ ಒಂದು ವಿಷಯ ತಿಳಿಸಲೇಬೇಕು ರಮೇಶ ಹಾಗೂ ಸಿಂಧು ಅನ್ನೊ ಪ್ರಣಯ ಪಕ್ಷಿಗಳ ಟಿಕ್ ಟಾಕು, ಪ್ರೀತಿ, ಪ್ರೇಮ ಪ್ರಣಯದ ಅಷ್ಟೂ ಆಟಗಳು ಆಕೆಯ ಎರಡು ಮಕ್ಕಳ ಸಾಕ್ಷಿಯಾಗಿಯೇ ನಡೆದು ಹೋಗಿತ್ತು. ಹಾಗಂತ ಆಕೆ ಮೊದಲೇ ಮದುವೆಯಾಗಿದ್ದ ಅಷ್ಟು ಮಜಕೂರಗಳನ್ನು, ಎರಡು ಮಕ್ಕಳು ಆಗಿದೆ ಅನ್ನೊ ಸಂಗತಿಯನ್ನೂ ಪರಿಚಯವಾದಾಗಲೇ ರಮೇಶನಿಗೆ ತಿಳಿಸಿ ಹೇಳಿದ್ದಳು. ಆದ್ರೆ, ಪ್ರೀತಿಯ ಮದವೇರಿದ್ದ ರಮೇಶ್ ಅವತ್ತು ಆಕೆಗೆ “ನೀನು ಹೇಗೇ ಇದ್ರೂ ನಂಗೆ ನೀನು ಬೇಕೇ ಬೇಕು” ಅಂದಿದ್ದ. ನಿನ್ನ ಬಿಟ್ಟು ನಾನಿರಲ್ಲ ಅಂದಿದ್ದ. ಅವಳೂ ಓಕೆ ಅಂದಿದ್ಲು. ಅಷ್ಟೆ. ಮದುವೆಯೂ ಆಯ್ತು.

ಆ ನಂತರದಲ್ಲಿ ನಡೆದದ್ದೇ ಬೇರೆ..!
ಯಾವಾಗ, 2021 ಎಪ್ರೀಲ್ ತಿಂಗಳ 2 ನೇ ತಾರೀಖಿನಂದು ಇಬ್ಬರಿಗೂ ಮದುವೆಯ ಗಂಟು ಬಿತ್ತೊ, ಆನಂತರದಲ್ಲಿ ರಮೇಶನ ರಂಗಿನಾಟದ ಹೊಳಪು ಕಡಿಮೆಯಾಗುತ್ತ ಬಂತು ಅನ್ನೋದು “ಸಿಂಧು”ವಿನ ಕಣ್ಣೀರ ಬಿಂಧುವಿಗೆ ಕಾರಣವಾಯ್ತು. ಹಾಗೆ ನೋಡಿದ್ರೆ ಮದುವೆಯಾಗುವ ಹೊತ್ತಿಗೇಲ್ಲ ಬಹುತೇಕ “ಹಣ್ಣಿನ” ರಸದ ಇಂಟರೆಸ್ಟ್ ಕಳದುಕೊಂಡಿದ್ದ ಅನಿಸತ್ತೆ. ಹೀಗಾಗಿ, ರಮೇಶನ ನಿಯತ್ತು ಬದಲಾಗಿದೆ ಅಂತಾ ಗೋಗರಿತಿದಾಳೆ “ಸಿಂಧು”

ಹಾಗಾದ್ರೆ, ನೊಂದ ಮಹಿಳೆ “ಸಿಂಧು” ಹೇಳಿದ್ದೇನು ಕೇಳಬೇಕಾ.? ಈ ಕೆಳಗಿನ ಯೂಟ್ಯೂಬ್ ಲಿಂಕ್ ಓಪನ್ ಮಾಡಿ..👇👇https://youtu.be/2Mw_CuD-xoA

ಬೆಂಗಳೂರಿಗೆ ಹೋದ..?
ಅಸಲು, ಮದುವೆಯಾದ ಬಳಿಕ ಸಿನಿಮಾ ಸ್ಟೈಲಿನಲ್ಲೇ ಎಲ್ಲವನ್ನೂ ಮುಗಿಸಿಕೊಂಡಿದ್ದ ರಮೇಶ, ಒಂದು ವರ್ಷದ ನಂತ್ರ ಸಿಂಧುವಿನೊಂದಿಗೆ ಬೆಂಗಳೂರು ಸೇರಿದ್ದ. ಅಲ್ಲೇ ಸ್ವಿಗ್ಗಿ ಡಿಲೆವರಿ ಬಾಯ್ ಆಗಿ ಕಾರ್ಯ ನಿರ್ವಹಿಸ್ತಿದ್ದ ರಮೇಶ. ಇನ್ನು, ಸಿಂಧು ಮತ್ತದೇ ಟೇಲರಿಂಗ್ ಮಾಡಿ ಹೇಗೋ ಜೀವನ‌ ನಡೆಸ್ತಿದ್ರು. ಆದ್ರೆ, ಯಾವಾಗ ರಮೇಶಣ್ಣ ಬೆಂಗಳೂರಿನಿಂದ ತನ್ನೂರಿಗೆ ಬಂದು ಹೋಗೋಕೆ ಶುರು ಮಾಡಿದ್ನೊ ಅವತ್ತಿಂದ ಬದಲಾಗಿ ಹೋದ ಅಂತಾಳೆ ಸಿಂಧು. ಕೊನೆ ಕೊನೆಗೆ ಬೆಂಗಳೂರಿನಿಂದ ಊರಿಗೆ ಹೋಗಿ ಬರ್ತಿನಿ ಅಂತಾ ನಂದಿಕಟ್ಟಾ ಗೆ ಬಂದವನು ಈಗ ನಾಪತ್ತೆಯಾಗಿದ್ದಾನೆ. ಅವನೂ ಇಲ್ಲ, ಅವನ ಪತ್ತೆಯೂ ಇಲ್ಲ.

ದೂರು ದಾಖಲು..!
ಯಾವಾಗ, ರಮೇಶ ತಾನು ಇಷ್ಟ ಪಟ್ಟು ಮದುವೆಯಾಗಿದ್ದವಳನ್ನ ಬೆಂಗಳೂರಲ್ಲೇ ಬಿಟ್ಟು ಎಸ್ಕೇಪ್ ಆದ್ನೊ, ಆ ಮಹಿಳೆ ಅಕ್ಷರಶಃ ಕಂಗಾಲಾಗಿದ್ದಾಳೆ. ಹೀಗಾಗಿ ಸದ್ಯ ಬೆಂಗಳೂರಿನ ಕೆ.ಆರ್.ಪುರಂ ಪೊಲೀಸ್ ಠಾಣೆಯಲ್ಲಿ ರಮೇಶನ ವಿರುದ್ಧ ದೂರು ದಾಖಲಿಸಿದ್ದಾಳೆ. ಬೆಂಗಳೂರು ಪೊಲೀಸರು ಸದ್ಯ ರಮೇಶನಿಗಾಗಿ ಶೋಧ ನಡೆಸ್ತಿದಾರೆ. ಆತ ಮುಂಡಗೋಡಿನ ತನ್ನೂರಿಗೆ ಬಂದಿಳಿದಿದ್ದಾನೆ ಅನ್ನೋ ಮಾಹಿತಿ ಇದೆ. ಆದ್ರೆ ಇನ್ನೂ ಪತ್ತೆಯಾಗಿಲ್ಲ. ಆತನ ಮೊಬೈಲ್ ಸ್ವಿಚ್ಡ್ ಆಫ್ ಆಗಿದೆ. ಇದ್ರೊಂದಿಗೆ, ಟಿಕ್ ಟಾಕ್ ನಲ್ಲಿ ಶುರುವಾಗಿದ್ದ ಪ್ರೇಮ, ವರ್ಷ ಕಳೆಯುವುದರೊಳಗಾಗಿ ಬೀದಿಗೆ ಬಿದ್ದಿದೆ.

error: Content is protected !!