Home BIG BREAKING

Category: BIG BREAKING

Post
ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ ಹೊರವಲಯದಲ್ಲಿ ಭೀಕರ ಅಪಘಾತ, ಸ್ಕಾರ್ಪಿಯೋ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಸಾವು..!

ಮುಂಡಗೋಡ: ಹೊರವಲಯದ ಶಿರಸಿ ರಸ್ತೆಯಲ್ಲಿ ಭೀಕರ ಅಪಘಾತವಾಗಿದೆ. ಓವರ್ ಟೇಕ್ ಮಾಡಲು ಹೋದ ಸ್ಕಾರ್ಪಿಯೊ ಬೈಕ್ ಗೆ ಗುದ್ದಿ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಶಿರಸಿ ರಸ್ತೆಯ ದೇಶಪಾಂಡೆ ರೂಡಿಸೇಟಿ ಕಚೇರಿ ಬಳಿ ಘಟನೆ ನಡೆದಿದೆ. ಶಿರಸಿ ಕಡೆಯಿಂದ ಮುಂಡಗೋಡು ಕಡೆಗೆ ಬರುತ್ತಿದ್ದ ಬೈಕ್ ಗೆ, ಅದೇ ಮಾರ್ಗವಾಗಿ ಹೊರಟಿದ್ದ ಸ್ಕಾರ್ಪಿಯೊ ಕಾರು ಓವರ್ ಟೇಕ್ ಮಾಡಲು ಹೋಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ‌. ಬೈಕ್ ಸವಾರನ ಗುರುತು ಪತ್ತೆಯಾಗಿಲ್ಲ. ಆದ್ರೆ, ಬೈಕ್ ಮಾಲೀಕ ಧಾರವಾಡ ಜಿಲ್ಲೆಯ...

Post
ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಬಾಚಣಕಿ ಡ್ಯಾಂ ನಲ್ಲಿ ಭಾರೀ ದುರಂತ, ನೀರಲ್ಲಿ ಮುಳುಗಿ ಇಬ್ಬರು ಲಾಮಾಗಳ ದಾರುಣ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ಭಾರೀ ದುರಂತ ಸಂಭವಿಸಿದೆ. ಈಸಲು ತೆರಳಿದ್ದ ಇಬ್ಬರು ಟಿಬೇಟಿಯನ್ ಬೌದ್ದ ಸನ್ಯಾಸಿಗಳು ನೀರು ಪಾಲಾಗಿದ್ದಾರೆ. ಇಬ್ಬರೂ ಬಾಚಣಕಿ ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ‌. ಬೆಳಿಗ್ಗೆಯಿಂದಲೇ ಬಾಚಣಕಿ ಜಲಾಶಯಕ್ಕೆ ಈಸಲು ಬಂದಿದ್ದ ಬೌದ್ದ ಸನ್ಯಾಸಿಗಳು ಜಲಾಶಯದಲ್ಲಿ ಮುಳುಗಿ ಸಾವು ಕಂಡಿದ್ದಾರೆ. ಈ ವೇಳೆ ಟಿಬೇಟಿಯನ್ ಲಾಮಾಗಳು ಶವಗಳನ್ನು ಪೊಲೀಸರಿಗೆ ಗೊತ್ತಾಗದಂತೆ ಎಸ್ಕೇಪ್ ಮಾಡಲು ಮುಂದಾಗಿದ್ದರು ಎನ್ನಲಾಗಿದೆ. ಆದ್ರೆ ಸ್ಥಳೀಯರು ಗಮನಿಸಿ ಮುಂಡಗೋಡ ಪೋಲಿಸರ ಗಮನಕ್ಕೆ ತಂದಿದ್ದಾರೆ. ಹೀಗಾಗಿ, ಸದ್ಯ ಒಂದು ಶವ ಬಾಚಣಕಿ...

Post
ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ರಾಮನಗರಕ್ಕೆ ವರ್ಗ, ಯಲ್ಲಾಲಿಂಗ ಮುಂಡಗೋಡಿಗೆ ನೂತನ ಪಿಎಸ್ಐ

ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ವರ್ಗಾವಣೆಯಾಗಿದ್ದಾರೆ. ಕಳೆದ ಮೂರು ವರ್ಷದಿಂದ ಮುಂಡಗೋಡ ಠಾಣೆಯಲ್ಲಿ ಕಾರ್ಯನಿರ್ವಹಿಸಿದ್ದ ಬಸವರಾಜ್, ರಾಮನಗರ ಪೊಲೀಸ್ ಠಾಣೆಗೆ ವರ್ಗಾವಣೆಗೊಂಡಿದ್ದಾರೆ. ಅಂದಹಾಗೆ, ಮುಂಡಗೋಡ ಠಾಣೆಗೆ ನೂತನ ಪಿಎಸ್ಐ ಆಗಿ ಎಲ್ಲಾಲಿಂಗ ಸಾಹೆಬ್ರು ಜಾಯಿನ್ ಆಗಿದ್ದಾರೆ. ಅಸಲು ಬಸವರಾಜ್ ಮಬನೂರು, ಮುಂಡಗೋಡ ತಾಲೂಕಿನಲ್ಲಿ ಕಳೆದ ಮೂರು ವರ್ಷಗಳಿಂದ ನಿಷ್ಟೆಯ ಕಾರ್ಯ ನಿರ್ವಹಿಸಿದ್ದರು. ಕೊರೋನಾ ಲಾಕಡೌನ್ ಸಂದರ್ಭದಲ್ಲಿ ತಾಲೂಕಿನಲ್ಲಿ ಯುವ ಪಡೆಯೊಂದಿಗೆ ಕೈ ಜೋಡಿಸಿ, ಹಲವು ಸಾಮಾಜಿಕ ಕಳಕಳಿಯ ಕಾರ್ಯ ನಿರ್ವಹಿಸಿದ್ದರು.  

Post
ಅತಿಥಿ ಶಿಕ್ಷಕನಿಂದ ಶಾಲೆಯಲ್ಲೇ ರಾಕ್ಷಸೀತನ, ಶಿಕ್ಷಕನ ಹುಚ್ಚಾಟಕ್ಕೆ ಓರ್ವ ವಿದ್ಯಾರ್ಥಿ ಬಲಿ, ಶಿಕ್ಷಕಿಗೆ ಗಂಭೀರ ಗಾಯ..!

ಅತಿಥಿ ಶಿಕ್ಷಕನಿಂದ ಶಾಲೆಯಲ್ಲೇ ರಾಕ್ಷಸೀತನ, ಶಿಕ್ಷಕನ ಹುಚ್ಚಾಟಕ್ಕೆ ಓರ್ವ ವಿದ್ಯಾರ್ಥಿ ಬಲಿ, ಶಿಕ್ಷಕಿಗೆ ಗಂಭೀರ ಗಾಯ..!

ಗದಗ: ಅವನೇನು ಶಿಕ್ಷಕನೋ ಅಥವಾ ರಾಕ್ಷಸನೋ ಅರ್ಥವೇ ಆಗುತ್ತಿಲ್ಲ. ಯಾಕಂದ್ರೆ ಏಕಾಏಕಿ ಶಾಲೆಯಲ್ಲೇ ನಾಲ್ಕನೇ ತರಗತಿ ವಿದ್ಯಾರ್ಥಿ ಹಾಗೂ ಶಿಕ್ಷಕಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಹುಚ್ಚಾಟ ತೋರಿದ್ದಾನೆ‌. ಪರಿಣಾಮ ವಿದ್ಯಾರ್ಥಿ ಸಾವನ್ನಪ್ಪಿದ್ದಾನೆ. ಗದಗ ಜಿಲ್ಲೆಯ ನರಗುಂದ ತಾಲೂಕಿನ ಹದ್ಲಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಘಟನೆ ನಡೆದಿದ್ದು, ಇದೇ ಶಾಲೆಯಲ್ಲಿ ಅತಿಥಿ ಶಿಕ್ಷಕನಾಗಿ ಕಾರ್ಯ ನಿರ್ವಹಿಸುತ್ತಿದ್ದ ಮುತ್ತಪ್ಪ ಹಡಗಲಿ ಎಂಬಾತನಿಂದ ಕೃತ್ಯ ನಡೆದಿದೆ. ಇಂದು ಬೆಳಿಗ್ಗೆ ಏಕಾಏಕಿ ಸಹಶಿಕ್ಷಕರ ಮೇಲೆ ಅತಿಥಿ ಶಿಕ್ಷಕನಿಂದ ಸಲಿಕೆಯಿಂದ...

Post
ಸಿಎಂ ಬೊಮ್ಮಾಯಿ ವಿರುದ್ಧ ಸಿಟ್ಟಾದ ಈಶ್ವರಪ್ಪ: ಬೆಳಗಾವಿಗೆ ಹೋಗ್ತಿನಿ, ಆದ್ರೆ ಅಧಿವೇಶನದಲ್ಲಿ ಭಾಗಿಯಾಗದೇ ಬಹಿಷ್ಕಾರ..!

ಸಿಎಂ ಬೊಮ್ಮಾಯಿ ವಿರುದ್ಧ ಸಿಟ್ಟಾದ ಈಶ್ವರಪ್ಪ: ಬೆಳಗಾವಿಗೆ ಹೋಗ್ತಿನಿ, ಆದ್ರೆ ಅಧಿವೇಶನದಲ್ಲಿ ಭಾಗಿಯಾಗದೇ ಬಹಿಷ್ಕಾರ..!

 ಬಾಗಲಕೋಟೆ: ಸಚಿವ ಸ್ಥಾನ ಸಿಗದ ಹಿನ್ನೆಲೆ ಬಹಿರಂಗವಾಗಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಅಸಮಾಧಾನ ಹೊರಹಾಕಿದ್ದಾರೆ. ಬಾಗಲಕೋಟೆಯಲ್ಲಿ‌ ಮಾತನಾಡಿರೋ ಈಶ್ವರಪ್ಪ, ಹೈಕಮಾಂಡ್ ಹಾಗೂ ಸಿಎಂ ನಡೆಗೆ ಬೇಸರವಾಗಿದೆ, ಅವರ ನಡೆ ನನಗೆ ನೋವು ತಂದಿದೆ, ಅಪಮಾನ ಆಗ್ತಿದೆ.. ಅದಕ್ಕೆ ಈಗ ನಾನು ಅಧಿವೇಶನದಲ್ಲಿ ಭಾಗಿಯಾಗದೇ ಸೌಜನ್ಯದ ಪ್ರತಿಭಟನೆ ನಡೆಸುತ್ತಿದ್ದೆನೆ ಅಂದ್ರು. ನಾನು ಬೆಳಗಾವಿಗೆ ಹೋಗ್ತೇನೆ ಆದ್ರೆ ಅಧಿವೇಶನಕ್ಕೆ ಹೋಗಲ್ಲ. ಅಧಿವೇಶನದಲ್ಲಿ ನಾನು ಇರಲ್ಲ ಅಂತ ಅಧ್ಯಕ್ಷರಿಗೆ ಪತ್ರ ಕೊಟ್ಟು, ಪರಮಿಷನ್ ತೆಗೆದುಕೊಳ್ಳೋಕೆ ಹೋಗ್ತೀನಿ ಯಾಕೆ ಅಂದ್ರೆ ನನ್ನ...

Post
ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

ಯಲ್ಲಾಪುರ ಕ್ಷೇತ್ರದಲ್ಲಿ ಪ್ರಜಾಪ್ರಭುತ್ವದ ಕಗ್ಗೊಲೆಯಾಗಿದೆ, ಇಲ್ಲಿ ತಾಡಪತ್ರಿ ಹಂಚಲೂ ಸಚಿವರೇ ಬೇಕು: ವಿ.ಎಸ್.ಪಾಟೀಲ್ ವ್ಯಂಗ್ಯ

 ಮುಂಡಗೋಡ: ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡ ನಂತರ ಮುಂಡಗೋಡಿನಲ್ಲಿ ‌ಮೊದಲ ಮಾತು ಆಡಿದ್ದಾರೆ. ಯಲ್ಲಾಪುರ ಕ್ಷೇತ್ರದಲ್ಲಿ ಸಚಿವರು ಬಂದ ನಂತ್ರ ಪ್ರಜಾಪ್ರಭುತ್ವವನ್ನು ಕಳೆದುಕೊಂಡಿದ್ದೇವೆ ಅಂತಾ ಆರೋಪಿಸಿದ್ದಾರೆ. ತಮ್ಮ‌ಮಾತಿನುದ್ದಕ್ಕೂ ಸಚಿವರ ವಿರುದ್ಧ ಪರೋಕ್ಷವಾಗೇ ವಾಗ್ದಾಳಿ ನಡೆಸಿದ್ದಾರೆ. ಮನೆ ಹಂಚಲೂ ಸಚಿವರೇ ಬೇಕು..! ಕ್ಷೇತ್ರದಲ್ಲಿ ಈ ಮೊದಲು ಕಾರ್ಯಕರ್ತರೇ ನಾಯಕರಾಗಿರುತ್ತಿದ್ದರು. ಆದ್ರೆ ಈಗ ಗ್ರಾಮ ಪಂಚಾಯತಿ ಸದಸ್ಯರ ಹಕ್ಕನ್ನೇ ಕಸಿದುಕೊಳ್ಳಲಾಗಿದೆ. ತಮ್ಮ ವಾರ್ಡಿನಲ್ಲಿನ ಅರ್ಹ ಫಲಾನುಭವಿಗಳನ್ನು ಹುಡುಕಿ ಮನೆ ಹಂಚುವ ಹಕ್ಕೂ ಗ್ರಾಪಂ ಸದಸ್ಯರಿಗೆ ಉಳಿದಿಲ್ಲ....

Post
ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

ಕಾಂಗ್ರೆಸ್ ಸೇರಿ ನಂತರ ಮೊದಲ ಬಾರಿಗೆ ಮುಂಡಗೋಡಿಗೆ ಬಂದ ವಿ.ಎಸ್.ಪಾಟೀಲ್, ಕಾಂಗ್ರೆಸ್ಸಿಗರು, ಅಭಿಮಾನಿಗಳ ಸಂಭ್ರಮ..!

 ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ ಮತ್ತೆ ಜೀವ ಬಂದಂತಾಗಿದೆ. ಬಿಜೆಪಿಯ ಎರಡೇರಡು ಪ್ರಭಾವಿಗಳು ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ. ಮಾಜಿ ಶಾಸಕ ವಿ.ಎಸ್.ಪಾಟೀಲ್ ಬಿಜೆಪಿ ತೊರೆದು ಕೈ ಹಿಡಿದಿದ್ದಾರೆ. ನಿನ್ನೆಯಷ್ಟೇ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯ ಮುಖಂಡರ ಸಮ್ಮುಖದಲ್ಲೇ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು. ಹೀಗಾಗಿ, ಕಾಂಗ್ರೆಸ್ ಸೇರ್ಪಡೆಗೊಂಡು ಇವತ್ತು ಮೊದಲ ಬಾರಿಗೆ ಮುಂಡಗೋಡಿಗೆ ಬಂದಿಳಿದಿದ್ದಾರೆ. ಹೀಗಾಗಿ, ಮುಂಡಗೋಡಿನಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮ ಜೋರಾಗಿದೆ. ಕೇಸರಿ ಧ್ವಜ, ಕೇಸರಿ ಶಾಲು..! ಅಂದಹಾಗೆ, ಪಟ್ಟಣದ ಶಿವಾಜಿ ಸರ್ಕಲ್ ಗೆ ವಿ.ಎಸ್.ಪಾಟೀಲ್ ಬಂದಿಳಿದರು. ಈ...

Post
ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

ಅಸಮರ್ಪಕ ಬಸ್ ವ್ಯವಸ್ಥೆ, ಮುಂಡಗೋಡ ಬಸ್ ನಿಲ್ದಾಣದಲ್ಲೇ ಬಸ್ ತಡೆದು ಪ್ರತಿಭಟನೆ, ನಿಂತಲ್ಲೇ ನಿಂತ ಬಸ್ ಗಳು..!

  ಮುಂಡಗೋಡ: ಪಟ್ಟಣದ ಬಸ್ ನಿಲ್ದಾಣದಲ್ಲಿ ಬಸ್ ಅವ್ಯವಸ್ಥೆ ವಿರುದ್ಧ ಆಕ್ರೋಶ ಭುಗಿಲೆದ್ದಿದೆ. ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಪ್ರಯಾಣಿಕರು ಬಸ್ ತಡೆದು ದಿಢೀರ್ ಪ್ರತಿಭಟನೆ ನಡೆಸಿದ್ರು. ಹೀಗಾಗಿ, ಬಸ್ ನಿಲ್ದಾಣದಲ್ಲೇ ಬಸ್ ಗಳು ನಿಂತು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಬಸ್ಸೇ ಇಲ್ಲ..! ಅಂದಹಾಗೆ, ಇದು ಇವತ್ತಿನ ಸಮಸ್ಯೆ ಅಷ್ಟೇ ಅಲ್ಲ‌. ಮುಂಡಗೋಡ ಬಸ್ ನಿಲ್ದಾಣದಲ್ಲಿ ನಿತ್ಯವೂ ಇದೇ ಗೋಳು. ಶಾಲಾ,ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳ ಪರಿಪಾಟಲು ಅಂತೂ ಹೇಳತೀರದ್ದು. ಹೀಗಾಗಿ, ಅದೇಷ್ಟೇ ಬಾರಿ...

Post
ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬಿಜೆಪಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆ, ಬಾವುಟ ನೀಡಿ ಬರಮಾಡಿಕೊಂಡ ಸಿದ್ದರಾಮಯ್ಯ, ಡಿಕೆಶಿ..!

ಬೆಂಗಳೂರು; ಬಿಜೆಪಿಯ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಸೇರ್ಪಡೆಗೊಂಡಿದ್ದಾರೆ‌. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪಕ್ಷದ ಬಾವುಟ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು. ಅಂದಹಾಗೆ ಕಳೆದ ಮೂರ್ನಾಲ್ಕು ತಿಂಗಳಿಂದಲೇ ಕಾಂಗ್ರೆಸ್ ಸೇರಲು ತಯಾರಿ ನಡೆಸಿದ್ದ ವಿ.ಎಸ್.ಪಾಟೀಲರು, ಬಿಜೆಪಿ ತೊರದಿದ್ದರು. ಆದ್ರೆ, ಕಾಂಗ್ರೆಸ್ ಸೇರುವ ದಿನಾಂಕ‌ ಮಾತ್ರ ಬರೀ ಘೋಷಣೆಗಷ್ಟೇ ಸೀಮಿತವಾಗಿತ್ತು. ಹೀಗಾಗಿ, ಕ್ಷೇತ್ರದಲ್ಲಿ ಕಾಂಗ್ರೆಸ್ ಸ್ಥಿತಿ ಡೊಲಾಯಮಾನ ಅನ್ನುವಂತಾಗಿತ್ತು. ಸದ್ಯ ಕಾಂಗ್ರೆಸ್ ಗೆ ಅಧಿಕೃತವಾಗಿಬಸೇರ್ಪಡೆಗೊಂಡಿರೋ ವಿ.ಎಸ್.ಪಾಟೀಲರು ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಗೆ...

Post
ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

ಟಿಬೇಟಿಯನ್ ಕ್ಯಾಂಪ್ ನಂ 1 ರಲ್ಲಿ ನಡೆದಿದೆ ಅಚ್ಚರಿಯ ಘಟನೆ, CCTVಯಲ್ಲಿ ಸೆರೆಯಾದದ್ದು ಭೂತದ ಆಟವಾ..? ಕಳ್ಳರ ಕೈಚಳಕವಾ..? ಅಷ್ಟಕ್ಕೂ ಕ್ಷಣದಲ್ಲೇ ಬೈಕ್ ಮಾಯವಾದದ್ದು ಹೇಗೆ..?

  ಇದು ಮುಂಡಗೋಡ ತಾಲೂಕಿನ ಮಟ್ಟಿಗೆ ವಿಚಿತ್ರ, ಭಯ ಹುಟ್ಟಿಸುವ, ಆತಂಕಕಾರಿ ಘಟನೆ. ಸಿಸಿಟಿವಿ ದೃಷ್ಯಗಳನ್ನು ನೋಡಿದ್ರೆ ಎಂಥವರೂ ಒಂದು ಕ್ಷಣ ನಿಬ್ಬೆರಗಾಗೋ ವಿಚಿತ್ರ ಘಟನೆ. ಅಲ್ಲಿ ಗ್ಯಾರೇಜ್ ಎದುರು ನಿಲ್ಲಿಸಿದ್ದ ಬೈಕ್ ಕ್ಷಣಾರ್ಧದಲ್ಲಿ ಮಂಗಮಾಯವಾಗತ್ತೆ. ಅದಕ್ಕೂ ಮುಂಚೆ ಅದೇಂತದ್ದೋ ವಿಚಿತ್ರ ಚಲನ ವಲನ, ಅಷ್ಟಕ್ಕೂ ಇದೇಲ್ಲ ಕಳ್ಳರ ಕರಾಮತ್ತಿನ ಕಣ್ಣಾಮುಚ್ಚಾಲೆಯಾ..? ಅಥವಾ ಆತ್ಮಗಳ ಅಸಲೀ ಚೇಷ್ಟೆಯಾ..? ಅರ್ಥವೇ ಆಗುತ್ತಿಲ್ಲ. CCTV ದೃಷ್ಯ..! ಅಸಲು, ಇದು ನಡೆದದ್ದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂಬರ್ ಒಂದರ...

error: Content is protected !!