ಧಾರವಾಡ ಡಬ್ಬಲ್ ಮರ್ಡರ್, ನಾಲ್ವರು ಆರೋಪಿಗಳು ಮುಂಡಗೋಡಿನಲ್ಲಿ ವಶಕ್ಕೆ..!

ಧಾರವಾಡದ ಜನತೆಯನ್ನು ಬೆಚ್ಚಿಬಿಳಿಸಿದ್ದ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ನಾಲ್ವರು ಆರೋಪಿಗಳನ್ನು ಮುಂಡಗೋಡಿನಲ್ಲಿ ಪೊಲೀಸರು ವಶಕ್ಕೆ ಪಡೆದು ಧಾರವಾಡಕ್ಕೆ ಕರೆದೊಯ್ದಿರೋ ಮಾಹಿತಿ ಲಭ್ಯವಾಗಿದೆ.

ಅರ್ಬಾಜ್ ಹಂಚಿನಾಳ, ನದೀಮ್ ಹಾಗೂ ರಹೀಂ ಸೇರಿ ನಾಲ್ವರನ್ನು ವಶಕ್ಕೆ ಪಡೆದಿರೋ ಧಾರವಾಡ ಪೊಲೀಸರು ಸದ್ಯ ಧಾರವಾಡ ಉಪನಗರ ಠಾಣೆಯಲ್ಲಿ ವಿಚಾರಣೆ ನಡಿಸ್ತಿದಾರೆ. ನಿನ್ನೆ ಅಂದ್ರೆ, ಮೇ.25ರ ತಡರಾತ್ರಿ ಧಾರವಾಡದ ಕಮಲಾಪುರದ ಹೊರವಲಯದಲ್ಲಿ ನಡೆದಿದ್ದ ಡಬಲ್ ಮರ್ಡರ್ ಕೇಸಿನಲ್ಲಿ, ಕಮಲಾಪುರ ನಿವಾಸಿ ಮಹಮ್ಮದ ಕುಡಚಿ ಎಂಬುವವರನ್ನು ಆತನ ನಿವಾಸದಲ್ಲೇ ಹತ್ಯೆ ಮಾಡಲಾಗಿತ್ತು.

ಆರೋಪಿಗಳೊಂದಿಗೆ ಇದ್ನಾ ಗಣೇಶ್..?
ಇನ್ನು, ಹತ್ಯೆಯಾದ ಮಹಮ್ಮದ ಮನೆಯ ಸಮೀಪ ಸಾವನಪ್ಪಿದ ಮುಂಡಗೋಡಿನ ಗಣೇಶ ಕಮ್ಮಾರ್ ಆರೋಪಿಗಳೊಂದಿಗೆ ಬಂದಿದ್ದ ಎನ್ನಲಾಗಿದೆ. ರಿಯಲ್ ಎಸ್ಟೇಟ್ ಉದ್ಯಮಿ ಮಹ್ಮದ್ ಹತ್ಯೆಯ ಸಂದರ್ಭದಲ್ಲಿ ಕಾಲಿಗೆ ಏಟು ಬಿದ್ದು ಮನೆಯ ಸಮೀಪವೇ ಮುಂಡಗೋಡಿನ ಗಣೇಶ್ ಸಾವನಪ್ಪಿದ್ದ ಅಂತಾ ಪೊಲೀಸರು ಅಂದಾಜಿಸಿದ್ದಾರೆ..

ದಾಂಡೇಲಿಗೆ..!
ಇನ್ನು, ಭೀಕರವಾಗಿ ಹತ್ಯೆ ಮಾಡಿದ ನಂತರ ದಾಂಡೇಲಿಗೆ ತೆರಳಿ ತಲೆ ಮರಿಸಿಕೊಂಡಿದ್ದ ಆರೋಪಿಗಳು, ಪೊಲೀಸರ ಬರುತ್ತಿರುವ ಮಾಹಿತಿ ಮೇರೆಗೆ ಮುಂಡಗೋಡಕ್ಕೆ ಶಿಫ್ಟ್ ಆಗಿದ್ದರು ಅನ್ನೋ ಮಾಹಿತಿ ಲಭ್ಯವಾಗಿದೆ. ಹೀಗಾಗಿ, ಆರೋಪಿಗಳ ಜಾಡು ಹಿಡಿದು ಮುಂಡಗೋಡದಲ್ಲಿ ನಾಲ್ವರನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು, ಧಾರವಾಡ ಉಪನಗರ ಪೊಲೀಸ್ ಠಾಣೆಗೆ ಆರೋಪಿಗಳನ್ನು ಪೊಲೀಸರು ಕರೆತಂದು ವಿಚಾರಣೆ ಮಾಡುತ್ತಿದ್ದು, ಉಪನಗರ ಪೊಲೀಸ್ ಠಾಣೆಯಲ್ಲಿ ಜೋಡಿ ಕೊಲೆ ಪ್ರಕರಣ ದಾಖಲಾಗಿದೆ.

error: Content is protected !!