ಮುಂಡಗೋಡ ತಾಲೂಕಿನ ನ್ಯಾಸರ್ಗಿಯಲ್ಲಿರೋ ಐಟಿಐ ಕಾಲೇಜಿನಲ್ಲಿ ಶಿಕ್ಷಕರ ಬೇಕಾಬಿಟ್ಟಿ ವರ್ತನೆಗೆ ವಿದ್ಯಾರ್ಥಿಗಳು ಕಂಗೆಟ್ಟಿದ್ದಾರೆ. ತಮಗಿಷ್ಟ ಬಂದಂತೆ ಹಣ ವಸೂಲಿ ಮಾಡುತ್ತಿರೋ ಕೆಲವು ಶಿಕ್ಷಕರ ವಿರುದ್ಧ ವಿದ್ಯಾರ್ಥಿಗಳು ಆಕ್ರೋಶ ಹೊರಹಾಕಿದ್ದಾರೆ. ದುರಂತ ಅಂದ್ರೆ, ಇಲ್ಲಿನ ಅವ್ಯವಸ್ಥೆ ಬಗ್ಗೆ ಪ್ರಶ್ನೆ ಮಾಡಲು ಹೋದ ಸಮಾಜಿಕ ಕಾರ್ಯಕರ್ತನಿಗೇ ಅವಾಚ್ಯವಾಗಿ ನಿಂದಿಸಿದ್ದಾರಂತೆ ಇಲ್ಲಿನ ಶಿಕ್ಷಕರು..!
ಆಗಿದ್ದೇನು..?
ಅಂದಹಾಗೆ, ನ್ಯಾಸರ್ಗಿಯ ಸರ್ಕಾರಿ ಐಟಿಐ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮನಬಂದಂತೆ ಹಣ ವಸೂಲಿ ಮಾಡುತ್ತಿದ್ದಾರೆ ಅಂತಾ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಸಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿಯವರನ್ನು ಕರೆದೊಯ್ದು ಹೀಗ್ಯಾಕೆ ಮಾಡ್ತಿದ್ದಿರಿ ಅಂತಾ ಕೇಳಿದ್ರೆ, ಅಲ್ಲಿರೋ ಶಿಕ್ಷಕನೊಬ್ಬ ಬಾಯಿಗೆ ಬಂದಂತೆ ನಿಂದಿಸಿದ್ದಾನೆ ಅಂತಾ ಆರೋಪಿಸಲಾಗಿದೆ. ಹೀಗಾಗಿ, ಆಕ್ರೋಸಗೊಂಡ ಸಾಮಾಜಿಕ ಕಾರ್ಯಕರ್ತ ಅಯ್ಯಪ್ಪ ಭಜಂತ್ರಿ, ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಾರೆ.
ಅರೆನಗ್ನ ಪ್ರತಿಭಟನೆ.!
ಇನ್ನು ಶಿಕ್ಷಕರ ಬೇಜವಾಬ್ದಾರಿ ಖಂಡಿಸಿರೋ ಅಯ್ಯಪ್ಪ ಭಜಂತ್ರಿ, ಅವಾಚ್ಯವಾಗಿ ನಿಂದಿಸಿರೋ ಕಾರಣಕ್ಕೆ ಆಕ್ರೋಶಗೊಂಡು, ಅರೆನಗ್ನ ಸ್ಥಿತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ, ತಕ್ಷಣವೇ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳಬೇಕು ಅಂತಾ ಆಗ್ರಹಿಸಿದ್ದಾರೆ.