ಧಾರವಾಡದಲ್ಲಿ ಡಬಲ್ ಮರ್ಡರ ಆಗಿದೆ.
ಇಬ್ಬರು ವ್ಯಕ್ತಿಗಳನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಬರ್ಬರ ಕೊಲೆ ಮಾಡಲಾಗಿದೆ‌. ಧಾರವಾಡದ ಕಮಲಾಪೂರದ ಹಾತರಕಿ ಪ್ಲಾಟ್ ಬಳಿ ಘಟನೆ ನಡೆದಿದ್ದು ಇದ್ರಲ್ಲಿ ಮುಂಡಗೋಡಿನ ಯುವಕನೂ ಬರ್ಬರವಾಗಿ ಕೊಲೆಯಾಗಿದ್ದಾನೆ.

ಅಂದಹಾಗೆ, ಮುಂಡಗೋಡಿನ ದೇಶಪಾಂಡೆ ನಗರದ ಯುವಕ ಗಣೇಶ್ ಕಮ್ಮಾರ್ (ಸಾಳುಂಕೆ)(24) ಕೊಲೆಯಾಗಿದ್ದಾನೆ. ಮತ್ತೋರ್ವ ಮಹ್ಮದ್ ಖುಡಚಿ (45) ಭೀಕರವಾಗಿ ಹತ್ಯೆಯಾಗಿದ್ದಾನೆ. ಹೀಗಾಗಿ ಚುಮು ಚುಮು ಬೆಳಕಿನಲ್ಲಿ ನಡೆದಿರೋ ಭೀಕರ ಡಬಲ್ ಮರ್ಡರ್ ಗೆ ಧಾರವಾಡದ ಕಮಲಾಪುರ ಗ್ರಾಮ ಬೆಚ್ಚಿ ಬಿದ್ದಿದೆ.

ಕೊಲೆಯಾದ ಗಣೇಶ್

ರಿಯಲ್ ಎಸ್ಟೇಟ್ ಉದ್ದಮಿ..!
ಅಂದಹಾಗೆ, ಕಮಲಾಪುರ ನಗರದ ನಿವಾಸಿ ಮಹಮ್ಮದ್ ಕುಡುಚಿ (45) ಹತ್ಯೆಯಾದ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದಾರೆ. ಇನ್ನೂ ಹತ್ಯೆಯಾದ ಮಹಮ್ಮದ ಕುಡುಚಿ ಮನೆಯ ಸಮೀಪದಲ್ಲಿ ಮತ್ತೊರ್ವನ ಶವ ಪತ್ತೆಯಾಗಿದ್ದು, ಆತನೇ ಮುಂಡಗೋಡಿನ ದೇಶಪಾಂಡೆ ನಗರದ ನಿವಾಸಿ ಗಣೇಶ್ ಕಮ್ಮಾರ್ ಅಂತಾ ತಿಳಿದು ಬಂದಿದೆ..

ಕೊಲೆಯಾದ ಮಹ್ಮದ್ ಖುಡಚಿ

ಘಟನೆ ಹೇಗಾಯ್ತು..?
ನಿನ್ನೆ ತಡ ರಾತ್ರಿ ವೇಳೆ ಹತ್ಯೆಯಾದ ಮಹಮ್ಮದ್ ಕುಡುಚಿ ಆತ್ಮೀಯರೊಂದಿಗೆ ತಮ್ಮ ನಿವಾಸ ಬಳಿ ಮಾತನಾಡುತ್ತಾ ಕುಳಿತ ಸಂದರ್ಭದಲ್ಲಿ ಏಕಾಏಕಿ ಮಾರಕಾಸ್ತ್ರಗಳಿಂದ ದಾಳಿ ಮಾಡಿದ ದುಷ್ಕರ್ಮಿಗಳ ತಂಡ ಬರ್ಬರವಾಗಿ ಹತ್ಯೆ ಮಾಡಿದೆ. ಕುಡುಚಿ ಅವರ ಮನೆಯ ಸಮೀಪದಲ್ಲಿ ಪತ್ತೆಯಾಗಿರುವ ಮತೋರ್ವ ಮುಂಡಗೋಡಿನ ಗಣೇಶ್ ಕಮ್ಮಾರ್ ಕೂಡಾ ಮಹಮ್ಮದ ಕುಡುಚಿ ನಿವಾಸದಿಂದಲ್ಲೇ ದಾಳಿಗೆ ಒಳಗಾಗಿ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಸ್ವಲ್ಪ ದೂರದಲ್ಲಿ ಪ್ರಾಣ ಬಿಟ್ಟಿದ್ದು, ರಸ್ತೆ ಉದ್ದಕ್ಕೂ ರಕ್ತ ಚೆಲ್ಲಿದೆ. ಘಟನಾ ಸ್ಥಳದಲ್ಲಿ ಹಲವು ಮಾರಕಾಸ್ತ್ರಗಳು ದೊರೆತಿವೆ.

ಮುಂಡಗೋಡಿನ ಯುವಕ ಯಾಕೆ..?
ಇನ್ನು ಈ ಹತ್ಯೆಗೆ ನಿಖರ ಕಾರಣ ಏನು ಎಂಬುವುದು ಪೊಲೀಸರ ಸಂಪೂರ್ಣ ತನಿಖೆಯ ನಂತರ ತಿಳಿಯಬೇಕಾಗಿದೆ. ಮೇಲ್ನೋಟಕ್ಕೆ ಈ ಹಿಂದಿನ ಕೆಲ ವ್ಯವಹಾರಗಳೇ ಕೊಲೆಗೆ ಕಾರಣ ಅಂತಲೂ ಹೇಳಲಾಗುತ್ತಿದ್ದು, ಆದ್ರೆ ಮುಂಡಗೋಡಿನ ಯುವಕ ಅಲ್ಲಿಗೆ ಹೋಗಿದ್ದಾದ್ರೂ ಯಾಕೆ ಅಂತಾ ಪೊಲೀಸರು ತನಿಖೆ ಚುರುಕುಗೊಳ್ಳಿಸಿದ್ದಾರೆ.

ಮೂಲತಃ ಮುಂಡಗೋಡ ಪಟ್ಟಣದ ಗಣೇಶ್ ಕಮ್ಮಾರ್ (ಸಾಳೊಂಕೆ) ಹೊರದೇಶಕ್ಕೆ ಹೋಗಲು ಈಗಾಗಲೇ ಪಾಸ್ ಪೋರ್ಟ್ ಸಹ ರೆಡಿ ಮಾಡಿಸಿದ್ದ ಅಂತಾ ಆತನ ತಾಯಿ ತಿಳಿಸಿದ್ದಾರೆ. ನರ್ಸಿಂಗ್ ಮಾಡಿಕೊ‌ಂಡಿದ್ದ ಗಣೇಶ್, ವಿದೇಶದಲ್ಲಿ ಕೆಲಸ ಮಾಡುವ ಪ್ಲಾನ್ ಮಾಡಿದ್ದ ಅಂತಾ ತಾಯಿ ಹೇಳಿದ್ದಾರೆ. ಮನೆಗೆ ದುಡ್ಡು ಕೊಡ್ತೀನಿ ಹೊಸ ಮನೆ ಕಟ್ಟಿಸೋಣ ಅಂತ ಸಹ ತಾಯಿಗೆ ಹೇಳಿದ್ದನಂತೆ.. ಬೆಂಗಳೂರಿನಲ್ಲಿ ಹೊಮ್ ನರ್ಸ್ ಆಗಿದ್ದ ಗಣೇಶ್ ವಾರದ ಹಿಂದಷ್ಟೇ ಮುಂಡಗೋಡಿಗೆ ಬಂದಿದ್ದ, ಅಲ್ಲಿಂದ ಧಾರವಾಡಕ್ಕೆ ಹೋಗಿ ಬರ್ತೀನಿ ಅಂತ ಹೇಳಿ ಹೋಗಿದ್ದ ಗಣೇಶ್, ನಿನ್ನೆ ರಾತ್ರಿ ಈ ರೀತಿಯಾಗಿ ಸಾವು ಕಂಡಿರೋದು ಕುಟುಂಬಕ್ಕೆ ದಿಕ್ಕೇ ತೋಚದಂತಾಗಿದೆ. ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ.

ಪೊಲೀಸ್ ಆಯುಕ್ತರು ಹೇಳಿದ್ದೇನು..?
ಇನ್ನು ಸುದ್ದಿ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಉಪನಗರ ಠಾಣೆಯ ಪೊಲೀಸರು ಪರಿಶೀಲನೆ ಕೈಗೊಂಡಿದ್ದಾರೆ. ಈ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಬಳಿಕ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಆಯುಕ್ತ ರಮಣಗುಪ್ತಾ ಮಾತನಾಡಿ, ಎಲ್ಲ ಆಯಾಮದಲ್ಲೂ ತನಿಖೆ ನಡೆಸಲಾಗುತ್ತಿದೆ. ಪ್ರಾಥಮಿಕ ತನಿಖೆ ಈಗಾಗಲೇ ಆರಂಭವಾಗಿದೆ. ಈ ಘಟನೆಯು ತಡ ರಾತ್ರಿ ನಡೆದಿದೆ. ಮನೆಯಲ್ಲಿ ಒಬ್ಬರ ಶವ ಪತ್ತೆಯಾಗಿದೆ, ಜೊತೆಗೆ ಮನೆಯ ಸಮೀಪದಲ್ಲಿ ಮತ್ತೋರ್ವನ ಶವ ಸಿಕ್ಕಿದೆ. ಈ ಪ್ರಕರಣದ ತನಿಖೆಗಾಗಿ ಈಗಾಗಲೇ ತನಿಖಾ ತಂಡ ರಚನೆ ಮಾಡಲಾಗಿದೆ. ಆದಷ್ಡು ಬೇಗ ಆರೋಪಿಗಳ ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

error: Content is protected !!