Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡಿನಲ್ಲಿ ಪೋಟೋ ಸ್ಟುಡಿಯೋ, ಮೊಬೈಲ್ ಅಂಗಡಿ ದೋಚಿದ್ದ ಕಳ್ಳ ಅಂದರ್..!

ಮುಂಡಗೋಡ: ಪಟ್ಟಣದಲ್ಲಿ ಸೆಪ್ಟೆಂಬರ್ 3 ರ ರಾತ್ರಿ ನಡೆದಿದ್ದ , ಪೋಟೊ ಸ್ಟುಡಿಯೋ ಹಾಗೂ ಮೊಬೈಲ್ ಅಂಗಡಿ ಕಳ್ಳತನ ಪ್ರಕರಣದ ಆರೋಪಿಯನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಗದಗ ಜಿಲ್ಲೆ ನರಗುಂದ ತಾಲೂಕಿನ ಹಾಳಬಾವಿಕೇರಿಯ ಇಮಾಮಸಾಬ ದಾವಲಸಾಬ ಅಲ್ಲಿಬಾಯಿ (21) ಎಂಬುವವನೇ ಕಳ್ಳತನದ ಆರೋಪಿಯಾಗಿದ್ದಾನೆ. ಬಂಧಿತ ಅಂತರ್ ಜಿಲ್ಲಾ ಕಳ್ಳನಿಂದ ಪೇನಾಸಾನಿಕ್ ಎ.ಜಿ.ಎಸ್.ಸಿ-90 ವಿಡಿಯೋ ಕ್ಯಾಮರಾ, ನಿಕಾನ್ ಡಿ- 3500 ಡಿ.ಎಸ್.ಎಲ್.ಆರ್ ಫೋಟೋ ಕ್ಯಾಮರಾ, 20 ಮೊಬೈಲ್ ಗಳು ಹಾಗೂ ಮೊಬೈಲ್ ನ ಬಿಡಿ ಭಾಗಗಳು ಸೇರಿ, ಸುಮಾರು...

Post
ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿಗೆ ಆಗ್ರಹ, ತಹಶೀಲ್ದಾರ ಕಚೇರಿಯೆದರು ಪ್ರತಿಭಟನೆ..!

ಮುಂಡಗೋಡ: ಪಂಚಮಸಾಲಿ ಸಮಾಜವನ್ನು 2ಎಗೆ ಸೇರಿಸಲು ಆಗ್ರಹಿಸಿ ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಪಂಚಮಸಾಲಿ ಸಮಾಜದ ಮುಖಂಡರು ಪ್ರತಿಭಟನೆ ನಡೆಸಿದ್ರು. ಅಖಿಲ ಭಾರತ ಲಿಂಗಾಯತ ಪಂಚಮಸಾಲಿ ಸಂಘದ ಕಾರ್ಯಕರ್ತರು, 2ಎ ಮೀಸಲಾತಿಗೆ ಸೇರಿಸುವಂತೆ ಜಯಮೃತ್ಯುಂಜಯ ಸ್ವಾಮಿಗಳ ನೇತೃತ್ವದಲ್ಲಿ ಹೋರಾಟ ನಡೆಸಿದ್ದೆವು, ಆ ವೇಳೆ, ಸಿಎಂ ಆಗಿದ್ದ ಯಡಿಯೂರಪ್ಪ ಅವರು 2ಎ ಮೀಸಲಾತಿ ನೀಡಲು ಆರು ತಿಂಗಳು ಸಮಯ ಕೇಳಿದ್ದರು, ಆದ್ರೆ ಈಗ ಯಡಿಯೂರಪ್ಪರ ಸಮಯದ ಅವಧಿ ಮುಗಿದಿದೆ. ಈಗ ನೂತನವಾಗಿ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿಯಾಗಿದ್ದಾರೆ‌. ಹೀಗಾಗಿ, ಕೂಡಲೇ...

Post
ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!

ಮುಂಡಗೋಡಿನಲ್ಲಿ ಸರಳ ವಿಶ್ವಕರ್ಮ ಜಯಂತಿ ಆಚರಣೆ..!

ಮುಂಡಗೋಡ: ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ವಿಶ್ವಕರ್ಮ ಜಯಂತಿ ಉತ್ಸವ ಸರಳವಾಗಿ ಆಚರಿಸಲಾಯಿತು. ವಿಶ್ವಕರ್ಮರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ತಹಶೀಲ್ದಾರ ಕಾರ್ಯಾಲಯದ ಅಧಿಕಾರಿಗಳು ಹಾಗೂ ಮುಂಡಗೋಡ ತಾಲೂಕಿನ ವಿವಿಧ ಗ್ರಾಮಗಳ ವಿಶ್ವಕರ್ಮ ಸಮಾಜದ ಮುಖಂಡರು ಸರಳವಾಗಿ ಆಚರಿಸಿದ್ರು. ಈ ವೇಳೆ ವಿಶ್ವಕರ್ಮ ಸಮಾಜದ ಆರ್.ವಿ. ಬಡಿಗೇರ್, ಮೌನೇಶ್ ಬಡಿಗೇರ್, ತಹಶೀಲ್ದಾರ್ ಕಚೇರಿಯ ಅಧಿಕಾರಿಗಳು ಸೇರಿ ವಿಶ್ವಕರ್ಮ ಸಮಾಜದ ಹಲವು ಮುಖಂಡರು ಭಾಗವಹಿಸಿದ್ದರು.

Post
ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!

ಮುಂಡಗೋಡಿಗೆ ಸಿಮಾನಿ ಎಸ್.ಎಸ್. ನೂತನ ಪೊಲೀಸ್ ಇನ್ಸ್ ಪೆಕ್ಟರ್..!

ಮುಂಡಗೋಡಿಗೆ ನೂತನ ಪಿಐ ಆಗಿ, ಸಿಮಾನಿ ಎಸ್.ಎಸ್. ಬರಲಿದ್ದಾರೆ. ಸದ್ಯ ವಿಜಯಪುರದ DCRE (Directorate of Civil Rights Enforcement) ನಲ್ಲಿ ಕಾರ್ಯ ನಿರ್ವಹಿಸುತ್ತಿರೋ ಸಿಮಾನಿ ಎಸ್.ಎಸ್. ರವರನ್ನು ತಕ್ಷಣವೇ ವರ್ಗಾವಣೆಗೊಳಿಸಿ ಪೊಲೀಸ್ ಇಲಾಖೆ ಆದೇಶ ಹೊರಡಿಸಿದೆ. ಈ ಹಿಂದೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪಿಐ ಆಗಿದ್ದ, ಪ್ರಭುಗೌಡ ಕಿರೆದಳ್ಳಿ, ಡಿವೈಎಸ್ಪಿಯಾಗಿ ಬಡ್ತಿ ಹೊಂದಿ ಬಾಗಲಕೋಟೆ ಜಿಲ್ಲೆಗೆ ವರ್ಗಾವಣೆಯಾಗಿದ್ದರು.

Post
ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!

ಅಗಡಿಯಲ್ಲಿ ತಮ್ಮ ನೆಚ್ಚಿನ ಹೋರಿಗೆ ಹುಟ್ಟು ಹಬ್ಬ ಆಚರಿಸಿದ ಗ್ರಾಮಸ್ಥರು..!

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದಲ್ಲಿ ಗಾಡಾ ಓಡಿಸುವ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದಿರೋ ಹೋರಿಗೆ ಹುಟ್ಟು ಹಬ್ಬ ಆಚರಿಸಿದ್ರು. ಗ್ರಾಮಸ್ಥರೇಲ್ಲರೂ ಸೇರಿ ರಾಜಾ ಎಂಬ ಹೆಸರಿನ ಹೋರಿಗೆ ವಿಶೇಷ ಅಲಂಕಾರ ಮಾಡಿ, ತಳೀರು ತೋರಣ ಕಟ್ಟಿ, ಕೇಕ್ ಕತ್ತರಿಸಿ ಹುಟ್ಟು ಹಬ್ಬದ ಸಂಭ್ರಮಾಚರಣೆ ಮಾಡಿದ್ರು. ಅಲ್ಲದೇ ಗ್ರಾಮಸ್ಥರು ತಮ್ಮ‌ನೆಚ್ಚಿನ ಹೋರಿಗೆ ವಿಶೇಷ ಸಿಹಿ ತಿನ್ನಿಸಿ ಸಂಭ್ರಮಿಸಿದ್ರು. ಮಹಿಳೆಯರು ಆರತಿ ಬೆಳಗಿದರು, ಜಯಘೋಷಗಳೊಂದಿಗೆ ಕುಣಿದು ಕುಪ್ಪಳಿಸಿದ್ರು.

Post
ತೈಲ ಬೆಲೆ ಇಳಿಸುವಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ, ಮನವಿ ಸಲ್ಲಿಕೆ..!

ತೈಲ ಬೆಲೆ ಇಳಿಸುವಂತೆ ಮಹಿಳಾ ಕಾಂಗ್ರೆಸ್ ಪ್ರತಿಭಟನೆ, ಮನವಿ ಸಲ್ಲಿಕೆ..!

ಮುಂಡಗೋಡ: ಪಟ್ಟಣದ ತಹಶೀಲ್ದಾರ್ ಕಚೇರಿ ಎದುರು ಇಂದು, ಗ್ಯಾಸ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಇಳಿಸುವಂತೆ ಮುಂಡಗೋಡ ತಾಲೂಕಾ ಮಹಿಳಾ ಬ್ಲಾಕ್ ಕಾಂಗ್ರೆಸ್ ವತಿಯಿಂದ ತಹಶೀಲ್ದಾರ್ ಮುಖಾಂತರ ಮಾನ್ಯ ರಾಷ್ಟ್ರಪತಿಯವರಿಗೆ ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಭಾರತಿ ಮಣ್ಣಪ್ಪ ಗೌಡ್ರು, ಮಾಜಿ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಶಾರದಾ ಬಾಯಿ ರಾಠೋಡ್, ಧರ್ಮರಾಜ ನಡಗೇರಿ, ಎಂ. ಎನ್. ದುಂಡಸಿ, ಅಲಿ ಹಸನ್ ಬೆಂಡಿಗೇರಿ, ಮಲ್ಲಿಕಾರ್ಜುನ್ ಗೌಳಿ, ಜೈನು ಬೆಂಡಿಗೇರಿ, ಅಲ್ಲಾಉದ್ದೀನ್ ಕಮಡೊಳ್ಳಿ,ಪ್ರಶಾಂತ್...

Post
ನಂದಿಕಟ್ಟಾ ಪ್ಲಾಟ್ ನಲ್ಲಿ ಕುಡಿಯಲು ನೀರಿಲ್ಲ, ಗದ್ದೆಗಳಿಗೆ ಅಲೆದಾಡಿ ನೀರು ತರದೇ ಗತಿಯಿಲ್ಲ; ಎಲ್ಲಿದೆ ಆಡಳಿತ..?

ನಂದಿಕಟ್ಟಾ ಪ್ಲಾಟ್ ನಲ್ಲಿ ಕುಡಿಯಲು ನೀರಿಲ್ಲ, ಗದ್ದೆಗಳಿಗೆ ಅಲೆದಾಡಿ ನೀರು ತರದೇ ಗತಿಯಿಲ್ಲ; ಎಲ್ಲಿದೆ ಆಡಳಿತ..?

ನಂದಿಕಟ್ಟಾ ಗ್ರಾಮದ ನವನಗರ ಪ್ಲಾಟ್ ನ ಜನರು ನಿತ್ಯವೂ ಪರದಾಡುತ್ತಿದ್ದಾರೆ. ಯಾಕಂದ್ರೆ, ಇವ್ರಿಗೆ ಕುಡಿಯಲು ನೀರೇ ಸಿಗುತ್ತಿಲ್ಲ. ನಿತ್ಯವೂ ಕುಡಿಯುವ ನೀರಿಗಾಗಿ ಮಕ್ಕಳು, ಮರಿಗಳೊಂದಿಗೆ ಕೊಡಹೊತ್ತು ಗದ್ದೆಗಳಲ್ಲಿ ತಿರುಗಾಡುವ ಪರಿಸ್ಥಿತಿ ಇಲ್ಲಿನ ಜನ್ರದ್ದು.. ಹೀಗಾಗಿ, ಗ್ರಾಮ ಪಂಚಾಯತಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸ್ತಿದಾರೆ ನಿವಾಸಿಗಳು. ಏನಿದು ಸಮಸ್ಯೆ..? ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ವಾರ್ಡ ನಂಬರ್ 2 ರಲ್ಲಿ ಬರೋ ನವನಗರ ಪ್ಲಾಟ್ ನಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಹೀಗಾಗಿ, ಪ್ರತಿದಿನ ಇಲ್ಲಿ‌ನ ಜನ ಬಹುತೇಕ...

Post
ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಸಚಿವ ಹೆಬ್ಬಾರ್ ಅಂದ್ರೆ ರೈತರ ಪಾಲಿನ ಭಗೀರಥ: ಪತ್ರಕರ್ತ ಹರಿಪ್ರಕಾಶ್ ಕೋಣೆಮನೆ

ಮುಂಡಗೋಡ; ಸಚಿವ ಶಿವರಾಮ್ ಹೆಬ್ಬಾರ್ ಕ್ಷೇತ್ರದ ರೈತರ ಮನಸಲ್ಲಿ ಭಗೀರಥರ ಸ್ಥಾನ ಪಡೆದಿದ್ದಾರೆ ಅಂತಾ ಹಿರಿಯ ಪತ್ರಕರ್ತ, ಸಂಪಾದಕ ಹರಿಪ್ರಕಾಶ್ ಕೋಣೆಮನೆ ಸಚಿವ ಹೆಬ್ಬಾರ್ ರವರನ್ನು ಹಾಡಿಹೊಗಳಿದ್ರು. ಮುಂಡಗೋಡ ತಾಲೂಕಾಸ್ಪತ್ರೆಯಲ್ಲಿ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ ಹಾಗೂ ಭಾರತೀಯ ವಿಕಾಸ ಟ್ರಸ್ಟ್ (ಸೆಲ್ಕೋ) ಸಂಸ್ಥೆಗಳು ನೀಡಿದ ಡಯಾಲಿಸಿಸ್ ಯಂತ್ರದ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು. ಸಚಿವರ ಪ್ರಯತ್ನದಿಂದ ಮೊದಲ ಬಾರಿಗೆ ಜಿಲ್ಲೆಯಲ್ಲಿ ವಿಮಾನ ನಿಲ್ದಾಣವಾಗುತ್ತಿದೆ. ಇನ್ನು, ಯಲ್ಲಾಪುರದ ಸರಕಾರಿ ಆಸ್ಪತ್ರೆಯಲ್ಲಿ ತಮ್ಮ ಸಂಸ್ಥೆಯ ಮೂಲಕವಾಗಿ 35 ಲಕ್ಷ...

Post
ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?

ಇದು ಮುಂಡಗೋಡ ಕಾಂಗ್ರೆಸ್ ಸೀಕ್ರೆಟ್..! ಆ ಜಂಗಲ್ ರೆಸಾರ್ಟು, ಸೆಪ್ಟೆಂಬರ್ ಇಪ್ಪತ್ತು, ಏನಿದರ ಮಸಲತ್ತು..?

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ನ “ಕೈ” ಬಲಗೊಳ್ಳುತ್ತಿದೆ. ಮುಂಬರೋ ವಿಧಾನಸಭಾ ಚುನಾವಣೆ ಹೊತ್ತಿಗೆ ತನ್ನ ತೋಳ್ಬಲ ತೋರಿಸಲು ಏನೇನು ಬೇಕೋ ಅದನ್ನೇಲ್ಲ ಮಾಡಿಕೊಳ್ಳುವ ಉಮೇದಿನಲ್ಲಿದ್ದಾರೆ ದೇಶಪಾಂಡೆ ಪಡೆ. ಹೀಗಾಗಿನೇ, ಈಗಿಂದಲೇ ಅಂತಹದ್ದೊಂದು ರಣತಂತ್ರ ರೂಪಿಸಿ, ಕಾರ್ಯಕರ್ತರನ್ನು ಉತ್ತೇಜಿಸೋ ಕೆಲಸದಲ್ಲಿ ನಿರತವಾಗಿದೆ ಅದೋಂದು ಟೀಂ.. ಯುವಕರೇ ಟಾರ್ಗೆಟ್..! ಯಾವಾಗ, ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಮುಂದಿನ ಚುನಾವಣೆಲಿ ಪ್ರಶಾಂತ್ ದೇಶಪಾಂಡೆಯವರೇ ಕಣಕ್ಕಿಳಿಯೋದು ಅಂತಾ ಘೋಷಣೆಯ ಹಂತಕ್ಕೆ ಬಂತೋ, ಅವತ್ತಿನಿಂದಲೇ, ಕ್ಷೇತ್ರದಲ್ಲಿ ಗಟ್ಟಿಗೊಳ್ಳಲು ಬೇಕಾದ ಒಂದಿಷ್ಟು ತಯಾರಿ ಶುರುವಿಟ್ಟುಕೊಂಡಿದ್ದಾರೆ ದೊಡ್ಡ...

Post
ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?

ಇಂದೂರು ಸಂತೆಗೆ ಬರೋ ವ್ಯಾಪಾರಿಗಳಿಗೆ ಇದೇಂಥಾ ಕಿರಿಕಿರಿ..? ಪಿಡಿಓ ಸಾಹೇಬ್ರೆ ಎಲ್ಲಿದ್ದೀರಿ..?

ಮುಂಡಗೋಡ:ತಾಲೂಕಿನ ಇಂದೂರು ಸಂತೆಯಲ್ಲಿ ವ್ಯಾಪಾರಿಗಳಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ಕರ ವಸೂಲಿ ಹೆಸ್ರಲ್ಲಿ ಇಲ್ಲಿ ದಂಧೆ ಮಾಡಲಾಗ್ತಿದೆ ಅನ್ನೋ ಆರೋಪ ಕೇಳಿ ಬಂದಿದೆ. ಟೆಂಡರ್ ಅವದಿ ಮುಗಿದು ತಿಂಗಳುಗಳೇ ಕಳೆದ್ರೂ ಇಲ್ಲಿ ವ್ಯಾಪಾರಿಗಳಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗ್ತಿದೆ. ಆದ್ರೆ ಇದನ್ನೇಲ್ಲ ನಿಭಾಯಿಸಬೇಕಿದ್ದ ಪಿಡಿಓ ಮಾತ್ರ ಅದೇನು ಮಾಡ್ತಿದಾರೋ ಯಾರಿಗೂ ಗೊತ್ತಿಲ್ಲ. ಬಾಯಿಗೆ ಬಂದದ್ದೇ ರೇಟು..! ಇಂದೂರು ಸಂತೆಯಲ್ಲಿ ಸುತ್ತ ಮುತ್ತಲ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಿಂದಲೂ ವ್ಯಾಪಾರಿಗಳು ಬರ್ತಾರೆ. ಅಲ್ಲದೇ ರೈತರು ತಮ್ಮ ಗದ್ದೆಗಳಲ್ಲಿ ಬೆಳೆದ...

error: Content is protected !!