ಮುಂಡಗೋಡ ಬಿಜೆಪಿಯಲ್ಲಿನ ಒಳಬೇಗುದಿ ಸಧ್ಯಕ್ಕೆ ತಣ್ಣಗಾಗುವ ಯಾವ ಲಕ್ಷಣಗಳೂ ಕಾಣ್ತಿಲ್ಲ. ಇಲ್ಲಿನ ಸ್ಥಳೀಯ ಮುಖಂಡರ ಒಳಗೊಳಗಿನ ತಿಕ್ಕಾಟಕ್ಕೆ ಬಿಜೆಪಿ ಬಸವಳಿದು ಹೋಗ್ತಿದೆ. ಅಷ್ಟಕ್ಕೂ ಇದನ್ನೇಲ್ಲ ಇಲ್ಲಿ ಯಾಕೆ ಹೇಳ್ತಿದಿವಿ ಅಂದ್ರೆ, ಮುಂಡಗೋಡ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ಗಣೇಶ ಶಿರಾಲಿ ರಾಜೀನಾಮೆ ನೀಡಿ ಎದ್ದು ಹೋಗೋ ಮಾತಾಡಿದ್ದಾರೆ.
ಎಲ್ರಿಗೂ ಥ್ಯಾಂಕ್ಸ್..!
ಅಂದಹಾಗೆ, ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ ತಾವು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡ್ತಿನಿ ಅಂತಾ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ. ಇದಷ್ಟೇ ಆಗಿದ್ದಿದ್ರೆ ಅದೇನೋ ಬಿಡಿ ಅಂತಾ ಸುಮ್ಮನಿರಬಹುದಿತ್ತು. ಆದ್ರೆ ಗಣೇಶ್ ಶಿರಾಲಿ ತಮ್ಮ ಸ್ಟೇಟಸ್ ನಲ್ಲಿ ಬರೆದುಕೊಂಡಿರೋ ಮಾತುಗಳು ನಿಜಕ್ಕೂ ಬೆರಗು ಹುಟ್ಟಿಸತ್ತೆ.
ಗಣೇಶ್ ಬರೆದುಕೊಂಡಿದ್ದಿಷ್ಟು..!
ಕಳೆದ ಎರಡು ವರ್ಷಗಳಿಂದ ಯುವ ಮೋರ್ಚಾದ ಅಧ್ಯಕ್ಷನಾಗಿ ಪಕ್ಷದ ನಿಷ್ಠಾವಂತನಾಗಿ ಕಾರ್ಯಕರ್ತನಾಗಿ ಪಕ್ಷ ನೀಡಿದ ಕೆಲಸವನ್ನು ಮಾಡಿದ್ದೇನೆ.ಕೆಲವು ನಾಯಕರ ನಮ್ಮ ಏಳಿಗೆಯನ್ನು ಸಹಿಸದೆ ಕಾರ್ಯಕರ್ತರು ಪಕ್ಷದ ಹಿರಿಯರಲ್ಲಿ ನಮ್ಮ ಬಗ್ಗೆ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ಈ ಕಾರಣದಿಂದ ಮನನೊಂದು ಯುವ ಮೋರ್ಚಾ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ.ಈ ಎರಡು ವರ್ಷಗಳಲ್ಲಿ ನನಗೆ ಸಲಹೆಗಳನ್ನು ಸಹಕಾರ ನೀಡುತ್ತಾ ಬಂದಂತಹ ಸಚಿವರು ಶ್ರೀ ಶಿವರಾಮ ಹೆಬ್ಬಾರ ಸರ್ ಅವರಿಗೆ ಹಾಗೂ ಯುವಮೋರ್ಚಾದ ಜಿಲ್ಲಾಧ್ಯಕ್ಷರಾದ ಪ್ರಶಾಂತ ಅಣ್ಣನಿಗೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಿಗೂ ಪಕ್ಷದ ಮುಖಂಡರಿಗೂ ಹಾಗೂ ಕಾರ್ಯಕರ್ತರಿಗೂ ಹೃದಯಪೂರ್ವಕ ನಮನಗಳು ಅಂತಾ ತಮ್ಮ ವಾಟ್ಸಾಪ್ ಸ್ಟೇಟಸ್ ನಲ್ಲಿ ಬರೆದುಕೊಂಡಿದ್ದಾರೆ.
ಒಪ್ಪಲೇ ಇಲ್ವಾ..?
ಹಾಗಾದ್ರೆ, ಇಲ್ಲಿನ ಬಿಜೆಪಿ, ಗಣೇಶ್ ಶಿರಾಲಿ ಎಂಬ ಯುವಕನ ಕಾರ್ಯವನ್ನು ಒಪ್ಪಿಕೊಳ್ಳಲೇ ಇಲ್ವಾ..? ಅಷ್ಟಕ್ಕೂ, ಇದೇಲ್ಲ ಹಿರಿಯರಿಗೆ ಗೊತ್ತಿಲ್ವಾ..? ಗಣೇಶ್ ಶಿರಾಲಿಯ ನೇತೃತ್ವದಲ್ಲಿನ ಯುವ ಮೋರ್ಚಾ ಕಾರ್ಯಕ್ರಮಗಳು ಬಿಜೆಪಿಯ ಏಳ್ಗೆಗೆ ಸಹಕಾರಿಯಾಗಲಿಲ್ವಾ..? ಇದೇಲ್ಲ ಪ್ರಶ್ನೆ ಉದ್ಭವಿಸಿದೆ. ಈಗಷ್ಟೇ ಹಾನಗಲ್ ಉಪ ಚುನಾವಣೆಯ ಅಬ್ಬರದ ಪ್ರಚಾರದಲ್ಲಿ ಮುಂಡಗೋಡ ತಾಲೂಕಿನ ಯುವ ಪಡೆಯನ್ನೇ ಅಖಾಡದಲ್ಲಿ ಧುಮುಕಿಸಿದ್ದ ಹೆಬ್ಬಾರ್ ಸಾಹೇಬ್ರಿಗೆ, ತಮ್ಮ ಕ್ಷೇತ್ರದ ಯುವ ಮೋರ್ಚಾದೊಳಗಿನ ಒಳ ಮಸಲತ್ತುಗಳು ಗಮನಕ್ಕೆ ಬರಲೇ ಇಲ್ವಾ..? ಹಾಗಂತ ಪ್ರಶ್ನಿಸ್ತಿದಾರೆ ಜನ.
ಒಟ್ನಲ್ಲಿ, ಮುಂಡಗೋಡ ಬಿಜೆಪಿಯ ಆಂತರಿಕ ಬೇಗುದಿಗೆ ಮೊದಲ ವಿಕೆಟ್ ಪತನವಾಗೋ ಎಲ್ಲಾ ಲಕ್ಷಣ ಕಾಣ್ತಿದೆ.. ರಾಜೀನಾಮೆಯ ಮಾತಾಡಿರೋ ಗಣೇಶ್ ಶಿರಾಲಿ, ಪಕ್ಷದೊಳಗೆ ಏನೇಲ್ಲ ನಡೀತಿರಬಹುದು ಅನ್ನೋ ಕುತೂಹಲಕ್ಕೆ ಸಾವಿರ ಸಾವಿರ ಪ್ರಶ್ನೆ ಏಳುವಂತೆ ಮಾಡಿದ್ದಾರೆ.