ಮುಂಡಗೋಡ: ತಾಲೂಕಿನ ಹುನಗುಂದ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ‌ ಮರವಣಿಗೆ ನಡೆಸಿದ್ರು.

ಶಿಕ್ಷಣ ಇಲಾಖೆಯ ನಿರ್ದೇಶನದಂತೆ ಎಲ್ಲಾ ಶಾಲೆಗಳಲ್ಲೂ ಕನ್ನಡ ರಾಜ್ಯೋತ್ಸವದ ಪೂರ್ವ ತಯಾರಿ ಮೆರವಣಿಗೆ ನಡೆಸಲಾಗ್ತಿದೆ.. ಕನ್ನಡ ನಾಡು ನುಡಿಗಾಗಿ ದುಡಿದ ಕಿತ್ತೂರು ಚೆಮ್ಮಮ್ಮ, ಸಿದ್ಧಗಂಗಾ ಶಿವಕುಮಾರ ಶ್ರೀಗಳು ಸೇರಿದಂತೆ ಮಹನೀಯರ ವೇಷ ಭೂಷಣಗಳನ್ನು ತೊಟ್ಟ ವಿದ್ಯಾರ್ಥಿಗಳು, ಶಿಕ್ಷಕರು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು..

ಕನ್ನಡಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಕನ್ನಡಾಂಬೆಯ ನಾಡು ನುಡಿಯ ಬಗ್ಗೆ ಜಯಘೋಷ ಮೊಳಗಿಸಿದ್ರು. ಈ ವೇಳೆ ಶಾಲೆಯ ಶಿಕ್ಷಕರು, ಗ್ರಾಮಸ್ಥರು ಹಾಜರಿದ್ದರು.

error: Content is protected !!