ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಗರ್ಭಿಣಿಯೋರ್ವಳು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, 108 ಅಂಬ್ಯಲೆನ್ಸ್ ಗೆ ಕರೆ ಮಾಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ 108 ಸಿಬ್ಬಂದಿಗಳು, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮನೆಯ ಹತ್ತಿರ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ.
ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಬಳೂರು ಹಾಗೂ ಚಾಲಕ ಕೆಂಚೇಶ್ ಈ ವೇಳೆ ಇದ್ದರು.