ಮುಂಡಗೋಡ: ವಿಷ ಸೇವಿಸಿದ ಮಹಿಳೆಯೋರ್ವಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ನಡೆದಿದೆ.
ಪ್ರೇಮಾ ಕೃಷ್ಣಪ್ಪ ಕೊರಗರ್ ಎಂಬುವ ಗೃಹಿಣಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವಳಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಡಗೋಡಿನ 108 ಅಂಬ್ಯುಲೆನ್ಸ್ ಸಿಬ್ಬಂದಿ, ತಾಲ್ಲೂಕು ಆಸ್ಪತ್ರೆ ಮುಂಡಗೋಡಿಂದ ಹುಬ್ಬಳ್ಳಿ ಕಿಮ್ಸ್ ಗೆ,108 ಅಂಬ್ಯುಲೆನ್ಸ್ ಮುಖಾಂತರ ದಾಖಲಿಸಿದ್ದಾರೆ.
108 ಅಂಬ್ಯುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಬಳೂರು, ಚಾಲಕ
ಕೆಂಚೇಶ್ ಇ. ಎನ್ ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿದರು..
ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.