ಮುಂಡಗೋಡ ಅಭಿಮಾನಿಗಳಿಂದ “ಅಪ್ಪು” ನಿಧನಕ್ಕೆ ಅಶ್ರುತರ್ಪಣ..! ಕ್ಯಾಂಡಲ್ ಹಚ್ಚಿ ಕಂಬನಿ‌ ಮಿಡಿದ ಯುವಕರು..!!

ಮುಂಡಗೋಡ: ನಟ ಪುನೀತ್ ರಾಜಕುಮಾರ್ ವಿಧಿವಶರಾದ ಹಿನ್ನೆಲೆಯಲ್ಲಿ ಮುಂಡಗೋಡ ಶಿವಾಜಿ ಸರ್ಕಲ್ ನಲ್ಲಿ ಪುನೀತ್ ಅಭಿಮಾನಿಗಳು ಶೃದ್ಧಾಂಜಲಿ ಅರ್ಪಿಸಿದ್ರು.

ಪುನೀತ್ ಭಾವಚಿತ್ರಕ್ಕೆ ಗೌರವ ಸಲ್ಲಿಸಿದ ಅಭಿಮಾನಿಗಳು, ಮೇಣದ ಬತ್ತಿ ಹಚ್ಚಿ ಮೌನಾಚರಣೆ ಮಾಡಿದ್ರು. ಕನ್ನಡ ಚಿತ್ರರಂಗಕ್ಕೆ ಪುನೀತ್ ರಾಜಕುಮಾರ್ ನಿಧನ ತುಂಬಲಾರದ ನಷ್ಟ ಅಂತಾ ಕಂಬನಿ ಮಿಡಿದ ಯುವ ಅಭಿಮಾನಿಗಳು “We miss you ಅಪ್ಪು” ಅಂತಾ ಅಭಿಮಾನ ತೋರಿಸಿದ್ರು. ಈ ವೇಳೆ ಮುಂಡಗೋಡಿನ ಸಮಸ್ತ ಅಪ್ಪು ಅಭಿಮಾನಿಗಳು ಹಾಜರಿದ್ರು.

error: Content is protected !!