Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಸಾಲಗಾಂವಿಯಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಭತ್ತದ ಬಣಿವೆ..!

ಸಾಲಗಾಂವಿಯಲ್ಲಿ ಮಹಾಮಳೆಗೆ ಕೊಚ್ಚಿ ಹೋಯ್ತು ಭತ್ತದ ಬಣಿವೆ..!

ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಸತತ ಸುರಿಯುತ್ತಿರೋ ಮಳೆಯ ಕಾರಣಕ್ಕೆ ರೈತನೋರ್ವ ಭತ್ತ ಕಟಾವು ಮಾಡಿ ಇಟ್ಟಿದ್ದ ಬಣಿವೆ ನೀರಲ್ಲಿ ಮುಳುಗಿದೆ. ಗ್ರಾಮದ ಸರ್ವೆ ನಂ.212 ರಲ್ಲಿ ಸರ್ಕಾರಿ ಕೆರೆಯಲ್ಲಿ ಬಡ ರೈತ ಮಂಜುನಾಥ್ ಬಸವಣ್ಣೆಪ್ಪ ಮೂಲಿಮನಿ, ಭತ್ತದ ಬಣಿವೆ ಒಕ್ಕಿದ್ದ. ತನ್ನ ಗದ್ದೆಯಲ್ಲಿ ಜಾಗ ಇಲ್ಲದ ಸಲುವಾಗಿ ಖಾಲಿಯಾಗಿದ್ದ ಕೆರೆಯಲ್ಲಿ ಭತ್ತದ ಬಣಿವೆ ಒಕ್ಕಿದ್ದ ಹೀಗಾಗಿ, ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರೋ ಭಾರಿ ಮಳೆಯಿಂದ ಕೆರೆ ತುಂಬಿ ಭತ್ತದ ಬಣಿವೆ ನೀರಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದೆ....

Post
ಕೊಪ್ಪದ ರಸ್ತೆಯಲ್ಲೇ ನರಳಾಡುತ್ತಿದೆ ಅಪರೂಪದ ಕಾಡು ಪ್ರಾಣಿ, ಬೇಕಿದೆ ರಕ್ಷಣೆ..!

ಕೊಪ್ಪದ ರಸ್ತೆಯಲ್ಲೇ ನರಳಾಡುತ್ತಿದೆ ಅಪರೂಪದ ಕಾಡು ಪ್ರಾಣಿ, ಬೇಕಿದೆ ರಕ್ಷಣೆ..!

ಮುಂಡಗೋಡ: ತಾಲೂಕಿನಲ್ಲಿ ಸತತ ಮಳೆ ಬೀಳುತ್ತಿರೋ ಕಾರಣಕ್ಕೆ ಮನುಷ್ಯರಷ್ಟೇ ತೊಂದರೆ ಅನುಭವಿಸುತ್ತಿಲ್ಲ. ಬದಲಾಗಿ ಕಾಡು ಪ್ರಾಣಿಗಳಿಗೂ ಸಂಕಷ್ಟ ಎದುರಾಗಿದೆ. ತಾಲೂಕಿನ ಕೊಪ್ಪ ಗ್ರಾಮದ ಹತ್ತಿರ ರಸ್ತೆಯ ಮದ್ಯೆ ಕಾಡು ಮರ ನಾಯಿ ಅಂತ ಕರಿಯುವ ಅಪರೂಪದ ಪ್ರಾಣಿ ಅನಾರೋಗ್ಯದಿಂದ ಬಳಲುತ್ತಿದೆ. ತೀವ್ರ ನಿಶ್ಯಕ್ತಿಯಿಂದ ಬಳಲುತ್ತಿರೋ ಅಪರೂಪದ ಪ್ರಾಣಿ ರಸ್ತೆ ದಾಟಲು ಸಹ ಪರದಾಡುತ್ತಿದೆ. ರಸ್ತೆಯಲ್ಲಿ ಒದ್ದಾಡುತ್ತಿದ್ದ ಪ್ರಾಣಿಯನ್ನು ದಾರಿಹೋಕರು ರಸ್ತೆಯ ಪಕ್ಕದಲ್ಲಿ ಇಟ್ಟು ರಕ್ಷಿಸಿದ್ದಾರೆ. ಆದ್ರೆ ಈ ಅಪರೂಪದ ಪ್ರಾಣಿಗೆ ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಹೀಗಾಗಿ ಅರಣ್ಯ...

Post
ಮುಂಡಗೋಡ ತಾಲೂಕಿನಲ್ಲಿ ಸತತ ಮಳೆಯಿಂದ ಕಂಗಾಲಾದ ಜನ, ಎಲ್ಲೇಲ್ಲಿ ಹಾನಿ..?

ಮುಂಡಗೋಡ ತಾಲೂಕಿನಲ್ಲಿ ಸತತ ಮಳೆಯಿಂದ ಕಂಗಾಲಾದ ಜನ, ಎಲ್ಲೇಲ್ಲಿ ಹಾನಿ..?

ಮುಂಡಗೋಡ: ತಾಲೂಕಿನಾಧ್ಯಂತ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನ ಜನ ಹೈರಾಣಾಗಿದ್ದಾರೆ. ಹಗಲೂ ರಾತ್ರಿ ಸುರಿದ ಸತತ ಮಳೆಯಿಂದ ಅನ್ನದಾತನ ಬದುಕೆ ಅತಂತ್ರವಾಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಹಾಗಿದ್ರೆ ಎಲ್ಲೇಲ್ಲಿ ಏನೇನು ಹಾನಿಯಾಗಿದೆ..? ಇಲ್ಲಿದೆ ರಿಪೋರ್ಟ್ ಬಸಾಪುರದಲ್ಲಿ ಮನೆ ಕುಸಿತ..! ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸಾಪುರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಇಲ್ಲಿನ ಕಲ್ಲಯ್ಯ ಕರ್ಪೂರಮಠ್ ಎಂಬುವವರ ಮನೆ ಸಂಪೂರ್ಣ ಬಿದ್ದಿದೆ....

Post
ಕುಟುಂಬಕ್ಕೊಂದೇ ಟಿಕೆಟ್, ಕೈ ಪಡೆಯಲ್ಲಿ ಕೊಲಾಹಲ, ಆರ್ವಿಡಿ ಕನಸಿಗೆ ಕತ್ತರಿಯಾಗತ್ತಾ ತೀರ್ಮಾನ..?

ಕುಟುಂಬಕ್ಕೊಂದೇ ಟಿಕೆಟ್, ಕೈ ಪಡೆಯಲ್ಲಿ ಕೊಲಾಹಲ, ಆರ್ವಿಡಿ ಕನಸಿಗೆ ಕತ್ತರಿಯಾಗತ್ತಾ ತೀರ್ಮಾನ..?

ರಾಷ್ಟ್ರ ಮಟ್ಟದಲ್ಲಿ ಕೈ ಪಡೆ ಸಾಲು ಸಾಲು ಸೋಲುಗಳಿಂದ ಕಂಗೆಟ್ಟು ಹೊಸತನಗಳ ಅನ್ವೇಷಣೆಗೆ ಹೊರಟಿದೆ‌. ಉದಯಪುರದಲ್ಲಿ ಸದ್ಯ ನಡೆಯುತ್ತಿರೊ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಹೊಸತನಗಳಿಗೆ ಒಗ್ಗಬೇಕಾದ ಅನಿವಾರ್ಯತೆಗಳ ಬಗ್ಗೆ ಚರ್ಚೆ ನಡೆಸುತ್ತಿದೆ ಕಾಂಗ್ರೆಸ್. ಕುಟುಂಬ ರಾಜಕಾರಣಕ್ಕೆ ತೀಲಾಂಜಲಿ ಇಟ್ಟು, ಹೊಸ ಮುಖಗಳಿಗೆ ಅವಕಾಶ ಕೊಡುವ ಬಗ್ಗೆ ಚಿಂತನಾ ಶಿಬಿರದಲ್ಲಿ ಗಂಭೀರ ಚಿಂತನೆ ನಡೆದಿದೆ. ಕಳೆದ ಬಾರಿಯ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಮತ್ತೆ ಟಿಕೆಟ್ ಕೊಡಲ್ಲ ಅಂತಾ ಕಡ್ಡಿ ಮುರಿದಂತೆ ಹೇಳಿಬಿಡುವ ಎಲ್ಲಾ ಸಾಧ್ಯತೆಗಳೂ ನಿಚ್ಚಳವಾಗ್ತಿದೆ. ಹೀಗಾಗಿ, ರಾಜ್ಯದಲ್ಲಿ...

Post
ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಮೂವರ ಮೇಲೆ ಕೇಸ್..!

ಮುಂಡಗೋಡ: ತಾಲೂಕಿನ ಕಾತೂರಿನಲ್ಲಿ ಮಟ್ಕಾ ಅಡ್ಡೆಯ ಮೇಲೆ ಮುಂಡಗೋಡ ಪೊಲೀಸರು ದಾಳಿ ಮಾಡಿ ಮೂವರನ್ನ ವಶಕ್ಕೆ ಪಡೆದಿದ್ದಾರೆ. ಹಿರೇಕೆರೂರಿನಿಂದ ಬಂದು ಮಟ್ಕಾ ಆಡಿಸುತ್ತಿದ್ದ ಬುಕ್ಕಿ ಸೇರಿದಂತೆ ಮೂವರ ಮೇಲೆ ಕೇಸು ದಾಖಲಾಗಿದೆ. ಕಾತೂರಿನಲ್ಲಿ ಟೀ ಅಂಗಡಿ ನಡೆಸುತ್ತಿರೊ ಮಹಮ್ಮದ್ ಜಾಫರ್ ಮಹಮ್ಮದ ಹುಸೇನ ಮರಗಡಿ (48) ಎಂಬುವವನು ಮುಂಡಗೋಡ ತಾಲೂಕಿನ ಕಾತೂರ ಗ್ರಾಮದ ಆಲಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ಮೀನು ಮಾರ್ಕೆಟ್ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ನಿಂತು, ಮಟ್ಕಾ ಬರೆಯುತ್ತಿದ್ದ. ಈ ವೇಳೆ ಮುಂಡಗೋಡ ಪಿಎಸ್ಐ ಬಸವರಾಜ್...

Post
ಮುಂಡಗೋಡ ಸುಭಾಷ್ ‌ನಗರದಲ್ಲಿ ವ್ಯಕ್ತಿ ನೇಣಿಗೆ ಶರಣು, ಸಾವಿನ ಹಿಂದೆ ನೂರಾರು ಪ್ರಶ್ನೆ..?

ಮುಂಡಗೋಡ ಸುಭಾಷ್ ‌ನಗರದಲ್ಲಿ ವ್ಯಕ್ತಿ ನೇಣಿಗೆ ಶರಣು, ಸಾವಿನ ಹಿಂದೆ ನೂರಾರು ಪ್ರಶ್ನೆ..?

ಮುಂಡಗೋಡ: ಪಟ್ಟಣದ ಸುಭಾಷ್ ನಗರದಲ್ಲಿ ಓರ್ವ ವ್ಯಕ್ತಿ ನೇಣಿಗೆ ಶರಣಾಗಿದ್ದಾನೆ. ನಾರಾಯಣ ಲಮಾಣಿ ನೇಣಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಇಂದು ಮದ್ಯಾನ ಮನೆಯಲ್ಲಿ ಯಾರೂ ಇಲ್ಲದ ವೇಳೆ ತನ್ನ‌ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಅಂದಹಾಗೆ, ನಾರಾಯಣ ಲಮಾಣಿ, ಸಣ್ಣಪುಟ್ಟ ಗುತ್ತಿಗೆ ಕೆಲಸಗಳನ್ನು ಮಾಡಿಕೊಂಡಿದ್ದ. ಆದ್ರೆ ಇತ್ತಿಚೆಗೆ ಯಾಕೊ ಅದೇನೋ ಟೆನ್ಶೆನ್ ನಲ್ಲಿ ಇರುತ್ತಿದ್ದ ಅಂತಾ ಆತನ ಸ್ನೇಹಿತರ ಮೂಲಗಳಿಂದ ಮಾಹಿತಿ ಬಂದಿದೆ. ಆದ್ರೆ, ದಿಢೀರ್ ಆತನ ಆತ್ಮಹತ್ಯೆಗೆ ಕಾರಣವಾದ್ರೂ ಏನು ಅನ್ನೋ...

Post
ಕ್ಯಾಂಪ್ ನಂ.6 ರ ಬಳಿ ಕಲಘಟಗಿ ರಸ್ತೆಯಲ್ಲಿ “ಶ್ರೀಶೈಲಂ ಪ್ಯೂಲ್” ನೂತನ ಪೆಟ್ರೊಲ್ ಬಂಕ್ ಪ್ರಾರಂಭ..!

ಕ್ಯಾಂಪ್ ನಂ.6 ರ ಬಳಿ ಕಲಘಟಗಿ ರಸ್ತೆಯಲ್ಲಿ “ಶ್ರೀಶೈಲಂ ಪ್ಯೂಲ್” ನೂತನ ಪೆಟ್ರೊಲ್ ಬಂಕ್ ಪ್ರಾರಂಭ..!

ಮುಂಡಗೋಡ: ತಾಲೂಕಿನ ಕಲಘಟಗಿ ರಸ್ತೆಯ, ಟಿಬೇಟಿಯನ್ ಕ್ಯಾಂಪ್ ನಂಬರ್ 6 ಬಳಿ ಶ್ರೀಶೈಲಂ ಪ್ಯೂಲ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆಗೊಂಡಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಂಬ್ಯುಲೆನ್ಸ್ ಗೆ ಡಿಸೇಲ್ ಹಾಕುವ ಮೂಲಕ ನೂತನ ಪೆಟ್ರೊಲ್ ಬಂಕ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ‌. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ಮುಖಂಡರಾದ ನಾಗಭೂಷಣ ಹಾವಣಗಿ, ಬಸಯ್ಯ ನಡುವಿ‌ಮನಿ, ಸಿದ್ದು ಹಡಪದ, ಹಾಗೂ ಸ್ಥಳೀಯ ಪ್ರಮುಖರು, ಪೆಟ್ರೋಲ್ ಬಂಕ್ ಮಾಲೀಕರಾದ ಸುರೇಶ್ ಕಲ್ಲೋಳ್ಳಿ, ದೇವೇಂದ ಕೆಂಚಗೊಣ್ಣವರ್, ಮಂಜುನಾಥ್...

Post
ಮುಂಡಗೋಡ ತಾಲೂಕಿನ 16 ಗ್ರಾಪಂ ನಲ್ಲಿ ಕರ್ತವ್ಯದಲ್ಲಿರೋ ಸಿಬ್ಬಂದಿಗಳಿಂದ ಅನುಮೊದನೆಗೆ ಸರ್ಕಾರಕ್ಕೆ  ಮನವಿ..!

ಮುಂಡಗೋಡ ತಾಲೂಕಿನ 16 ಗ್ರಾಪಂ ನಲ್ಲಿ ಕರ್ತವ್ಯದಲ್ಲಿರೋ ಸಿಬ್ಬಂದಿಗಳಿಂದ ಅನುಮೊದನೆಗೆ ಸರ್ಕಾರಕ್ಕೆ ಮನವಿ..!

ಮುಂಡಗೋಡ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಇದುವರೆಗೂ ಅನುಮೋದನೆಯಾಗದೇ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಹಶೀಲ್ದಾರರವರ ಮುಖಾಂತರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ರು. ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸ್ತಿರೊ ಹಲವು ಸಿಬ್ಬಂದಿಗಳಿಗೆ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ, ಈ ಸಿಬ್ಬಂದಿಗಳು ಬದುಕು ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ, ತಕ್ಷಣವೇ ಅನುಮೋದನೆ ನೀಡಿ ಸಹಕಾರಿಯಾಗಬೇಕೆಂದು ಸರ್ಕಾರಕ್ಕೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ..

Post
ಆ ಹುಡುಗ ಭಗವಾಧ್ವಜ ಹಾಕಿದ್ದೇ ತಪ್ಪಾಯ್ತಾ..? ಅಷ್ಟಕ್ಕೂ ಆ ಪೊಲೀಸಪ್ಪನಿಗೆ ಅಷ್ಟೇಲ್ಲ ಅಧಿಕಾರ ಕೊಟ್ಟವರು ಯಾರು..?

ಆ ಹುಡುಗ ಭಗವಾಧ್ವಜ ಹಾಕಿದ್ದೇ ತಪ್ಪಾಯ್ತಾ..? ಅಷ್ಟಕ್ಕೂ ಆ ಪೊಲೀಸಪ್ಪನಿಗೆ ಅಷ್ಟೇಲ್ಲ ಅಧಿಕಾರ ಕೊಟ್ಟವರು ಯಾರು..?

ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯ ಪೊಲೀಸಪ್ಪ ಮಾಡಿರೋ ಅದೊಂದು ರಗಳೆ ,ರಾದ್ದಾಂತ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸುತ್ತಿದೆ. ತಾನೇ ಪೊಲೀಸ್ ವರಿಷ್ಠಾಧಿಕಾರಿ ಅಂತಾ ಪೋಸು ಕೊಡುವ ಹುಂಬತನಕ್ಕೆ ಈಗ ಅದೇ ಇಲಾಖೆಯ ಹಿರಿಯರು ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ. ಆಗಿದ್ದೇ‌ನು..? ಅದು ಪಾಳಾ ಗ್ರಾಮ, ಮುಂಡಗೋಡ ತಾಲೂಕಿನ ಮಟ್ಟಿಗೆ ಒಂದಿಷ್ಟು ಸೂಕ್ಷ್ಮ ಪ್ರದೇಶ. ಇಲ್ಲಿ ದಶಕಗಳ ಹಿ‌ಂದಿನಿಂದಲೂ ಕೋಮು ದಳ್ಳುರಿ ಒಳಗೊಳಗೆ ಹೊಗೆಯಾಡಿ, ಕೆಲವು ಬಾರಿ ಹೊತ್ತಿಕೊಂಡೂ ಉರಿದ ಘಟನೆಗಳಾಗಿತ್ತು. ಆದ್ರೆ ಇತ್ತೀಚೆಗೆ ಇಲ್ಲಿ...

Post
ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಶಿರಸಿಗೆ ಎತ್ತಂಗಡಿ..!

ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಶಿರಸಿಗೆ ಎತ್ತಂಗಡಿ..!

ಮುಂಡಗೋಡ: ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಎತ್ತಂಗಡಿಯಾಗಿದ್ದಾರೆ. ಶಿರಸಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಮದ್ಯಾಹ್ನವೇ ಸರ್ಕಾದಿಂದ ಆದೇಶ ಹೊರಬಿದ್ದಿದ್ದು ರಾಜ್ಯದಲ್ಲಿ ಒಟ್ಟೂ ಐವರು ತಹಶೀಲ್ದಾರರಿಗೆ ವರ್ಗಾವಣೆಯಾಗಿದೆ‌. ಈ ಮೂಲಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದುಕೊಂಡಿರೋ ಆರೋಪಕ್ಕೆ ಗುರಿಯಾಗಿದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವರ್ಗಾವಣೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಗಳು ತಹಶೀಲ್ದಾರ್ ಕಾರ್ಯಾಲಯದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದವು. ಇದನ್ನೇಲ್ಲ‌ ಮನಗಂಡ ಸರ್ಕಾರ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರನ್ನು...

error: Content is protected !!