ಮುಂಡಗೋಡ: ತಾಲೂಕಿನಾಧ್ಯಂತ ಕಳೆದ ಮೂರು ದಿನಗಳಿಂದ ಬಿಟ್ಟೂ ಬಿಡದೇ ಸುರಿಯುತ್ತಿರೋ ಮಳೆಗೆ ತಾಲೂಕಿನ ಜನ ಹೈರಾಣಾಗಿದ್ದಾರೆ. ಹಗಲೂ ರಾತ್ರಿ ಸುರಿದ ಸತತ ಮಳೆಯಿಂದ ಅನ್ನದಾತನ ಬದುಕೆ ಅತಂತ್ರವಾಗಿದೆ. ಹಲವು ಕಡೆ ಮನೆಗಳು ಕುಸಿದು ಬಿದ್ದಿವೆ. ಬೆಳೆ ಹಾನಿಯಾಗಿದೆ. ಹಾಗಿದ್ರೆ ಎಲ್ಲೇಲ್ಲಿ ಏನೇನು ಹಾನಿಯಾಗಿದೆ..? ಇಲ್ಲಿದೆ ರಿಪೋರ್ಟ್

ಬಸಾಪುರದಲ್ಲಿ ಮನೆ ಕುಸಿತ..!
ತಾಲೂಕಿನ ನಂದಿಕಟ್ಟಾ ಗ್ರಾಮ ಪಂಚಾಯತಿ
ವ್ಯಾಪ್ತಿಯ ಬಸಾಪುರದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಗೆ ಮನೆ ಕುಸಿದು ಬಿದ್ದಿದೆ. ಇಲ್ಲಿನ ಕಲ್ಲಯ್ಯ ಕರ್ಪೂರಮಠ್ ಎಂಬುವವರ ಮನೆ ಸಂಪೂರ್ಣ ಬಿದ್ದಿದೆ. ಆದ್ರೆ ಸಂಬಂಧಪಟ್ಟ ಅಧಿಕಾರಿಗಳು ಇದುವರೆಗೂ ಈ ಕಡೆ ಗಮನ ಹರಿಸಿಲ್ಲ ಅಂತಿದಾರೆ ಕುಟುಂಬಸ್ಥರು. ಹೀಗಾಗಿ, ಸಂಬಂಧ ಪಟ್ಟ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಬೇಕಿದೆ.

ಕಬ್ಬು ಬೆಳೆಗೆ ಆತಂಕ..!
ಮುಂಡಗೋಡ ತಾಲೂಕಿನಾದ್ಯಂತ ಕಳೆದ ಮೂರು ದಿನಗಳಿಂದ ಸುರಿಯುತ್ತಿರೋ ಭಾರೀ ಮಳೆಗೆ ತಾಲೂಕಿನ ಅನ್ನದಾತ ಅಕ್ಷರಶಃ ಆತಂಕದಲ್ಲಿದ್ದಾನೆ. ತಾಲೂಕಿನ ಕಬ್ಬು ಬೆಳೆಗಾರರಿಗೆ ಮಳೆಯ ಕಾರಣಕ್ಕೆ ಭಾರಿ ಆತಂಕ ಶುರುವಾಗಿದೆ. ಮಳೆಯ ನೀರು ಸಂಪೂರ್ಣವಾಗಿ ಕಬ್ಬಿನ ಗದ್ದೆಯಲ್ಲಿ ನಿ‌ಂತು ಕಬ್ಬಿನ ಬೆಳೆಗೆ ಹಾನಿಯಾಗುತ್ತಿದೆ‌ ಹೀಗಾಗಿ ನಿಲ್ಲದ ಮಳೆಯ ಅರ್ಭಟದಿಂದಾಗಿ ರೈತರು ಕಂಗಾಲಾಗಿದ್ದಾರೆ. ಕಬ್ಬಿನ ಗದ್ದೆಯಲ್ಲಿ ಹೊಕ್ಕಿರೋ ನೀರು ಹೊರಹಾಕಲು ಹರಸಾಹಸ ಪಡ್ತಿದಾರೆ..

ಕುಸಿದು ಬಿದ್ದ ದನದ ಕೊಟ್ಟಿಗೆ..!
ತಾಲೂಕಿನ ಹಿರೇಹಳ್ಳಿಯಲ್ಲಿ ಅಬ್ದುಲ್ ಚಿಕ್ಕೇರಿ ಎಂಬುವವರ ದನದ ಕೊಟ್ಟಿಗೆಗೆ ಹಾನಿಯಾಗಿದೆ, ತೀವ್ರ ಮಳೆಯಿಂದ ದನದ ಕೊಟ್ಟಿಗೆ ಕುಸಿದು ಬಿದ್ದಿದೆ‌ ಅದೃಷ್ಟವಶಾತ್ ಯಾವುದೇ ಪ್ರಣಾಪಾಯವಾಗಿಲ್ಲ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಕೊಳೆಯುತ್ತಿದೆ ಗೋವಿನ ಜೋಳ..!
ಇನ್ನು, ತಾಲೂಕಿನಲ್ಲಿ ಬೇಸಿಗೆ ಹಂಗಾಮಿನಲ್ಲಿ ಬೆಳೆಯಲಾಗಿದ್ದ ಗೋವಿನ ಜೋಳ ಸಂಪೂರ್ಣ ಹಾಳಾಗುತ್ತಿದೆ. ತೆನೆ ಕಿತ್ತು ರಾಶಿ ಮಾಡಿರೋ ಬಹುತೇಕ ರೈತರಿಗೆ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಎಲ್ಲೆಂದರಲ್ಲಿ ರಸ್ತೆಯ ಮೇಲೆ ಗೋವಿನಜೋಳದ ರಾಶಿಯನ್ನು ಮಾಡಿರೋ ರೈತರಿಗೆ ಭಾರೀ ಮಳೆ ಇನ್ನಿಲ್ಲದ ಸಂಕಷ್ಟ ತಂದೊಡ್ಡಿದೆ.

ಮಳೆಯ ನೀರಲ್ಲಿ ಸಿಲುಕಿಕೊಂಡಿರೋ ಗೋವಿನ ಜೋಳದ ರಾಶಿಗಳು ಗಬ್ಬೆದ್ದು ನಾರುತ್ತಿವೆ. ಕೆಲವು ಕಡೆ ಮೊಳಕೆಯೊಡೆದು ಹಾಳಾಗಿದೆ. ಹೀಗಾಗಿ ರೈತ ಹೇಗಾದ್ರೂ ಸರಿ ಗೋವಿನಜೋಳ ಮಾರಾಟ ಮಾಡಬೇಕು ಅಂತಾ ಚೀಲ ತುಂಬಿ ಇಡುವ ಕಾರ್ಯ ಮಾಡುತ್ತಿದ್ದಾನೆ.

ಒಟ್ನಲ್ಲಿ ಸತತ ಮಳೆಯಿಂದ ತಾಲೂಕಿನಾಧ್ಯಂತ ಜನಜೀವನಕ್ಕೆ ಅಡಚಣೆ ತಂದಿಟ್ಟಿದೆ. ಜೊತೆಗೆ, ಕೆಲವೆಡೆ ಅನ್ನದಾತನ ಬದುಕನ್ನೇ ಕಿತ್ತುಕೊಂಡಿದೆ. ಹೀಗಾಗಿ, ತಾಲೂಕಾಡಳಿತ ಆಗಿರೋ ಹಾನಿಯ ಕುರಿತು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕಿದೆ.

error: Content is protected !!