ಮುಂಡಗೋಡ: ತಾಲೂಕಿನ ಸಾಲಗಾಂವ್ ಗ್ರಾಮದಲ್ಲಿ ಸತತ ಸುರಿಯುತ್ತಿರೋ ಮಳೆಯ ಕಾರಣಕ್ಕೆ ರೈತನೋರ್ವ ಭತ್ತ ಕಟಾವು ಮಾಡಿ ಇಟ್ಟಿದ್ದ ಬಣಿವೆ ನೀರಲ್ಲಿ ಮುಳುಗಿದೆ.
ಗ್ರಾಮದ ಸರ್ವೆ ನಂ.212 ರಲ್ಲಿ ಸರ್ಕಾರಿ ಕೆರೆಯಲ್ಲಿ ಬಡ ರೈತ ಮಂಜುನಾಥ್ ಬಸವಣ್ಣೆಪ್ಪ ಮೂಲಿಮನಿ, ಭತ್ತದ ಬಣಿವೆ ಒಕ್ಕಿದ್ದ. ತನ್ನ ಗದ್ದೆಯಲ್ಲಿ ಜಾಗ ಇಲ್ಲದ ಸಲುವಾಗಿ ಖಾಲಿಯಾಗಿದ್ದ ಕೆರೆಯಲ್ಲಿ ಭತ್ತದ ಬಣಿವೆ ಒಕ್ಕಿದ್ದ ಹೀಗಾಗಿ, ಕಳೆದ ನಾಲ್ಕೈದು ದಿನದಿಂದ ಸುರಿಯುತ್ತಿರೋ ಭಾರಿ ಮಳೆಯಿಂದ ಕೆರೆ ತುಂಬಿ ಭತ್ತದ ಬಣಿವೆ ನೀರಲ್ಲಿ ಮುಳುಗಿ ಸಂಪೂರ್ಣ ನಾಶವಾಗಿದೆ. ತಹಶೀಲ್ದಾರ್ ಕಾರ್ಯಾಲಯದ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಾಟಿ ಭತ್ತಕ್ಕೆ ಹಾನಿ..!
ಇನ್ನು ಇದೇ ಗ್ರಾಮದ ರೈತ ಪುಟ್ಟಪ್ಪ ದೇವೇಂದ್ರಪ್ಪ ಗುಲ್ಯಾನವರ ಎಂಬುವವರ ಒಂದು ಎಕರೆ ನಾಟಿ ಭತ್ತದ ಗದ್ದೆಗೆ ಮಳೆ ನೀರು ನುಗ್ಗಿ ಹಾನಿಯಾಗಿದೆ. ತಹಶೀಲ್ದಾರ್ ಕಚೇರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.