ಶಿರಸಿ: ಆಧ್ಯಾತ್ಮ ಸಾಧನೆಯ ಜೊತೆಗೆ ಸಮಾಜಮುಖಿ ಮಠವಾಗಿಯೂ ಗುರುತಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನವು ಮಠದ ಸುತ್ತಲಿನ ಅಗತ್ಯವುಳ್ಳ ಜನರಿಗೆ ಉಚಿತವಾಗಿ ದಿನಸಿ ಸಾಮಗ್ರಿ ವಿತರಿಸಿತು. ಲಾಕ್ ಡೌನ್, ಕೋವಿಡ್ ಕಾರಣದಿಂದ ಬಡತನದಲ್ಲಿ ಇರೋ ಕುಟುಂಬಗಳಿಗೆ ಅಕ್ಕಿ, ಕಾಯಿ, ಬೆಲ್ಲ, ಬೇಳೆ, ಶ್ರೀದೇವರ ಪ್ರಸಾದವನ್ನ ಕೂಡ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ವಿತರಿಸಿದರು. ಇದೇ ವೇಳೆ ಈ ಸಂದಿಗ್ದ ಕಾಲವನ್ನು ಒಟ್ಟಾಗಿ ಎದುರಿಸಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ ಧಾರಣೆ...
Top Stories
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಮುಂಡಗೋಡ ಪೊಲೀಸ್ರ ದಾಳಿ, ಇಸ್ಪೀಟು ಆಟ ಆಡುತ್ತಿದ್ದವರು ಅಂದರ್, 10 ಜನರಲ್ಲಿ 8 ಜನ ಪರಾರಿ..!
ಶುದ್ಧ ಕುಡಿಯುವ ನೀರಿನ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಎಚ್ಚರಿಕೆ ವಹಿಸಿ : ಈಶ್ವರ್ ಕಾಂದೂ
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪ್ರತಿಮೆ ಅನಾವರಣ..!
Category: ಉತ್ತರ ಕನ್ನಡ
ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿ ಭರಾಟೆ ಜೋರು..!
ಮುಂಡಗೋಡ- ಪಟ್ಟಣದಲ್ಲಿ ಇಂದಿನಿಂದ ವಾರದ 4 ದಿನಗಳ ಕಾಲ ಬೆಳಿಗ್ಗೆ 8 ಗಂಟೆಯಿಂದ ಮದ್ಯಾನ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಿರೋ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆಯಿಂದ ಪಟ್ಟಣಕ್ಕೆ ಬೆಳಗಿನಿಂದಲೇ ಜನ ಬಂದಿದ್ರು. ಅಗತ್ಯ ವಸ್ತುಗಳ ಖರೀಧಿಗೆ ಬಂದ ಜನ ಅಗತ್ಯ ವಸ್ತಗಳಿಗಾಗಿ ಮುಗಿಬೀಳುತ್ತಿರೊ ದೃಷ್ಯಗಳು ಸಾಮಾನ್ಯವಾಗಿತ್ತು. ಹೀಗಾಗಿ ಪೊಲೀಸ್ರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿದ್ರು. ಇನ್ನು ದಿನಸಿ ಅಂಗಡಿಗಳ ಮಾಲೀಕರಿಗೂ ಅಂಗಡಿಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್...
ಮುಂಡಗೋಡ ಪಟ್ಟಣದಲ್ಲಿ ಅನಗತ್ಯ ತಿರುಗಾಡುವವರ ವಿರುದ್ಧ ಪೊಲೀಸರ ಕಠಿಣ ಕ್ರಮ..!
ಮುಂಡಗೋಡ- ಪಟ್ಟಣದಲ್ಲಿ ಅನಗತ್ಯ ತಿರುಗಾಡುವ ವಾಹನ ಸವಾರರಿಗೆ ಪೊಲೀಸ್ರು ಬಿಸಿ ಮುಟ್ಟಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆಗೆ ಇಳಿದಿರೋ ಪೊಲೀಸ್ರು ಅನಗತ್ಯವಾಗಿ ತಿರುಗಾಡುವ ವಾಹನಗಳ ಬಗ್ಗೆ ಕಣ್ಣಿಟ್ಟಿದ್ರು. ಬೈಕ್ ಸವಾರರು, ಕಾರ್ ಸವಾರರು ಪಟ್ಟಣದ ಒಳಗೆ ಅಥವಾ ಪಟ್ಟಣದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಂತವರನ್ನು ಪೊಲೀಸರು ಪರಿಶೀಲಿಸುತ್ತಿದ್ದರು. ಇನ್ನು ಮಾಸ್ಕ್ ಧರರಿಸದೇ ತಿರುಗಾಡುವ ಸವಾರರ ವಿರುದ್ಧ ಸಮರ ಸಾರಿರೋ ಪೊಲೀಸ್ರು, ಮಾಸ್ಕ್ ಧರಿಸದವರನ್ನು ತಡೆದು ಕ್ಲಾಸ್ ತೆಗೆದುಕೊಂಡರು, ಅಲ್ದೆ ದಂಡ ಹಾಕುವ ಮೂಲಕ ಬಿಸಿ...
ಮುಂಡಗೋಡದ ಶಿವಾಜಿ ಸರ್ಕಲ್ ನಲ್ಲಿ ಜನವೋ ಜನ..! ಸಾಮಾಜಿಕ ಅಂತರ ಮಾಯ..!!
ಮುಂಡಗೋಡ- ಪಟ್ಟಣದಲ್ಲಿ ಇಂದು ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿರೋ ಹಿನ್ನೆಲೆಯಲ್ಲಿ, ಮುಂಡಗೋಡ ಪಟ್ಟಣದ ಹೃದಯಭಾಗ ಶಿವಾಜಿ ಸರ್ಕಲ್ ನಲ್ಲಿ ಜನಸಂದಣಿ ಸೇರಿತ್ತು. ಅಗತ್ಯ ವಸ್ತುಗಳ ಖರೀಧಿಗೆ ತಾಲೂಕಿನ ಗ್ರಾಮೀಣ ಭಾಗಗಳಿಂದ ಬಂದಿದ್ದ ಜನ ಅಗತ್ಯ ವಸ್ತುಗಳ ಖರೀಧಿಯಲ್ಲಿ ಮುಳುಗಿದ್ರು. ಪಟ್ಟಣದ ಬಹುತೇಕ ದಿನಸಿ ಅಂಗಡಿಗಳು ಫುಲ್ ಆಗಿದ್ದವು. ಹೀಗಾಗಿ ಕೆಲವು ಕಡೆ ಸಾಮಾಜಿಕ ಅಂತರ ಅನ್ನೋದು ಮಂಗಮಾಯವಾಗಿತ್ತು. ಪೊಲೀಸರು ಎಷ್ಟೇ ಎಚ್ಚರಿಸಿದ್ರೂ ಜನ ಕ್ಯಾರೇ ಅನ್ನದೇ ಸಾಮಾಜಿಕ ಅಂತರ ಮರೆತು ಖರೀಧಿಯಲ್ಲಿ ಬ್ಯುಸಿಯಾಗಿದ್ರು.
LVK ಯಿಂದ ಆಶಾ ಕಾರ್ಯಕರ್ತೆಯರಿಗೆ ಆರೋಗ್ಯ ರಕ್ಷಕ ಕಿಟ್, ದಿನಸಿ ಕಿಟ್ ವಿತರಣೆ..!
ಮುಂಡಗೋಡ- ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ LVK ಮುಂಡಗೋಡ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸ್ಯಾನಿಟೈಸ್, ಮಾಸ್ಕ್ ಸೇರಿ ಆರೋಗ್ಯ ರಕ್ಷಕ ಕಿಟ್ ವಿತರಣೆ ಮಾಡಲಾಯಿತು. ಹಾಗೇ ಆಶಾ ಕರ್ಯಕರ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು. ಮುಂಡಗೋಡ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ಮಾಡುತ್ತಿರೋ LVK ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇಂತಹದ್ದೊಂದು ಸೇವೆ ಮಾಡುತ್ತಿದೆ. ಇನ್ನು ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಸ್.ವಿ. ಸುಳ್ಳದ, LVK ಸಂಚಾಲಕರು, ಆರೋಗ್ಯ ಸಿಬ್ಬಂದಿಗಳು...
ಮುಂಡಗೋಡ ತಾಲೂಕಿನಲ್ಲಿಂದು 53 ಕೊರೋನಾ ಪಾಸಿಟಿವ್, 18 ಗುಣಮುಖ, ಓರ್ವ ಸಾವು..!
ಮುಂಡಗೋಡ ತಾಲೂಕಿನಲ್ಲಿ ಇಂದು 53 ಜನರಲ್ಲಿ ಕೊರೋನಾ ಸೋಂಕು ದೃಢಪಟ್ಟಿದೆ. ಒಟ್ಟೂ 18 ಜನ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಶ್ಚಾರ್ಜ್ ಆಗಿದ್ದಾರೆ, ಹಾಗೇ 68 ವರ್ಷದ ಇಂದೂರಿನ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಅಂತಾ ತಾಲೂಕಾ ಆಡಳಿತ ವೈದ್ಯಾಧಿಕಾರಿ ಡಾ.ಎಚ್.ಎಫ್ ಇಂಗಳೆ ಮಾಹಿತಿ ನೀಡಿದ್ದಾರೆ. ಇನ್ನು ಕೋವಿಡ್ ಸೋಂಕಿನಿಂದ ಗುಣಮುಖರಾಗಿ ಡಿಶ್ಚಾರ್ಜ್ ಆದವರಿಗೆ ಕೋವಿಡ್ ಕೇರ್ ಸೆಂಟರ್ ನ ವೈದ್ಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಶುಭ ಹಾರೈಸಿ ಬಿಳ್ಕೊಟ್ಟರು..
ಅಕ್ರಮ ಮದ್ಯ ಕುಡಿಯಲು ಅವಕಾಶ, ಚಹಾ ಅಂಗಡಿ ಮಾಲೀಕನ ವಿರುದ್ಧ ಪ್ರಕರಣ..!
ಮುಂಡಗೋಡ ತಾಲೂಕಿನ ಬಾಚಣಕಿ ಬಳಿ ನ್ಯಾಸರ್ಗಿ ಕ್ರಾಸ್ ನಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡಿ, ತನ್ನ ಅಂಗಡಿಯಲ್ಲೆ ಮದ್ಯ ಕುಡಿಯಲು ಅನುವು ಮಾಡಿಕೊಟ್ಟು ಕೋವಿಡ್ ಲಾಕ್ ಡೌನ್ ನಿಯಮ ಉಲ್ಲಂಘಿಸಿದ ಕಾರಣಕ್ಕೆ ವ್ಯಕ್ತಿಯೋರ್ವನ ಮೇಲೆ ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಾಚಣಕಿ ಗ್ರಾಮದ ನಾಗರಾಜ್ ದೊಡ್ಡ ಹನ್ಮಂತಪ್ಪ ವಡ್ಡರ ಎಂಬುವವನೇ ಆರೋಪಿಯಾಗಿದ್ದಾನೆ.. ಈತ ತನ್ನ ಚಹಾ ಅಂಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ, ಅಲ್ಲದೇ ಅಲ್ಲಿಯೇ ಮಧ್ಯ ಕುಡಿಯಲು ಜನರಿಗೆ ಅವಕಾಶ ನೀಡುತ್ತಿದ್ದ. ಹೀಗಾಗಿ ಮುಂಡಗೋಡ ಕ್ರೈಂ ಪಿಎಸ್...
ಮೃತಪಟ್ಟ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಫರ್ಧಾ ಹೋರಿ..!
ಮುಂಡಗೋಡ-ತಾಲೂಕಿನ ಹೆಮ್ಮೆಯ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಅನಾರೋಗ್ಯದ ಹಿನ್ನೆಲೆ ನಿನ್ನೆ ತಡರಾತ್ರಿ ಮೃತಪಟ್ಟಿದೆ. ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಎಂದೇ ಖ್ಯಾತಿಯಾಗಿರುವ ಹೋರಿ, ತೀವ್ರ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆದಿದ್ದ ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿತ್ತು. ಅದ್ರಲ್ಲೂ ಹಾನಗಲ್, ಬೆಟ್ಟದಕುರ್ಲಿ ಹಾಗೂ ಖಚವಿ ಹೀಗೆ ಅನೇಕ ಗ್ರಾಮಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಭಾರೀ ಬಹುಮಾನಗಳನ್ನು ಬಾಚಿ ಕೊಂಡಿತ್ತು.....
ಮುಂಡಗೋಡ ಪಿಡ್ಬ್ಲೂಡಿ ಇಂಜಿನೀಯರ್ ಸುಭಾಸ್ ವಡ್ಡತ್ತಿ ನಿಧನ..!
ಮುಂಡಗೋಡ- ಲೋಕೊಪಯೋಗಿ ಇಲಾಖೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸುತ್ತಿದ್ದ ಸುಭಾಸ್ ವಡ್ಡತ್ತಿ ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವ್ರು ಇಂದು ಕೊನೆಯುಸಿರೆಳೆದಿದ್ದಾರೆ. ಮೃತರ ಅಂತ್ಯಕ್ರಿಯೆ ನಾಳೆ ರವಿವಾರ ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಮೃತರ ಸ್ವಗ್ರಾಮದಲ್ಲಿ ನಡೆಯಲಿದೆ ಅಂತಾ ಕುಟುಂಬ ಮೂಲಗಳು ತಿಳಿಸಿವೆ. ಇನ್ನು, ಸುಭಾಸ್ ವಡ್ಡತ್ತಿ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.
ಮುಂಡಗೋಡ ತಾಲೂಕಿನಲ್ಲಿ ಝಂಡೂ ಮೆಣಸಿನಕಾಯಿ ಬೆಳೆದ ರೈತರಿಗೆ ಸಂಕಷ್ಟ..!
ಮುಂಡಗೋಡ-ತಾಲೂಕಿನಲ್ಲಿ ಲಾಕ್ ಡೌನ್ ತಂದಿರೋ ಸಂಕಷ್ಟ ಒಂದಾ ಎರಡಾ.. ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಗೋಳು ಒಂದೆಡೆಯಾದ್ರೆ, ಕೃಷಿಯನ್ನೇ ನಂಬಿ ಬದುಕುತ್ತಿರೊ ರೈತರ ಗೋಳು ಮತ್ತೊಂದೆಡೆಯಾಗಿದೆ. ಹೌದು, ಮುಂಡಗೋಡ ತಾಲೂಕಿನಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಲಾಗಿರೊ ಝಂಡೂ ಮೆಣಸಿನಕಾಯಿ ಬರಪೂರ ಬೆಳೆದಿದ್ದರೂ ಸೂಕ್ತ ಬೆಲೆ ಸಿಗದೆ ರೈತನ ಕನಸಿಗೆ ಕೊಳ್ಳೆ ಇಟ್ಟಿದೆ. ಲಾಕ್ ಡೌನ್ ಆಗುವ ಮುನ್ನ ಪ್ರತೀ ಕ್ವಿಂಟಲ್ ಗೆ 4 ಸಾವಿರದ ವರೆಗೂ ಇದ್ದ ಝಂಡೂ ಮೆಣಸಿನಕಾಯಿ ಬೆಲೆ, ಈಗ 2 ಸಾವಿರ ರೂ. ಆಸುಪಾಸಿಗೆ...