ಮುಂಡಗೋಡ- ತಾಲೂಕಿನ ಹುನಗುಂದ ಪ್ರಾಥಮಿಕ ಆರೋಗ್ಯ ಕೇಂದ್ರದ ಮೂಲಕ LVK ಮುಂಡಗೋಡ ವತಿಯಿಂದ ಆಶಾ ಕರ್ಯಕರ್ತೆಯರಿಗೆ ಸ್ಯಾನಿಟೈಸ್, ಮಾಸ್ಕ್ ಸೇರಿ ಆರೋಗ್ಯ ರಕ್ಷಕ ಕಿಟ್ ವಿತರಣೆ ಮಾಡಲಾಯಿತು.

ಹಾಗೇ ಆಶಾ ಕರ್ಯಕರ್ತರಿಗೆ ದಿನಸಿ ಸಾಮಗ್ರಿಗಳ ಕಿಟ್ ನೀಡಲಾಯಿತು. ಮುಂಡಗೋಡ ತಾಲೂಕಿನಲ್ಲಿ ಸಾಮಾಜಿಕ ಜವಾಬ್ದಾರಿಯ ಕಾರ್ಯಗಳನ್ನು ಮಾಡುತ್ತಿರೋ LVK ತಾಲೂಕಿನ ಬಹುತೇಕ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೂ ಇಂತಹದ್ದೊಂದು ಸೇವೆ ಮಾಡುತ್ತಿದೆ.

ಇನ್ನು ಈ ವೇಳೆ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ ಡಾ.ಎಸ್‌.ವಿ‌. ಸುಳ್ಳದ, LVK ಸಂಚಾಲಕರು, ಆರೋಗ್ಯ ಸಿಬ್ಬಂದಿಗಳು ಹಾಜರಿದ್ದರು‌.

error: Content is protected !!