ಮುಂಡಗೋಡ- ಪಟ್ಟಣದಲ್ಲಿ ಇಂದಿನಿಂದ ವಾರದ 4 ದಿನಗಳ ಕಾಲ ಬೆಳಿಗ್ಗೆ 8 ಗಂಟೆಯಿಂದ ಮದ್ಯಾನ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಿರೋ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆಯಿಂದ ಪಟ್ಟಣಕ್ಕೆ ಬೆಳಗಿನಿಂದಲೇ ಜನ ಬಂದಿದ್ರು.
ಅಗತ್ಯ ವಸ್ತುಗಳ ಖರೀಧಿಗೆ ಬಂದ ಜನ ಅಗತ್ಯ ವಸ್ತಗಳಿಗಾಗಿ ಮುಗಿಬೀಳುತ್ತಿರೊ ದೃಷ್ಯಗಳು ಸಾಮಾನ್ಯವಾಗಿತ್ತು. ಹೀಗಾಗಿ ಪೊಲೀಸ್ರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿದ್ರು.
ಇನ್ನು ದಿನಸಿ ಅಂಗಡಿಗಳ ಮಾಲೀಕರಿಗೂ ಅಂಗಡಿಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಸುವಂತೆ ಸೂಚಿಸಲು ಎಚ್ಚರಿಸಿದ್ರು.