ಮುಂಡಗೋಡ-ತಾಲೂಕಿನ ಹೆಮ್ಮೆಯ ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಅನಾರೋಗ್ಯದ ಹಿನ್ನೆಲೆ ನಿನ್ನೆ ತಡರಾತ್ರಿ ಮೃತಪಟ್ಟಿದೆ.
ಮುಂಡಗೋಡ ಕಾ ಮಹಾರಾಜ್ 181 ಪೀ ಪೀ ಸ್ಪರ್ಧಾ ಹೋರಿ ಎಂದೇ ಖ್ಯಾತಿಯಾಗಿರುವ ಹೋರಿ, ತೀವ್ರ ಅನಾರೋಗ್ಯದಿಂದ ಬಳಲಿ ಮೃತಪಟ್ಟಿದೆ. ರಾಜ್ಯದ ನಾನಾ ಭಾಗಗಳಲ್ಲಿ ನಡೆದಿದ್ದ
ಅನೇಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿತ್ತು. ಅದ್ರಲ್ಲೂ ಹಾನಗಲ್, ಬೆಟ್ಟದಕುರ್ಲಿ ಹಾಗೂ ಖಚವಿ ಹೀಗೆ ಅನೇಕ ಗ್ರಾಮಗಳಲ್ಲಿ ನಡೆದ ಹೋರಿ ಬೆದರಿಸುವ ಸ್ಪರ್ಧೆ ಯಲ್ಲಿ ಪಾಲ್ಗೊಂಡು ಭಾರೀ ಬಹುಮಾನಗಳನ್ನು ಬಾಚಿ ಕೊಂಡಿತ್ತು..
ಹೀಗೆ ಅನೇಕ ಜನರ ಮನಸ್ಸನ್ನು ಗೆದ್ದು ತನ್ನದೇ ಆದ ಅಭಿಮಾನಿ ಬಳಗ ಹೊಂದಿದ್ದ ತಾಲೂಕಿನ ಮೊಟ್ಟ ಮೊದಲ ಪೀ ಪೀ ಹೋರಿ ಎಂದು ಖ್ಯಾತಿ ಪಡೆದಿತ್ತು. ಹೀಗಾಗಿ ಅಪಾರ ಅಭಿಮಾನಗಳು ಹೋರಿಯ ನಿಧನದಕ್ಕೆ ಕಂಬನಿ ಮಿಡಿದಿದ್ದಾರೆ.