ಶಿರಸಿ: ಆಧ್ಯಾತ್ಮ ಸಾಧನೆಯ ಜೊತೆಗೆ ಸಮಾಜಮುಖಿ ಮಠವಾಗಿಯೂ ಗುರುತಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ‌ ಮಹಾ ಸಂಸ್ಥಾನವು ಮಠದ ಸುತ್ತಲಿನ ಅಗತ್ಯವುಳ್ಳ ಜನರಿಗೆ ಉಚಿತವಾಗಿ ದಿನಸಿ ಸಾಮಗ್ರಿ ವಿತರಿಸಿತು.

ಲಾಕ್ ಡೌನ್, ಕೋವಿಡ್ ಕಾರಣದಿಂದ ಬಡತನದಲ್ಲಿ ಇರೋ ಕುಟುಂಬಗಳಿಗೆ ಅಕ್ಕಿ, ಕಾಯಿ, ಬೆಲ್ಲ, ಬೇಳೆ, ಶ್ರೀದೇವರ ಪ್ರಸಾದವನ್ನ ಕೂಡ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ವಿತರಿಸಿದರು. ಇದೇ ವೇಳೆ ಈ ಸಂದಿಗ್ದ ಕಾಲವನ್ನು‌ ಒಟ್ಟಾಗಿ ಎದುರಿಸಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ ಧಾರಣೆ ಮಾಡಬೇಕು. ಆಂತರಿಕ ಧೈರ್ಯಕ್ಕಾಗಿ ದೇವರ ಜಪ ಧ್ಯಾನ ಮಾಡಬೇಕು ಅಂತ ಸ್ವಾಮೀಜಿ ಆಶಿಸಿದರು.

ಈ ವೇಳೆ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಸೋಂದಾ ಗ್ರಾ.ಪಂ.ಅಧ್ಯಕ್ಷೆ ಮಮತಾ ಜೈನ್, ಮಠದ ವ್ಯವಸ್ಥಾಪಕ ಎಸ್.ಎನ್. ಗಾಂವಕರ ಇತರರು ಇದ್ದರು.

error: Content is protected !!