ಮುಂಡಗೋಡ-ತಾಲೂಕಿನಲ್ಲಿ ಲಾಕ್ ಡೌನ್ ತಂದಿರೋ ಸಂಕಷ್ಟ ಒಂದಾ ಎರಡಾ.. ಬಡ ವ್ಯಾಪಾರಿಗಳು, ಕೂಲಿ ಕಾರ್ಮಿಕರ ಗೋಳು ಒಂದೆಡೆಯಾದ್ರೆ, ಕೃಷಿಯನ್ನೇ ನಂಬಿ ಬದುಕುತ್ತಿರೊ ರೈತರ ಗೋಳು ಮತ್ತೊಂದೆಡೆಯಾಗಿದೆ.
ಹೌದು, ಮುಂಡಗೋಡ ತಾಲೂಕಿನಲ್ಲಿ ಬೇಸಿಗೆ ಬೆಳೆಯಾಗಿ ಬೆಳೆಯಲಾಗಿರೊ ಝಂಡೂ ಮೆಣಸಿನಕಾಯಿ ಬರಪೂರ ಬೆಳೆದಿದ್ದರೂ ಸೂಕ್ತ ಬೆಲೆ ಸಿಗದೆ ರೈತನ ಕನಸಿಗೆ ಕೊಳ್ಳೆ ಇಟ್ಟಿದೆ.
ಲಾಕ್ ಡೌನ್ ಆಗುವ ಮುನ್ನ ಪ್ರತೀ ಕ್ವಿಂಟಲ್ ಗೆ 4 ಸಾವಿರದ ವರೆಗೂ ಇದ್ದ ಝಂಡೂ ಮೆಣಸಿನಕಾಯಿ ಬೆಲೆ, ಈಗ 2 ಸಾವಿರ ರೂ. ಆಸುಪಾಸಿಗೆ ಬಂದು ನಿಂತಿದೆ. ಹೀಗಾಗಿ, ಈ ಹಣ ಮೆಣಸಿನಕಾಯಿ ಕೀಳಲು ಕೂಲಿ ಕೊಡುವುದಕ್ಕೂ ಸಾಕಾಗುವುದಿಲ್ಲ ಅಂತಾ ರೈತರು ಅಳಲು ತೋಡಿಕೊಂಡಿದ್ದಾರೆ.