ಭಟ್ಕಳ-ಮುಂಬೈನಲ್ಲಿ ಬಂಧಿತನಾಗಿರೋ ಉಗ್ರನ ಜೊತೆ ನಂಟು ಹೊಂದಿರುವ ಆರೋಪದ ಮೇಲೆ ಭಟ್ಕಳದ ಮಹಿಳೆಯನ್ನ ಮುಂಬೈ ಎಟಿಎಸ್ ತಂಡ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಮಹಿಳೆಯ ಮನೆಯ ಮೇಲೆ ಬುಧವಾರ ರಾತ್ರಿ ದಾಳಿ ನಡೆಸಿದ ತಂಡ ಆಕೆಯನ್ನು ವಶಕ್ಕೆ ಪಡೆದು ಗುರುವಾರ ಭಟ್ಕಳದಲ್ಲಿಯೇ ವಿಚಾರಣೆ ನಡೆಸುತ್ತಿದೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮಹಿಳೆಯನ್ನು ಜಾಲಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಆಜಾದ್ ನಗರದ ನಿವಾಸಿ ಆಯಿಷಾ ಎಂದು ಗುರುತಿಸಲಾಗಿದೆ. ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು...
Top Stories
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ಸುಳ್ಳು ಸುಳ್ಳು ಮಾಹಿತಿ ನೀಡಿ “ಸ್ಲಂ” ಘೋಷಣೆ ಆರೋಪ, ಪ.ಪಂಚಾಯತಿ, ಸ್ಲಂ ಬೋರ್ಡ್ ವಿರುದ್ಧ ಇಂದು ಪ್ರತಿಭಟನೆ..!
ಓಣಿಕೇರಿಯಲ್ಲಿ ಶುಂಠಿ ಕೆಲಸಕ್ಕೆ ಬಂದಿದ್ದ ಇಬ್ಬರು ಕೂಲಿ ಕಾರ್ಮಿಕರಿಗೆ ವಿದ್ಯುತ್ ಆಘಾತ, ಓರ್ವ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ನಂದಿಕಟ್ಟಾದಲ್ಲಿ ಶ್ರೀರಾಮ ನವಮಿ ಸಿದ್ದತೆ, ಎಪ್ರಿಲ್ 6ರಂದು ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
Category: ಅಪರಾಧ ಜಗತ್ತು
ಹಾನಗಲ್ ಗ್ಯಾಂಗ್ ರೇಪ್ ಕೇಸ್, CPI ಶ್ರೀಧರ್ ಸಸ್ಪೆಂಡ್, ಕಾನಸ್ಟೇಬಲ್ ಕೂಡ ಅಮಾನತ್ತು..!
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನಲ್ಲಿ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾನಗಲ್ ಠಾಣೆಯ ಸಿಪಿಐ, ಹಾಗೂ ಕಾನಸ್ಟೇಬಲ್ ತಲೆದಂಡವಾಗಿದೆ. ಹಾನಗಲ್ ಠಾಣೆಯ ಸಿಪಿಐ ಶ್ರೀಧರ್ ಸಸ್ಪೆಂಡ್ ಆಗಿದ್ದಾರೆ. ಜೊತೆಗೆ ಕಾನಸ್ಟೇಬಲ್ SB ಡ್ಯೂಟಿಯ ಇಲಿಯಾಜ್ ಶೇತ್ ಸನದಿ ಕೂಡ ಅಮಾನತ್ತಾಗಿದ್ದಾರೆ. ಗ್ಯಾಂಗ್ ರೇಪ್ ಪ್ರಕರಣದ ಮಾಹಿತಿ ಸಂಗ್ರಹಿಸುವಲ್ಲಿ ವಿಫಲ ಹಾಗೂ FIR ದಾಖಲಿಸುವಲ್ಲಿ ಮತ್ತು ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಭ ಹಿನ್ನೆಲೆಯಲ್ಲಿ ಇಬ್ಬರನ್ನೂ ಅಮಾನತುಗೊಳಿಸಿ ಹಾವೇರಿ ಎಸ್ಪಿ ಆದೇಶಿಸಿದ್ದಾರೆ.
ಸಾಲಗಾಂವ್ ಬಾಣಂತಿದೇವಿ ಜಾತ್ರೆಯಲ್ಲಿ “ಕಲರ್ ಕಲರ್ ಬಾಲ್” ದಂಧೆಯದ್ದೇ ಕಾರುಬಾರು.. ಸಿಂಗಂ ಸಾಹೇಬ್ರೇ ಗಮನಿಸಿ..!
ಮುಂಡಗೋಡ ತಾಲೂಕಿನ ಸಾಲಗಾಂವ್ ಬಾಣಂತಿದೇವಿ ಜಾತ್ರೆ ವಿದ್ಯುಕ್ತ ಚಾಲನೆ ಪಡೆದುಕೊಂಡಿದೆ. ಇವತ್ತಿಂದ ಮೂರು ದಿನ ಜಾತ್ರೆಯ ಸದ್ದು ಗದ್ದಲ ಇದ್ದೇ ಇರತ್ತೆ. ಅದ್ರ ಜೊತೆ ಜಾತ್ರೆಯ ಅಂಗಳದಲ್ಲಿ ಅನಧಿಕೃತವಾಗಿ ನಡೆಯುವ ಅಡ್ಡ ದಂಧೆಗಳೂ ಕೂಡ ಹುಟ್ಟಿಕೊಂಡು ಜಾತ್ರೆಗೆ ಬರುವ ಸಭ್ಯಸ್ಥರಿಗೆ ಮಾರಕವಾಗ್ತಿವೆ. ಬಹುಶಃ ಖಾಕಿ ಪಡೆಗೆ ಇದೇಲ್ಲ ಗೊತ್ತಿದೆಯೋ ಇಲ್ವೊ ನಮಗಂತೂ ಗೊತ್ತಿಲ್ಲ. ಆದ್ರೆ, ಜಾತ್ರೆಗೆ ಹೋದ ಅನೇಕ ಜನ ಸಭ್ಯಸ್ಥರು ಅಲ್ಲಿನ “ಅಂಧಾ” ಗೇಮ್ ನೋಡಿ ವಿಡಿಯೋ ಕಳಿಹಿಸಿ “ಪಬ್ಲಿಕ್ ಫಸ್ಟ್” ಗೆ ಮಾಹಿತಿ...
ಅನಧೀಕೃತ ಇಟ್ಟಿಗೆ ಭಟ್ಟಿಯ ನೀರಿನ ತೊಟ್ಟಿಗೆ ಬಿದ್ದು ಬಲಿಯಾಯ್ತು ಮೂರು ವರ್ಷದ ಪುಟ್ಟ ಕಂದಮ್ಮ..!
ಮುಂಡಗೋಡ ತಾಲೂಕಿನಲ್ಲಿ ಅನಧೀಕೃತ ಇಟ್ಟಿಗೆ ಭಟ್ಟಿಗಳ ಹಾವಳಿಗೆ ಕಡಿವಾಣ ಹಾಕ್ತಿನಿ ಅಂತ ಜಿದ್ದಿಗೆ ಬಿದ್ದಿದ್ದ ಮಾನ್ಯ ತಹಶೀಲ್ದಾರ್ ಸಾಹೇಬ್ರು ಅದ್ಯಾಕೋ ಏನೋ ಗಪ್ ಚುಪ್ ಆಗಿದ್ದಾರೆ. ಹೀಗಾಗಿನೇ ಮುಂಡಗೋಡ ತಾಲೂಕಿನಲ್ಲಿ ಸದ್ಯ ಮತ್ತದೇ ಅನಧೀಕೃತ ಇಟ್ಟಿಗೆ ಭಟ್ಟಿಗಳ ಭರಪೂರ ದಂಧೆ ಶುರುವಾಗಿದೆ. ಹೆಜ್ಜೆಗೊಂದರಂತೆ ಭಟ್ಟಿಗಳು ಜನ್ಮತಾಳುತ್ತಿವೆ. ಅದ್ರ ಜೊತೆ ನಡೆಯಬಾರದ ಬಹುದೊಡ್ಡ ದುರಂತವೊಂದು ಲಕ್ಕೊಳ್ಳಿಯ ಅನಧೀಕೃತ ಇಟ್ಟಿಗೆ ಭಟ್ಟಿಯಲ್ಲಿ ನಡೆದು ಹೋಗಿದೆ. ಇಂತದ್ದೇ ಇಟ್ಟಿಗೆ ಭಟ್ಟಿಯೊಂದರಲ್ಲಿ ಕಾರ್ಮಿಕರ ಪುಟ್ಟ ಮಗು ಅಮಾನುಷವಾಗಿ ಬಲಿಯಾಗಿದೆ. ಅದು ಮೂರು...
ಇಂದೂರಿನ ವ್ಯಕ್ತಿಯಿಂದ ನಿವೇಶನ ಸಕ್ರಮ ಹೆಸರಲ್ಲಿ ಅಕ್ರಮ..! ತಹಶೀಲ್ದಾರ್ ಹೆಸರು ಬಳಸಿ ದಂಧೆ ಆರೋಪ..!!
ಮುಂಡಗೋಡ ತಾಲೂಕಿನ ಇಂದೂರಿನ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರಲ್ಲಿ ಹಣ ವಸೂಲಿ ದಂಧೆ ಶುರುವಿಟ್ಟಿದ್ದಾನೆ ಆತನಿಂದ ಸಾರ್ವಜನಿಕರು ಎಚ್ಚರದಿಂದ ಇರಿ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಎಚ್ಚರಿಸಿದ್ದಾರೆ. ಇಂದೂರು ಗ್ರಾಮದ ಹಜರತ್ ಅಲಿ ಬಾಷಾಸಾಬ ಜಾತಗಾರ, ಎಂಬುವವನೇ ಸದ್ಯ ವಂಚಿಸಿರೋ ಆರೋಪ ಹೊತ್ತಿದ್ದು. ಇಂದೂರ ಗ್ರಾಮದ ಮನೆಗಳ ನಿವೇಶನ ಸಕ್ರಮ ಮಾಡುವ ಕುರಿತಾಗಿ 4 ಜನ ಸಾರ್ವಜನಿಕರಿಂದ ತಲಾಟಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ಹೆಸರು ದುರುಪಯೋಗ ಮಾಡಿ, ಸುಳ್ಳು ಹೇಳಿ, ಹಣ ವಸೂಲಿ ಮಾಡಿದ್ದಾನೆ ಅಂತಾ ಖುದ್ದು...
ಮುಂಡಗೋಡಿನಲ್ಲಿ ಶ್ರೀಗಂಧ ಕಳ್ಳತನ ಮಾಡಿದ್ದ ಖತರ್ನಾಕ ಗ್ಯಾಂಗ್ ಆರೆಸ್ಟ್..!
ಮುಂಡಗೋಡ ಹಾಗೂ ಮಂಚಿಕೇರಿ ಅರಣ್ಯ ಅಧಿಕಾರಿಗಳ ಬ್ರಿಲ್ಲಿಯಂಟ್ ಕಾರ್ಯಾಚರಣೆ ಸಕ್ಸೆಸ್ ಆಗಿದೆ. ಪರಿಣಾಮ ಖತರ್ನಾಕ ಅರಣ್ಯ ರಾಬರಿ ಗ್ಯಾಂಗ್ ಅಂದರ್ ಆಗಿದೆ. ಅಕ್ಟೋಬರ್ 7 ರ ಆಸುಪಾಸಿನಲ್ಲಿ ಮುಂಡಗೋಡ ತಾಲೂಕಿನ ಹಲವು ಕಡೆ ನಡೆದಿದ್ದ ಶ್ರೀಗಂಧ ಮರ ಕಳ್ಳತನ ಕೇಸಿನಲ್ಲಿ ಬೇಕಾಗಿದ್ದ ಅರಣ್ಯ ಸ್ಮಗ್ಲಿಂಗ್ ಕ್ರಿಮಿಗಳನ್ನು ಬಹುತೇಕ ಅಂದರ್ ಮಾಡಲಾಗಿದೆ. ದೂರದ ಮದ್ಯ ಪ್ರದೇಶದಿಂದ ಬಂದು ಪಟ್ಟಣಗಳು, ಹಳ್ಳಿಗಳ ಹೊರಗೆ ಟೆಂಟ್ ಹಾಕಿ ಸಂಚು ರೂಪಿಸೋ ಭಯಾನಕ ಸ್ಮಗ್ಲಿಂಗ್ ಪಡೆಯನ್ನ ಮೊದಲ ಬಾರಿಗೆ ಹೆಡೆಮುರಿ ಕಟ್ಟಲಾಗಿದೆ. ಅಷ್ಟಕ್ಕೂ...
ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತ..! ಹೆಬ್ಬಾಳ್ಕರ್ ಸಹೋದರನ ಆಪ್ತರಿಂದಲೇ ನಡೀತಾ ಕೃತ್ಯ..?
ಬೆಳಗಾವಿಯಲ್ಲಿ ಬಿಜೆಪಿ ಮುಖಂಡನ ಮೇಲೆ ಚಾಕು ಇರಿತವಾಗಿದೆ. ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ (55) ಮೇಲೆ ಚಾಕು ಇರಿತವಾಗಿದೆ. ಬೆಳಗಾವಿ ಜಯ ನಗರದ ನಿವಾಸದ ಬಳಿಯಲ್ಲಿ ಘಟನೆ ನಡೆದಿದೆ. ಪೃಥ್ವಿ ಸಿಂಗ್ ಕೈ ಹಾಗೂ ಬೆನ್ನಿನ ಭಾಗದಲ್ಲಿ ತೀವ್ರ ಗಾಯವಾಗಿದೆ. ಬೆಳಗಾವಿ ಕೆಎಲ್ಇ ಆಸ್ಪತ್ರೆಗೆ ಪೃಥ್ವಿ ಸಿಂಗ್ ರನ್ನು ದಾಖಲಿಸಲಾಗಿದೆ. ಇನ್ನು ಕೆಎಲ್ಇ ಆಸ್ಪತ್ರೆಗೆ ಎಂಎಲ್ಸಿ ಚೆಲುವಾದಿ ನಾರಾಯಣಸ್ವಾಮಿ, ಕೇಶವ ಪ್ರಸಾದ್ ಭೇಟಿ ನೀಡಿದ್ದಾರೆ. ಪೃಥ್ವಿ ಸಿಂಗ್ ಮಾಜಿ ಸಚಿವ ರಮೇಶ್ ಜಾರಕೀಹೊಳಿ ಅತ್ಯಾಪ್ತರಾಗಿದ್ದಾರೆ....
ಸನವಳ್ಳಿಯಲ್ಲಿ ನೇಣಿಗೆ ಶರಣಾದ ಪಿಡಿಓ, ತನ್ನ ತೋಟದಲ್ಲೇ ಆತ್ಮಹತ್ಯೆ ಮಾಡಿಕೊಂಡ ನೌಕರ..!
ಮುಂಡಗೋಡ ತಾಲೂಕಿನ ಸನವಳ್ಳಿಯಲ್ಲಿ ಗ್ರಾಮ ಪಂಚಾಯತಿ ನೌಕರ (ಪ್ರಭಾರ ಪಿಡಿಓ) ನೇಣಿಗೆ ಶರಣಾಗಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಸೋಮವಾರ ಬೆಳ್ಳಂ ಬೆಳಿಗ್ಗೆ ತಮ್ಮದೇ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಅಂತಾ ಹೇಳಲಾಗ್ತಿದೆ. ಸನವಳ್ಳಿ ಗ್ರಾಮದ ರಾಮಲಿಂಗ ಶಿವಲಿಂಗಪ್ಪ ಕಳಸಗೇರಿ(39) ಎಂಬುವವರೇ ನೇಣಿಗೆ ಶರಣಾಗಿದ್ದಾರೆ. ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹೊನ್ನತ್ತಿ ಗ್ರಾಮ ಪಂಚಾಯತಿಯ ಪ್ರಭಾರ ಪಿಡಿಓ ಆಗಿ ಕಾರ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ರವಿವಾರ ರಜೆ ಇದ್ದ ಕಾರಣ ಸ್ವಗ್ರಾಮಕ್ಕೆ ಬಂದಿದ್ದರು. ಆದ್ರೆ, ಇಂದು ಏಕಾಏಕಿ ತೋಟದಲ್ಲೇ...
ಗೋಂಜ್ಯಾಳ ಬೆಳೆದ ರೈತನಿಗೆ ಮಹಾಮೋಸ, ಅರಶಿಣಗೇರಿಯಲ್ಲಿ ರೆಡ್ ಹ್ಯಾಂಡಾಗೇ ಹಿಡಿದ್ರು ರೈತರು..!
ಮುಂಡಗೋಡ ತಾಲೂಕಿನ ಅರಶಿಣಗೇರಿಯ ಗೋವಿನಜೋಳ ಬೆಳೆದ ರೈತರು ಭಾರೀ ಮೋಸಕ್ಕೆ ಬಲಿಯಾಗ್ತಿದಾರಾ..? ತೀವ್ರ ಬರದ ಮದ್ಯೆಯೂ ಸಾಲಸೋಲ ಮಾಡಿ ಗೋವಿನಜೋಳ ಬೆಳೆದ ರೈತನಿಗೆ ಸದ್ಯ ವ್ಯಾಪಾರದ ಹೆಸ್ರಲ್ಲಿ ಮೋಸ ಮಾಡ್ತಿದಾರೆ ಜನ. ಅರಶಿಣಗೇರಿಯಲ್ಲಿ ಇವತ್ತು ಅಂತಹ ಹಲಾಲುಕೋರ ವ್ಯಾಪಾರಿಗಳ ಏಜೆಂಟರುಗಳನ್ನು ರೈತರೇ ಹಿಡಿದು ಜಾಡಿಸಿದ್ದಾರೆ. ಅಂದಹಾಗೆ, ಬರೋಬ್ಬರಿ ಒಂಬತ್ತು ಜನ ದಂಧೆಕೋರರು ರೆಡ್ ಹ್ಯಾಂಡಾಗೇ ರೈತರಿಗೆ ಸಿಕ್ಕು, ಮೋಸ ಬಯಲಿಗೆ ಬರುತ್ತಿದ್ದಂತೆ ಪರಾರಿಯಾಗಿದ್ದಾರೆ. ಅಸಲು, ಇವ್ರೇಲ್ಲ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದವರಂತೆ…! ಅಂದಹಾಗೆ, ಭಾರಿ ವ್ಯವಸ್ಥಿತವಾಗಿ...
ಟಿಬೇಟಿಯನ್ ಕ್ಯಾಂಪ್ ನಂ.1 ಕ್ರಾಸ್ ಬಳಿ ಮೊಬೈಲ್ ಶಾಪ್ ಕಳ್ಳತನ, ಬೆಲೆ ಬಾಳುವ ಮೊಬೈಲ್ ಎಗರಿಸಿದ ಕಳ್ಳರು..!
ಮುಂಡಗೋಡ ಟಿಬೇಟಿಯನ್ ಕ್ಯಾಂಪ್ ನಂಬರ್ 1 ರ ಕ್ರಾಸ್ ಬಳಿ ಮೊಬೈಲ್ ಅಂಗಡಿ ಕಳ್ಳತನವಾಗಿದೆ. ಯಲ್ಲಾಪುರ ರಸ್ತೆಯ ಟಿಬೇಟಿಯನ್ ಕ್ಯಾಂಪ್ ಕ್ರಾಸ್ ಬಳಿ ಮೊಬೈಲ್ ಅಂಗಡಿ ಮೇಲಿನ ಸೀಟ್ ಕೊರೆದು ಕಳ್ಳರು ಒಳ ನುಗ್ಗಿದ್ದು ಬೆಲೆಬಾಳುವ ಮೊಬೈಲ್ ಗಳನ್ನು ಎಗರಿಸಿಕೊಂಡು ಹೋಗಿದ್ದಾರೆ. ಸುರೇಶ್ ಶೇಟ್ ಎಂಬುವವರಿಗೆ ಸೇರಿದ ಮೊಬೈಲ್ ಶಾಪ್ ನಲ್ಲಿ ಹತ್ತಕ್ಕೂ ಹೆಚ್ಚು ಬೆಲೆಬಾಳುವ ಮೊಬೈಲ್ ಗಳನ್ನು ಕಳ್ಳರು ಎಗರಿಸಿದ್ದಾರೆ ಎನ್ನಲಾಗಿದೆ. ಏನಿಲ್ಲವೆಂದರೂ ಈ ಮೊಬೈಲ್ ಗಳ ಮೌಲ್ಯ ಒಂದು ಲಕ್ಷ ರೂ. ಗೂ...