ಮುಂಡಗೋಡ ತಾಲೂಕಿನ ಇಂದೂರಿನ ವ್ಯಕ್ತಿಯೋರ್ವ ತಹಶೀಲ್ದಾರ್ ಹೆಸರಲ್ಲಿ ಹಣ ವಸೂಲಿ ದಂಧೆ ಶುರುವಿಟ್ಟಿದ್ದಾನೆ ಆತನಿಂದ ಸಾರ್ವಜನಿಕರು ಎಚ್ಚರದಿಂದ ಇರಿ ಅಂತಾ ತಹಶೀಲ್ದಾರ್ ಶಂಕರ್ ಗೌಡಿ ಎಚ್ಚರಿಸಿದ್ದಾರೆ.
ಇಂದೂರು ಗ್ರಾಮದ ಹಜರತ್ ಅಲಿ ಬಾಷಾಸಾಬ ಜಾತಗಾರ, ಎಂಬುವವನೇ ಸದ್ಯ ವಂಚಿಸಿರೋ ಆರೋಪ ಹೊತ್ತಿದ್ದು. ಇಂದೂರ ಗ್ರಾಮದ ಮನೆಗಳ ನಿವೇಶನ ಸಕ್ರಮ ಮಾಡುವ ಕುರಿತಾಗಿ 4 ಜನ ಸಾರ್ವಜನಿಕರಿಂದ ತಲಾಟಿ, ಕಂದಾಯ ನಿರೀಕ್ಷಕ ಮತ್ತು ತಹಶೀಲ್ದಾರ್ ಹೆಸರು ದುರುಪಯೋಗ ಮಾಡಿ, ಸುಳ್ಳು ಹೇಳಿ, ಹಣ ವಸೂಲಿ ಮಾಡಿದ್ದಾನೆ ಅಂತಾ ಖುದ್ದು ತಹಶೀಲ್ದಾರ್ ಶಂಕರ್ ಗೌಡಿ ವಾಟ್ಸಾಪ್ ಸಂದೇಶ ರವಾನಿಸಿದ್ದಾರೆ.
ಅಲ್ಲದೇ, ಸಾರ್ವಜನಿಕರಿಗೆ ಮೋಸ ಮಾಡಿ ಹಣ ತೆಗೆದುಕೊಂಡಿರೋ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಇಂದು ಪ್ರಕರಣ ದಾಖಲು ಮಾಡಲಾಗುತ್ತಿದೆ ಅಂತಾ ತಹಶೀಲ್ದಾರ್ ಮಾಹಿತಿ ನೀಡಿದ್ದು, ತಾಲೂಕಿನ ಸಾರ್ವಜನಿಕರು ನೀವು ನಿಮ್ಮ ಯಾವುದೇ ಕೆಲಸಕ್ಕೆ, ಅರ್ಜಿಗೆ ಸಂಬಂಧಿಸಿದಂತೆ ತಹಶೀಲ್ದಾರ್ ಕಚೇರಿಯಲ್ಲಿ ಮಾತ್ರ ಅರ್ಜಿ ಕೊಡಬೇಕು. ನೇರವಾಗಿ ತಹಶೀಲ್ದಾರ್ ಭೇಟಿ ಆಗಿ, ನಿಮ್ಮ ಅರ್ಜಿಗಳ ಕುರಿತು ಗಮನಕ್ಕೆ ತರಬೇಕು. ಕಂದಾಯ ಇಲಾಖೆಗೆ ಸಂಬಂಧಿಸದೇ ಇರುವ ವ್ಯಕ್ತಿಗಳ ಸುಳ್ಳು ಮಾಹಿತಿಗೆ, ಮೋಸಕ್ಕೆ ಬಲಿ ಆಗಬಾರದು ಎಂದು ವಿನಂತಿ ಮಾಡಿದ್ದಾರೆ.